ಮಗನ ಮುಖವನ್ನು ಕೊನೆಯದಾಗಿ ನೋಡುವುದಕ್ಕಾದರೂ ಅವಕಾಶ ಮಾಡಿಕೊಡಿ: ಪಾರ್ಥಿವ ಶರೀರ ಊರಿಗೆ ತರಲಾಗದ ಪುಣೆಯ ಕುಟುಂಬದ ರೋದನ

0
2816

ಸನ್ಮಾರ್ಗ ವಾರ್ತೆ

ಪುಣೆ, ಎ. 7: ಇಂಗ್ಲೆಂಡಿನಲ್ಲಿ ಕಲಿಯುತ್ತಿರುವ ಪುತ್ರ ಮೃತಪಟ್ಟಿದ್ದು ಈ ನೋವಿನ ನಡುವೆ ಮಗನ ಮುಖವನ್ನೊಮ್ಮೆ ನೋಡಲು ಸಾಧ್ಯವೇ ಎಂದು ಪುಣೆಯ ಕುಟುಂಬವೊಂದು ಪರಿತಪಿಸಿದೆ. ಲಾಕ್ ಡೌನ್ ನಿಂದಾಗಿ ವಿಮಾನ ಸರ್ವಿಸ್‍ಗಳಿಲ್ಲ. ಇಂಗ್ಲೆಂಡಿಗೆ ಹೋಗುವುದಾಗಲಿ ಅಲ್ಲಿಂದ ಮೃತದೇಹವನ್ನು ತರಿಸಿಕೊಳ್ಳುವುದಾಗಲಿ ಪುಣೆಯ ಶಂಕರ್ ಮುರ್‍ಕುಂಬಿ ಕುಟುಂಬಕ್ಕೆ ಸಾಧ್ಯವಾಗಿಲ್ಲ. ಯುಕ್ಲಾನಿನ ಸೆಂಟ್ರಲ್ ಲಾಂಕೇಶಯರ್ ವಿಶ್ವವಿದ್ಯಾಲಯದ ಮಾರ್ಕೆಟಿಂಗ್ ವಿದ್ಯಾರ್ಥಿಯಾದ ಸಿದ್ಧಾರ್ಥ ಮುರ್ಕುಂಬಿ(23) ಮಾರ್ಚ್ 15ರಂದು ಕಾಣೆಯಾಗಿದ್ದ. ನಂತರ ಈತನ ಮೃತದೇಹವನ್ನು ನದಿ ತೀರದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದರು.
ಭಾರತ ಲಾಕ್ ಡೌನ್ ಮಾಡಿ ಬೇರೆ ದೇಶಗಳಿಗೆ ವಿಮಾನ ಯಾನವನ್ನು ರದ್ದುಪಡಿಸಿದೆ. ಆದ್ದರಿಂದ ಮುರ್ಕುಂಬಿ ಕುಟುಂಬಕ್ಕೆ ಮಗನ ಮೃತದೇಹ ಪಡೆದು, ಸಂಸ್ಕಾರ ಕಾರ್ಯ ನಡೆಸುವುದು ಕಷ್ಟವಾಗಿದೆ. ಆದರೂ ಪುತ್ರ ಸಿದ್ಧಾರ್ಥನನ್ನು ಕೊನೆಯದಾಗಿ ನೋಡಬೇಕು ಅವರಿಗೆ ಅದಕ್ಕೆ ಏನಾದರೂ ದಾರಿಯಾದೀತೆಂದು ಸಿದ್ಧಾರ್ಥನ ತಂದೆ ತಾಯಿ ಕಾಯುತ್ತಿದ್ದಾರೆ. ಅಂತಿಮ ಸಂಸ್ಕಾರಕ್ಕೆ ಆಗಿ ಮೃತದೇಹವನ್ನು ಊರಿಗೆ ತರಲು ತಂದೆ ಬಯಸಿದ್ದು ಬ್ರಿಟನ್ ಸರಕಾರವನ್ನು ಅವರು ಆಗ್ರಹಿಸಿದ್ದಾರೆ. ಕೇಂದ್ರ ಸರಕಾರ ಮೃತದೇಹ ತರುವ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ತಂದೆ ಶಂಕರ್ ಮುರ್ಕುಂಬಿ ಬಯಸಿದ್ದಾರೆ.

ಇದೇವೇಳೆ ಇಂಗ್ಲೆಂಡಿನ ಪೊಲೀಸರು ವಿದ್ಯಾರ್ಥಿ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳುತ್ತಿದ್ದಾರೆ. ಅವನ ಮೃತದೇಹವನ್ನು ಅವರು ರಬ್ಬಿ ನದಿಯಲ್ಲಿ ಪತ್ತೆ ಮಾಡಿದ್ದರು. ಈಗ ಅದು ರಾಯಲ್ ಪ್ರಿಸಂಟನ್ ಆಸ್ಪತ್ರೆಯ ಶವಾಗಾರದಲ್ಲಿದೆ. ಈ ಹಿಂದೆ ಮೃತದೇಹ ಗುರುತಿಸಲು ಬನ್ನಿ ಎಂದು ಆಸ್ಪತ್ರೆಯ ಅಧಿಕಾರಿಗಳು ತಂದೆಗೆ ಪತ್ರ ಬರೆದಿದ್ರು. ಆದರೆ ಕೊರೊನಾ ಹರಡಿದ್ದರಿಂದ ಅವರಿಗೆ ಇಂಗ್ಲೆಂಡಿಗೆ ಪ್ರಯಾಣಿಸಲು ಆಗಿಲ್ಲ. ಮೃತದೇಹ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆದರೆ ಕುಟುಂಬ ಸದಸ್ಯರು ನೇರವಾಗಿ ಬರಲು ಆಗದ್ದರಿಂದ ವಾರದೊಳಗೆ ಮೃತದೇಹವನ್ನು ಪೊಲೀಸರು ದಫನಮಾಡುತ್ತಾರೆ. ತಂದೆ ಅಲ್ಲಿ ತನ್ನ ಪುತ್ರನ ಮೃತದೇಹ ಸಂಸ್ಕಾರ ಮಾಡಬಾರದು . ಹಾಗೆ ಆಗುವ ಮೊದಲು ಮೋದಿ ಸರಕಾರ ಮಧ್ಯಪ್ರವೇಶಿಸಬೇಕು. ಮೃತದೇಹದ ಅಂತಿಮ ಸಂಸ್ಕಾರಕ್ಕೆ ಊರಿಗೆ ತರಬೇಕೆಂದು ಮೃತ ವಿದ್ಯಾರ್ಥಿ ಸಿದ್ಧಾರ್ಥನ ತಂದೆ ತಾಯಿ ಅಲವತ್ತುಕೊಳ್ಳುತ್ತಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.