ಯುಪಿಯಲ್ಲಿ ಹೈಅಲರ್ಟ್; ಅಯೋಧ್ಯೆಗೆ ಬರುವ ಪ್ರತಿಯೊಬ್ಬರ ತಪಾಸಣೆ

0
349

ಸನ್ಮಾರ್ಗ ವಾರ್ತೆ

ಲಕ್ನೊ,ನ.8: ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತೀರ್ಪು ಬರಲಿದ್ದು ಅಯೋಧ್ಯೆ ನೆರಯ ಅಂಬೇಡ್ಕರ್ ನಗರದ ಕಾಲೇಜುಗಳನ್ನು ಜೈಲನ್ನಾಗಿ ಪರಿವರ್ತಿಸಲಾಗಿದೆ. ತೀರ್ಪಿನ ನಂತರ ಯಾರಾದರೂ ಅಕ್ರಮಕ್ಕಿಳಿದರೆ ಅವರನ್ನು ಇಲ್ಲಿ ಇರಿಸಲಾಗುವುದು ಮತ್ತು ಅಂಬೇಡ್ಕರ್ ನಗರ ಅಯೋಧ್ಯೆ ಮತ್ತು ಫೈಝಾಬಾದ್ ಜಿಲ್ಲೆಯ ಸಮೀಪದಲ್ಲಿದೆ. ಈಗ ಟಾಂಡಾ, ಜಲಾಲ್‍ಪುರ, ಜೈತ್ಪುರ, ಭೀಟಿ ಮತ್ತು ಅಲಾಪುರ ಠಾಣಾ ವ್ಯಾಪ್ತಿಯಲ್ಲಿ ಜೈಲುಗಳಿವೆ.

ಉತ್ತರಪ್ರದೇಶದ ಎಲ್ಲ ಜಿಲ್ಲೆಯಲ್ಲಿ ಹೈಅಲರ್ಟ್ ಜಾರಿ ಮಾಡಲಾಗಿದೆ. ಅಯೋಧ್ಯೆಯಲ್ಲಿ ಅಲ್ಲಲ್ಲಿ ಜೈಲುಗಳಿವೆ. ವದಂತಿಗಳಿಗೆ ಕಿವಿಕೊಡಬೇಡಿ ಎಂದು ಮನವಿ ಮಾಡಲಾಗುತ್ತಿದೆ. ಪ್ರಧಾನಿ ತಮ್ಮ ನಾಯಕರು,ಸಚಿವರಿಗೆ ಅಯೋಧ್ಯೆ ವಿವಾದದಲ್ಲಿ ಹೇಳಿಕೆ ನೀಡಬಾರದೆಂದು ಸಲಹೆ ಇತ್ತಿದ್ದಾರೆ.

ಹತ್ತು ಸಾವಿರಕ್ಕೂ ಹೆಚ್ಚು ವಾಟ್ಸಪ್ ಗ್ರೂಪ್‌ಗಳ ಮೇಲೆ ನಿಗಾ ಇರಿಸಲಾಗಿದೆ. ಇವರಲ್ಲಿ ಕೆಲವು ನಂಬರ್‍‌ಗಳನ್ನು ಸರ್ವಿಲೆನ್ಸ್‌ಗೆ ಪಡೆದುಕೊಳ್ಳಲಾಗಿದೆ. ಅಯೋಧ್ಯೆಯ ಎಲ್ಲ ರಸ್ತೆಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಇಲ್ಲಿಗೆ ಬರುವ ಪ್ರತಿಯೊಬ್ಬರ ತಪಾಸಣೆ ನಡೆಯುತ್ತಿದೆ. ಕೇಂದ್ರದ ಅರೆ ಸೈನಿಕರ 4000 ಜವಾನರು ನವೆಂಬರ್ ಹದಿನೆಂಟರವರೆಗೆ ಇಲ್ಲಿ ಉಳಿದುಕೊಳ್ಳಲಿದ್ದಾರೆ.