ಸಿಎಎ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥನ ಬಂಧನ

0
478

ಸನ್ಮಾರ್ಗ ವಾರ್ತೆ

ಲಕ್ನೊ,ಜೂ.30: ಉತ್ತರ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥ ಶಾನವಾಝ್ ಆಲಂರನ್ನು ಬಂಧಿಸಲಾಗಿದೆ. ಸೋಮವಾರ ಲಕ್ನೊ ಪೊಲೀಸರು ಅವರನ್ನು ಬಂಧಿಸಿದ್ದು, ಡಿಸೆಂಬರಿನಲ್ಲಿ ನಡೆದ ಸಿಎಎ ಹೋರಾಟದಲ್ಲಿ ಅವರು ಭಾಗವಹಿಸಿದ್ದಕ್ಕೆ ಅವರ ವಿರುದ್ಧ ಕ್ರಮ ಜರಗಿಸಲಾಗಿದೆ.

ಸೆಂಟ್ರಲ್ ಡಿಸಿಪಿಯವರು ಆಲಂರ ಬಂಧನವನ್ನು ದೃಢಪಡಿಸಿದ್ದಾರೆ. ಡಿಸೆಂಬರ್ 19ರ ಪ್ರತಿಭಟನೆಗಾಗಿ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಸಾಕ್ಷ್ಯವಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಅವರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿರುವ ಸಿಸಿಟಿವಿ ದೃಶ್ಯಗಳು ಹೊರ ಬಂದಿವೆ.

ಆಲಂರ ಬಂಧನ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಲಲ್ಲು ಮತ್ತು ವಿಧಾನಸಭಾ ನಾಯಕ ಆರಾಧ ಮಿಶ್ರ ಠಾಣೆಗೆ ಹೋಗಿದ್ದರು. ಠಾಣೆಯ ಮುಂದೆ ಸೇರಿದ ಜನರ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮಾಡಲಾಗಿದೆ.

ಶಾನವಾಝ್ ಆಲಂ ಹಾಗೂ ಇಬ್ಬರನ್ನು ಸೋಮವಾರ ಸಂಜೆ ಕಸ್ಟಡಿಗೆ ಪಡೆಯಲಾಗಿತ್ತು. ನಂತರ ಇತರ ಇಬ್ಬರನ್ನು ಬಿಡುಗಡೆಗೊಳಿಸಲಾಗಿದ್ದು, ಆಲಂರನ್ನು ಮಾತ್ರ ಬಂಧನದಲ್ಲಿರಿಸಲಾಗಿದೆ. ಈ ಹಿಂದೆ ಅಜಯ್ ಲಲ್ಲುರ ವಿರುದ್ಧವೂ ಸುಳ್ಳು ಕೇಸು ಹಾಕಲಾಗಿತ್ತು ಎಂದು ಉತ್ತರಪ್ರದೇಶ ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ‌ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.