ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್ ಪೇದೆ

0
1385

ನರಸಿಂಗಪುರ, ಜೂ. 28: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿದ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ. ಮಧ್ಯಪ್ರದೇಶ ನರಸಿಂಗಪುರದಲ್ಲಿ ಘಟನೆ ನಡೆದಿದೆ.

ಜೂನ್ 24ರಂದು ಆರೋಪಿ ಬಾಲಕಿಯ ಅತ್ಯಾಚಾರ ಮಾಡಿದ್ದಾನೆ. ಆರೋಪಿ ಮದ್ಯದ ಅಮಲಿನಲ್ಲಿ ದುಷ್ಕೃತ್ಯ ಎಸಗಿದನೆಂದು ಪೊಲೀಸ್ ಸುಪರಿಡೆಂಟ್ ಗುರುಕಿರಣ್ ಪತ್ರಕರ್ತರಿಗೆ ತಿಳಿಸಿದರು. ಸಾಕ್ಷ್ಯ ಸಂಗ್ರಹಿಸಲಾಗಿದ್ದು ವಿಚಾರಣೆಯನ್ನು ಕ್ಷಿಪ್ರವಿಚಾರಣಾ ನ್ಯಾಯಾಲಯದಲ್ಲಿ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.