ಬಿಜೆಪಿ ಶಾಸಕನಿಗೆ ಶೋಕಾಸ್ ನೋಟಿಸ್

0
354

ಸನ್ಮಾರ್ಗ ವಾರ್ತೆ-

ಉತ್ತರಪ್ರದೇಶ, ಡಿ. 2: ದುರ್ವರ್ತನೆ ತೋರಿದ ಪಕ್ಷದ ಶಾಸಕ ನಂದ ಕಿಶೋರ್ ಗುರ್ಜರ್ ಗೆ ಕಾರಣ ಕೇಳಿ ಬಿಜೆಪಿಯ ಉತ್ತರ ಪ್ರದೇಶ ಅಧ್ಯಕ್ಷ ಸ್ವತಂತ್ರದೇವ್ ಸಿಂಗ್ ಶೋಕಾಸ್ ನೋಟಿಸು ನೀಡಿದ್ದಾರೆ. ಗುರ್ಜರ್ ಗಾಝಿಯಾಬಾದ್ ಲೋನಿ ವಿಧಾನಸಭಾ ಕ್ಷೇತ್ರದ ಶಾಸಕರು. ಏಳು ದಿನಗಳಲ್ಲಿ ಉತ್ತರಿಸುವಂತೆ ಸ್ವತಂತ್ರದೇವ್ ಸಿಂಗ್ ಅವರು ಶಾಸಕರಿಗೆ ತಾಕೀತು ಮಾಡಿದ್ದಾರೆ.

ಇತ್ತೀಚೆಗೆ ಶಾಶಕ ಗುರ್ಜರ್ ಆಹಾರ ಸುರಕ್ಷಾ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದರು. ನಂತರ ಅವರ ವಿರುದ್ಧ ಪ್ರಥಮ ಮಾಹಿತಿ ವರದಿ ಎಫ್‍ಐಆರ್ ದಾಖಲಾಗಿತ್ತು. ಜೊತೆಗೆ ಅಧಿಕಾರಿಯನ್ನು ಶಾಸಕ ನಿಂದಿಸಿದ್ದರು ಎನ್ನಲಾಗಿದೆ. ಘಟನೆಯನ್ನು ಮುಂದಿಟ್ಟು ಅವರ ವಿರುದ್ಧ ಶೋಕಾಸು ನೋಟಿಸು ಬಿಜೆಪಿ ಜಾರಿಗೊಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕರು ತನ್ನ ಮೇಲೆ ಮಿಥ್ಯಾರೋಪ ಹೊರಿಸಲಾಗುತ್ತಿದೆ. ಪಾರ್ಟಿಯೊಳಗೆ ತನ್ನ ವಿರುದ್ಧ ಸಂಚು ಹೆಣೆಯಲಾಗುತ್ತಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಅವರು ಟಿವಿಯ ಬಿಗ್ ಬಾಸ್ ಶೋ ನಿಷೇಧಿಸಬೇಕೆಂದು ಹೇಳಿ ಸುದ್ದಿ ಮಾಡಿದ್ದರು.