ಮತಗಟ್ಟೆ ವಶ: ಹರ್ಯಾಣದಲ್ಲಿ ಪೋಲಿಂಗ್ ಅಧಿಕಾರಿ ಬಂಧನ -ವೀಡಿಯೊ

0
752

ಫರೀದಾಬಾದ್,ಮೇ 13: ಆರನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪದಲ್ಲಿ ಫರೀದಾಬಾದಿನ ಪೋಲಿಂಗ್ ಅಧಿಕಾರಿಯನ್ನು ಬಂಧಿಸಲಾಗಿದೆ. ಟ್ವಿಟರ್‍‌ನಲ್ಲಿ ಕಂಡು ಬಂದ ವೀಡಿಯೊ ಅಧಿಕಾರಿಯ ಬಂಧನಕ್ಕೆ ಸಹಕರಿಸಿದೆ. ಫರೀದಾ ಬಾದ್ ಅಸೊಟ್ಟಿ ಮತಗಟ್ಟೆಯಲ್ಲಿ ಈ ಘಟನೆ ನಡೆದಿದ್ದು, ನೀಲಿ ಟೀ ಶರ್ಟ್ ಧರಿಸಿ ಪೋಲಿಂಗ್ ಬೂತ್‍ನಲ್ಲಿ ಕೂತ ವ್ಯಕ್ತಿ ಮತದಾರರ ಮೇಲೆ ಪ್ರಭಾವ ಬೀರುತ್ತಿರುವುದು ವೀಡಿಯೊ ದೃಶ್ಯದಲ್ಲಿ ಕಂಡು ಬಂದಿದೆ. ಓರ್ವ ಮಹಿಳೆ ಮತಯಂತ್ರದ ಬಳಿಗೆ ಬಂದ ಈತ ಕುಳಿತ ಸ್ಥಾನದಿಂದ ಎದ್ದು ಮತ ಹಾಕಿ ಮರಳಿ ಬಂದ ದೃಶ್ಯ ಕಂಡು ಬಂದಿದೆ. ಮುಂದಿನ ಎರಡು ಮೂರು ಮಹಿಳೆಯರ ಮತವನ್ನು ಈತ ಈ ರೀತಿ ಹಾಕಿದ್ದಾನೆ. ಮತಗಟ್ಟೆಯ ಇತರ ಅಧಿಕಾರಿಗಳು ಈತನನ್ನು ತಡೆದಿಲ್ಲ. ಟ್ವಿಟರ್‍‌ನಲ್ಲಿ ಪ್ರಚಾರವಾಗುತ್ತಿರುವ ವೀಡಿಯೊ ಹರಿಯಾಣ ಚುನಾವಣಾ ಆಯೋಗ ಟ್ಯಾಗ್ ಮಾಡಿದೆ. ಈತ ಮತದಾರರ ಮೇಲೆ ಪ್ರಭಾವ ಬೀರಲು ಶ್ರಮಿಸಿದ್ದಾನೆ ಎಂದು ಹರಿಯಾಣ ಚುನಾವಣಾ ಆಯೋಗ ದೃಢಪಡಿಸಿದೆ. ಈತನ ವಿರುದ್ಧ ಉಚಿತ ಕ್ರಮ ಕೈಗೊಳ್ಳಲಾಗುವುದು. ಚುನಾವಣಾ ನಿರೀಕ್ಷಕರೊಂದಿಗೆ ವಿವರಗಳನ್ನು ಕೇಳಲಾಗಿದೆ. ಚುನಾವಣೆಗೆ ಇದು ಬಾಧಕವಾಗುವುದಿಲ್ಲ ಎಂದು ಆಯೋಗ ಹೇಳಿದೆ. ಮತಗಟ್ಟೆ ಅಧಿಕಾರಿಯನ್ನು ಮತಗಟ್ಟೆ ವಶ ಪ್ರಕರಣದಡಿಯಲ್ಲಿ ಬಂಧಿಸಲಾಗಿದೆ.