ಚುನಾವಣಾ ಪೂರ್ವ ಸಮೀಕ್ಷೆ: ಟ್ರಂಪ್‌ರನ್ನು ಹಿಂದಿಕ್ಕಿದ ಜೊ ಬೈಡನ್ ‌

0
210

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಅ.13: ನವೆಂಬರ್ ಮೂರರಂದು ಅಮೆರಿಕದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯ ಪೂರ್ವಭಾವಿಯಾಗಿ ನಡೆದ ಸಮೀಕ್ಷೆಯಲ್ಲಿ ಡೆಮಕ್ರಾಟಿಕ್ ಪಾರ್ಟಿ ಅಭ್ಯರ್ಥಿ ಜೊ ಬೈಡನ್ ಟ್ರಂಪ್‌ರನ್ನು ಹಿಂದಿಕ್ಕಿದ್ದಾರೆ.

ಕಳೆದ ದಿವಸ ಹೊರಬಂದ ವಾಷಿಂಗ್ಟನ್ ಪೋಸ್ಟ್/ಎಬಿಸಿ ನ್ಯೂಸ್ ಸಮೀಕ್ಷೆಯಲ್ಲಿ ಶೇ.55 ಮಂದಿ ಬೈಡನ್‍ರನ್ನು ಬೆಂಬಲಿಸಿದ್ದಾರೆ. ರಿಪಬ್ಲಿಕನ್ ಪಾರ್ಟಿಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‍ರನ್ನು ಶೇ.43ರಷ್ಟು ಮಂದಿ ಬೆಂಬಲಿಸಿದ್ದಾರೆ. ಸಿಎನ್‍ಎನ್, ಫ್ಯಾಕ್ಸ್ ನ್ಯೂಸ್ ಸಮೀಕ್ಷೆಯಲ್ಲಿ ಟ್ರಂಪ್‍ರಿಗಿಂತ ಬೈಡನ್ ಶೇ.10ರಷ್ಟು ಹೆಚ್ಚು ಮುನ್ನಡೆ ಸಾಧಿಸಿದ್ದಾರೆ.

19336ರಲ್ಲಿ ವೈಜ್ಞಾನಿಕ ಸಮೀಕ್ಷೆಗಳು ಅಸ್ತಿತ್ವಕ್ಕೆ ಬಂದ ಮೇಲೆ ಎಲ್ಲ ಅಭ್ಯರ್ಥಿಗಳಿಗಿಂತ ಉತ್ತಮ ಬೆಂಬಲವನ್ನು ಬೈಡನ್ ಸಾಧಿಸಿದ್ದಾರೆ ಎಂದು ಸಿಎನ್‍ಎನ್ ತಿಳಿಸಿದೆ. ಸರಾಸರಿ 52-53 ಶೇಕಡ ಬೆಂಬಲ ಪಡೆದುಕೊಂಡಿರುವ ಬೈಡನ್ ಶೇ.10-11ರಷ್ಟು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

1936ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷರೆಂದು ಸ್ಪರ್ಧಿಸಿದ ಒಟ್ಟು ಐದು ಅಭ್ಯರ್ಥಿಗಳು ಸಮೀಕ್ಷೆಯಲ್ಲಿ ಮುಂದಿದ್ದರು. 1992ರಲ್ಲಿ ಜಾರ್ಜ್ ಬುಶ್ ವಿರುದ್ಧ ಸ್ಪರ್ಧಿಸಿದ್ದ ಬಿಲ್ ಕ್ಲಿಂಟನ್ ಮಾತ್ರ ಶೇ.5ರಷ್ಟು ಮತಗಳ ಬಹುಮತ ಸಾಧಿಸಿದ್ದರು. ಈಗಿನ ಪರಿಸ್ಥಿತಿಯಲ್ಲಿ ಟ್ರಂಪ್ ಪುನಃ ಅದ್ಭುತಗಳನ್ನು ಸಾಧಿಸಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. 2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್‍ರಿಗಿಂತ ಶೇ.7ರಷ್ಟು ಹಿಂದಿದ್ದ ಟ್ರಂಪ್ ನಂತರ ಮುನ್ನಡೆ ಸಾಧಿಸಿದ್ದರು.

LEAVE A REPLY

Please enter your comment!
Please enter your name here