ಕನ್ಯಾಕುಮಾರಿ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಪೊನ್ ರಾಧಕೃಷ್ಣನ್, ಕಾಂಗ್ರೆಸ್ ನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲು ಬೇಡಿಕೆ

0
237

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕನ್ಯಾಕುಮಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಬಿಜೆಪಿ ಅಭ್ಯರ್ಥಿಯೆಂದು ಶನಿವಾರ ಬಿಜೆಪಿ ಘೋಷಿಸಿದೆ. ಇದೇ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ಕನ್ಯಾಕುಮಾರಿಯಿಂದ ಸ್ಪರ್ಧಿಸಬೇಕೆಂದು ಸಂಸದ ಕಾರ್ತಿ ಚಿದಂಬರಂ ಚುನಾವಣಾ ಸಮಿತಿಗೆ ಮನವಿ ಸಲ್ಲಿಸಿದ್ದಾರೆ.

ಕನ್ಯಾಕುಮಾರಿ ಲೋಕಸಭಾ ಸಂಸದ ಎಚ್. ವಸಂತ ಕುಮಾರ್ ಕಳೆದ ವರ್ಷ ಕೊರೊನದಿಂದ ನಿಧನರಾಗಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. 1996 ಮತ್ತು 2014ರಲ್ಲಿ ರಾಧಾಕೃಷ್ಣನ್ ಲೋಕಸಭೆ ಚುನಾವಣೆಯಲ್ಲಿ ಇಲ್ಲಿಂದ ಗೆದ್ದಿದ್ದರು. ಆದರೆ 2019 ಲೋಕಸಭಾಚುನಾವಣೆಯಲ್ಲಿ ಪೊನ್ ರಾಧಾಕೃಷ್ಣನ್‍ರನ್ನು ಕಾಂಗ್ರೆಸ್‍ನ ಎಚ್. ವಸಂತ್‍ಕುಮಾರ್ ಸೋಲಿಸಿದ್ದರು. 199 ಮತ್ತು 2014ನ್ನು ಹೊರತುಪಡಿಸಿದರೆ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಎಪ್ರಿಲ್ ನಲ್ಲಿ ಆರಂಭವಾಗುವ ವಿಧಾನಸಭಾ ಚುನಾವಣೆಯಲ್ಲಿ ಮಿತ್ರ ಪಕ್ಷವಾದ ಬಿಜೆಪಿಗೆ ಎಐಡಿಎಂಕೆ 20 ಸೀಟುಗಳನ್ನು ನೀಡಿದೆ.