ಮೊತ್ತ ಮೊದಲ ಆಫ್ರೊ-ಅಮೆರಿಕನ್ ಕಾರ್ಡಿನಲ್‌ರನ್ನು ನೇಮಕಗೊಳಿಸಿದ ಪೋಪ್ ಪ್ರಾನ್ಸಿಸ್

0
89

ಸನ್ಮಾರ್ಗ ವಾರ್ತೆ

ವ್ಯಾಟಿಕನ್ ಸಿಟಿ,ನ.30: ಆಫ್ರೊ-ಅಮೆರಿಕನ್ ವಂಶದವರ ಸಹಿತ 13 ಕಾರ್ಡಿನಾಲ್‍ಗಳನ್ನು ಪೋಪ್ ಫ್ರಾನ್ಸಿಸ್ ನೇಮಕಗೊಳಿಸಿದ್ದಾರೆ. ಅಮೆರಿಕದ ವಾಷಿಂಗ್ಟನ್ ಡಿಸಿಯ ವಾಲ್ಟನ್ ಗ್ರಿಗರಿಯವರು ಕಪ್ಪು ವರ್ಗದ ಪ್ರಥಮ ಕಾರ್ಡಿನಲ್ ಆಗಿದ್ದಾರೆ.

ಇದೇ ಮೊದಲ ಸಲ ಒಬ್ಬ ಕಪ್ಪು ವರ್ಗದ ವ್ಯಕ್ತಿ ಉನ್ನತ ಪದವಿಗೆ ನೇಮಕಗೊಂಡಿದ್ದಾರೆ. ಪೋಪ್‍ರ ನಂತರ ಕ್ರೈಸ್ತ ಸಭೆಯ ಅತ್ಯಂತ ದೊಡ್ಡ ಸ್ಥಾನಮಾನ ಕಾರ್ಡಿನಲ್ ಆಗಿದೆ. ಕೊರೋನದಿಂದಾಗಿ ವ್ಯಾಟಿಕನ್‍ನಲ್ಲಿ ಸರಳ ಕಾರ್ಯಕ್ರಮದಲ್ಲಿ ನೇಮಕಾತಿ ಕಾರ್ಯಕ್ರಮ ಏರ್ಪಾಡು ಮಾಡಲಾಗಿತ್ತು. ಹದಿಮೂರು ಮಂದಿ ಕಾರ್ಡಿನಲ್‍ಗಳಲ್ಲಿ ಒಬ್ಬತ್ತು ಮಂದಿ 80 ವರ್ಷಕ್ಕಿಂತ ಕೆಳಗಿನ ವಯೋಮಾನದವರಾಗಿದ್ದಾರೆ.