ಪ್ರಣಬ್ ಮುಖರ್ಜಿ ಹೃದಯ ಬಡಿತದಲ್ಲಿ ಚೇತರಿಕೆ

0
133

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.13: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ವೆಂಟಿಲೇಟರ್‌ನಲ್ಲಿದ್ದಾರೆ. ಅವರ ಹೃದಯ ಬಡಿತದಲ್ಲಿ ಚೇತರಿಕೆಯಾಗಿದ್ದು ರಕ್ತ ಸಂಚಲನೆ ಸಾಮಾನ್ಯ ಸ್ಥಿತಿಗೆ ಬಂದಿದೆ ಎಂದು ಪುತ್ರ ಅಭಿಜಿತ್ ಮುಖರ್ಜಿ ತಿಳಿಸಿದ್ದಾರೆ.

ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಅವರ ಆರೋಗ್ಯ ಗಂಭೀರವಾಗಿತ್ತು. ಹೆಪ್ಪುಗಟ್ಟಿದ ರಕ್ತ ತೆಗೆಯಲು ಶಸ್ತ್ರಕ್ರಿಯೆಯು ನಡೆದಿತ್ತು. ಇದೇ ವೇಳೆ ಕೊರೋನ ಪರೀಕ್ಷೆಗೂ ಗುರಿಪಡಿಸಲಾಗಿತ್ತು. ಅದು ಪಾಸಿಟಿವ್ ಬಂದಿತ್ತು.

ತಂದೆಗಾಗಿ ಪ್ರಾರ್ಥಿಸಲು ಎಲ್ಲರಲ್ಲೂ ಅಭಿಜಿತ್ ಮನವಿ ಮಾಡಿದ್ದಾರೆ. ದಿಲ್ಲಿಯ ಆರ್ಮಿ ರಿಸರ್ಚ್ ಆಸ್ಪತ್ರೆಯಲ್ಲಿ ಪ್ರಣವ್ ಮುಖರ್ಜಿ ಚಿಕಿತ್ಸೆ ಪಡೆಯುತ್ತಿದ್ದು, ಆಗಸ್ಟ್ 10 ರಂದು ಆಸ್ಪತ್ರೆಗೆ ದಾಖಲಾಗಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.