ಕೇಂದ್ರ ಸರಕಾರದ ಕೆಂಗಣ್ಣಿಗೆ ಗುರಿಯಾದ ಪಿಟಿಐ: ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಜೊತೆಗೆ ಸಂಬಂಧ ಕಡಿದುಕೊಂಡ ಪ್ರಸಾರ್ ಭಾರತಿ

0
342

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.19: ಪ್ರಮುಖ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(ಪಿಟಿಐ) ವಾರ್ತೆಗಳು ಇನ್ನು ನಮಗೆ ಬೇಡ ಎಂದು ಕೇಂದ್ರ ಸರಕಾದ ಪ್ರಸಾರ ಭಾರತಿ ಹೇಳಿದೆ.

ಸಬ್ಸ್ಕ್ರಿಪ್ಶನ್ ನಿಲ್ಲಿಸಿ ಎಂಬುದಾಗಿ ಪ್ರಸಾರ ಭಾರತಿ ಪಿಟಿಐಗೆ ಪತ್ರ ಬರೆದಿದೆ. ಪಿಟಿಐ ದೇಶ ವಿರೋಧಿ ನಿಲುವು ತಳೆಯುತ್ತಿದೆ ಎಂದು ಪ್ರಸಾರ್ ಭಾರತಿ ಈ ಹಿಂದೆ ಪತ್ರ ಬರೆದಿತ್ತು. ಪಿಟಿಐಯ ಸ್ವತಂತ್ರ ನಿಲುವುಗಳು ಕೇಂದ್ರ ಸರಕಾರ ಮತ್ತು ಪ್ರಸಾರ ಭಾರತಿಯ ಕೋಪಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ದೇಶದ ಸುದ್ದಿ ಸಂಸ್ಥೆಗಳಿಂದ ಹೊಸ ಪ್ರಸ್ತಾವವನ್ನು ಆಹ್ವಾನಿಸಲು ಪ್ರಸಾರ ಭಾರತಿ ತೀರ್ಮಾನಿಸಿದೆ. ಪಿಟಿಐಯೂ ಇದರಲ್ಲಿ ಭಾಗವಹಿಸಬಹುದು ಎಂದು ಪ್ರಸಾರ್ ಭಾರತಿ ವಾರ್ತಾ ವಿಭಾಗ ಮುಖ್ಯಸ್ಥ ಸಮೀರ್ ಕುಮಾರ್ ಪತ್ರ ಬರೆದಿದ್ದಾರೆ. ಪಿಟಿಐಯ ಪ್ರಧಾನ ವರಮಾನ ಮೂಲಗಳಲ್ಲಿ ಪ್ರಸಾರ ಭಾರತಿ ಕೂಡ ಒಂದು. 6.85 ಕೋಟಿ ರೂಪಾಯಿ ಪ್ರಸಾರ ಭಾರತಿಯಿಂದ ಪಿಟಿಐಗೆ ಲಭಿಸುತ್ತಿದೆ.

ಪಿಟಿಐ ದೇಶ ವಿರೋಧಿ ವಾರ್ತೆಗಳನ್ನು ನೀಡುತ್ತಿದೆ ಎಂದು ಕಳೆದ ಜೂನ್‍ನಲ್ಲಿ ಪ್ರಸಾರ ಭಾರತಿಯ ಉನ್ನತ ಅಧಿಕಾರಿಗಳು ಆರೋಪಿಸಿದ್ದರು. ಲಡಾಕ್ ಘರ್ಷಣೆಯ ಹಿನ್ನೆಲೆಯಲ್ಲಿ ಈ ಟೀಕೆ ಮಾಡಲಾಗಿತ್ತು. ದೇಶದ ಹಿತಕ್ಕೆ ವಿರುದ್ಧ ಮತ್ತು ಭಾರತದ ಪ್ರಾದೇಶಿಕ ಸಮಗ್ರತೆಯನ್ನು ದುರ್ಬಲಗೊಳಿಸುವ ವಾರ್ತೆಗಳನ್ನು ಅದು ನೀಡುತ್ತಿದೆ ಎಂದು ಪ್ರಸಾರ ಭಾರತಿ ಪಿಟಿಐಎ ಪತ್ರ ಬರೆದಿತ್ತು.

ಗಲ್ವಾನ್‍ನ ಭಾರತ-ಚೀನ ಘರ್ಷಣೆಯ ಹಿನ್ನೆಲೆಯಲ್ಲಿ ಭಾರತದ ಚೀನದ ರಾಯಭಾರಿಯನ್ನು ಪಿಟಿಐ ಸಂದರ್ಶಿಸಿತ್ತು. ಪಿಟಿಐ ವರದಿ ದೇಶ ವಿರೋಧಿ ಎಂದು ಅಂದು ಪ್ರಸಾರ ಭಾರತಿ ಅಧಿಕಾರಿಗಳು ಹೇಳಿದ್ದರು. ಚೀನದ ರಾಯಭಾರಿಯ ಸಂದರ್ಶನ ಅತೃಪ್ತಿ. ಚೀನದ ರಾಯಭಾರಿಯ ಹೇಳಿಕೆ ಗಲ್ವಾನ್ ಘರ್ಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಹೇಳಿಕೆಯೊಂದಿಗೆ ಹೋಲಿಕೆಯಾಗದ್ದು ಕೇಂದ್ರ ಸರಕಾರದ ಕೋಪಕ್ಕೆ ಕಾರಣವಾಗಿತ್ತು. ಭಾರತದ ಒಂದಿಂಚೂ ಭೂಮಿಯನ್ನೂ ಚೀನ ಅತಿಕ್ರಮಿಸಿಲ್ಲ ಎಂದು ಮೋದಿ ಹೇಳಿದ್ದರು.