ಮೋದಿ ಬೆಂಬಲಿಗರ ಕೈಕುಲುಕಿ ಅಭಿನಂದಿಸಿದ ಪ್ರಿಯಾಂಕಾ ಗಾಂಧಿ- ವೀಡಿಯೊ ವೈರಲ್

0
572

ಹೊಸದಿಲ್ಲಿ,ಮೇ 14: ಬಿಜೆಪಿ ಬೆಂಬಲಿಗರನ್ನೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಚ್ಚರಿಯಲ್ಲಿ ಕೆಡಿವಿದ್ದಾರೆ. ಇಂಧೋರ್‌ನ ರೋಡ್ ಶೋ ವೇಳೆ ಮೋದಿ ಬೆಂಬಲಿಗರು ‘ಮೋದಿ ಮೋದಿ’ ಎಂದು ಕೂಗಿದರು. ಅಲ್ಲಿಯೇ ಕಾರಿನಿಂದಿಳಿದು ಪ್ರಿಯಾಂಕ ಅವರ ಬಳಿಗೆ ಹೋಗಿ ಕೈಕುಲುಕಿ ಶುಭಾಶಯ ಕೋರಿದರು. ಬಿಜೆಪಿ ಬೆಂಬಲಿಗರ ಹತ್ತಿರ ನಗುನಗುತ್ತಾ ಬಂದ ಪ್ರಿಯಾಂಕ ಎಲ್ಲರಿಗೂ ಹಸ್ತದಾನ ಮಾಡಿದರು. ನಿಮಗೆ ನಿಮ್ಮ ದಾರಿ. ನನಗೆ ನನ್ನ ದಾರಿ. ಎಲ್ಲರಿಗೂ ಶುಭಾಶಯಗಳು ಎಂದು ಪ್ರಿಯಾಂಕ ಹೇಳಿದರು. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.