ಮೋದಿ ಪ್ರಧಾನಿಯಾಗುವುದಕ್ಕಿಂತ ಅಮಿತಾಬ್ ಬಚ್ಚನ್ ಪ್ರಧಾನಿಗುವುದು ಉತ್ತಮ- ಪ್ರಿಯಾಂಕಾ ಗಾಂಧಿ

0
212

ಹೊಸದಿಲ್ಲಿ,ಮೇ 17: ನರೇಂದ್ರ ಮೋದಿಗಿಂತ ಅಮಿತಾಬ್ ಬಚ್ಚನ್ ಪ್ರಧಾನಿಯಾಗುವುದು ಉತ್ತಮವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು. ಉತ್ತರ ಪ್ರದೇಶದ ಮಿರ್ಝಾಪುರ್‍‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತಾಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ದೊಡ್ಡ ನಟನಾಗಿದ್ದಾರೆ ಎಂದೂ ಪ್ರಿಯಾಂಕಾ ಹೇಳಿದರು. ಉತ್ತರ ಪ್ರದೇಶ ಸಹಿತ ನಿರ್ಣಾಯಕವೆನಿಸಿದ ರಾಜ್ಯಗಳಲ್ಲಿ ಹತ್ತೊಂಬತ್ತನೆ ತಾರೀಕಿಗೆ ಮತದಾನ ನಡೆಯಲಿದೆ. ಇದಕ್ಕಿಂತ ಮುಂಚಿತವಾಗಿ ಪ್ರಿಯಾಂಕಾರ ಹೇಳಿಕೆ ಬಂದಿದೆ. ಶುಕ್ರವಾರ ಚುನಾವಣಾ ಪ್ರಚಾರದ ಕೊನೆಯ ದಿವಸವಾಗಿದ್ದು ಉತ್ತರಪ್ರದೇಶದ ಕಾಂಗ್ರೆಸ್ ರ್ಯಾಲಿಯಲ್ಲಿ ಪ್ರಿಯಾಂಕಾ ಭಾಗವಹಿಸುತ್ತಿದ್ದಾರೆ.