ಪ್ರಿಯಾಂಕ ಗಾಂಧಿ ಹೇಳಿಕೆ: ಕಾಂಗ್ರೆಸ್‍ನೊಂದಿಗೆ ಚರ್ಚಿಸುತ್ತೇವೆ- ಮುಸ್ಲಿಂ ಲೀಗ್

0
910

ಸನ್ಮಾರ್ಗ ವಾರ್ತೆ

ಕೊಝಿಕ್ಕೋಡ್,ಆ.5: ರಾಮಂದಿರಕ್ಕೆ ಶುಭಾಶಯ ಕೋರಿದ ಪ್ರಿಯಾಂಕಾ ಗಾಂಧಿಯ ಹೇಳಿಕೆಯ ವಿಷಯದಲ್ಲಿ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ ಎಂದು ಮುಸ್ಲಿಂ ಲೀಗ್ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿಕೆ. ಕುಂಞಾಲಿಕುಟ್ಟಿ ಹೇಳಿದರು.

ಹೆಚ್ಚು ಅಭಿಪ್ರಾಯ ಹೇಳಿ ಹೊಸ ಚರ್ಚೆಗೆ ಅವಕಾಶ ಒದಗಿಸುವುದಿಲ್ಲ. ಮಂದಿರ ನಿರ್ಮಾಣ ಮಂದಿರದ ಟ್ರಸ್ಟ್ ನಿರ್ವಹಿಸಲಿ ಎಂಬ ಸಿಪಿಎಂ ನಿಲುವು ಚರ್ಚಿಸಬೇಕಾಗಿ ಬರಬಹುದು. ಈಗ ಸಮಸ್ಯೆ ಪ್ರಿಯಾಂಕರ ಹೇಳಿಕೆ ಮಾತ್ರವಾಗಿದೆ. ಜೊತೆಗೆ ಅಸಹಮತ ಸೂಚಿಸಿ ಸ್ಪಷ್ಟವಾಗಿ ಕಾಂಗ್ರೆಸ್ ನಾಯಕತ್ವದೊಂದಿಗೆ ಚರ್ಚಿಸಲಾಗುವುದು ಎಂದು ಪಿಕೆ ಕುಂಞಾಲಿಕುಟ್ಟಿ ಹೇಳಿದರು.

ಮುಸ್ಲಿಂ ಲೀಗ್‍ನ ನಿಲುವು ಕೋರ್ಟಿನ ತೀರ್ಪು ಒಪ್ಪುವುದು. ದೇಶದಲ್ಲಿ ಪುನಃ ಈ ವಿಷಯವನ್ನು ಎತ್ತಿ ತಂದು ವಿವಾದ ಉಂಟು ಮಾಡಲು ಮುಸ್ಲಿಂ ಲೀಗ್‍ಗೆ ಆಸಕ್ತಿಯಿಲ್ಲ. ಕೋರ್ಟು ತೀರ್ಪಿನೊಂದಿಗೆ ಇದೊಂದು ಮುಚ್ಚಿದ ಅಧ್ಯಾಯವಾಗಿದೆ. ಪುನಃ ಚರ್ಚಿಸಿ ಕೋಮು ವಿಭಜನೆಯುಂಟು ಮಾಡಲು ಲೀಗ್ ಬಯಸುವುದಿಲ್ಲ ಮುಹಮ್ಮದ್ ಬಶೀರ್ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.