ಆನ್ ಲೈನ್ ಶಾಪಿಂಗ್ ಗೆ ಪಬ್ಲಿಕ್ ವೈಫೈ ಬಳಸುವುದು ಸುರಕ್ಷಿತವಲ್ಲ: ಅಬುಧಾಬಿ ಡಿಜಿಟಲ್ ಅಥಾರಿಟಿ ಎಚ್ಚರಿಕೆ

0
8303

ಸನ್ಮಾರ್ಗ ವಾರ್ತೆ

ಅಬುಧಾಬಿ: ಸಾರ್ವಜನಿಕವಾಗಿ ದೊರೆಯುವ ವೈ-ಫೈ ಮೂಲಕ ಆನ್ ಲೈನ್ ಶಾಪಿಂಗ್ ನಡೆಸುವುದು ಹ್ಯಾಕಿಂಗ್ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಸೈಬರ್ ಆಕ್ರಮಣಕ್ಕೆ ಅದು ತುತ್ತಾಗಿಸುವುದಕ್ಕೆ ಸಾಧ್ಯತೆಯಿದೆ. ಆದ್ದರಿಂದ ವರ್ಚುವಲ್ ಪ್ರೈವೇಟ್ ನೆಟ್ವರ್ಕ್ ಉಪಯೋಗಿಸಬೇಕು ಎಂದು ಅಬುಧಾಬಿಯ ಡಿಜಿಟಲ್ ಅಥಾರಿಟಿಯು ಮುನ್ನೆಚ್ಚರಿಕೆ ನೀಡಿದೆ. ಈ ಮುನ್ನೆಚರಿಕೆಗೆ ಅಧಿಕಾರಿಗಳು ಕಾರಣವನ್ನೂ ನೀಡಿದ್ದಾರೆ.

ತಮ್ಮದೇ ಮೊಬೈಲಿನ ಇಂಟರ್ನೆಟ್ ಉಪಯೋಗಿಸುವುದರ ಹೊರತಾಗಿ ಸಾರ್ವಜನಿಕವಾಗಿರುವ ವೈಫೈ ಸೌಲಭ್ಯವನ್ನು ಆನ್ ಲೈನ್ ಶಾಪಿಂಗ್ ಗಾಗಿ ಉಪಯೋಗಿಸುವುದು ಸುರಕ್ಷಿತವಲ್ಲ ಎಂದು ಸಾರ್ವಜನಿಕರಿಗೆ ಅದು ತಿಳಿ ಹೇಳಿದೆ.

ಹಾಗೆಯೇ ಡಿಜಿಟಲ್ ಶಾಪಿಂಗ್ ಸೈಟುಗಳು ವಿಶ್ವಾಸಾರ್ಹ ಮತ್ತು ಸುರಕ್ಷಿತ ಎಂಬುದನ್ನು ಖಾತರಿಪಡಿಸಬೇಕು ಎಂದು ಶಾಪ್ ಗಳಿಗೆ ತಿಳಿ ಹೇಳಲಾಗಿದೆ.

ವೆಬ್ ಸೈಟ್ ವಿಳಾಸದ ಆರಂಭದಲ್ಲಿ https ಇದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಇದಕ್ಕಿರುವ ಸುಲಭ ದಾರಿ ಎಂದು ಅಥೋರಿಟಿ ಹೇಳಿದೆ. Http ಬಳಿಕ s ಕಾಣಿಸುವುದಿಲ್ಲವಾದರೆ ಇದರ ಅರ್ಥ ಸೈಟ್ ಎನ್ಸ್ಕ್ರಿಫ್ಟ್ ಮಾಡಿಲ್ಲ ಎಂದಾಗಿದೆ. ಇದು ಗ್ರಾಹಕರ ಡಾಟಾ ಸುರಕ್ಷಿತವಾಗಿಲ್ಲ ಎಂಬುದರ ಸೂಚನೆಯಾಗಿದೆ ಎಂದು ಅಬುದಾಭಿ ಡಿಜಿಟಲ್ ಅಥಾರಿಟಿಯ ಅಧಿಕಾರಿಗಳು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.