ಪುಲ್ವಾಮ: ಭಯೋತ್ಪಾದಕ ದಾಳಿಯ ಬಗ್ಗೆ ಮುನ್ಸೂಚನೆ ನೀಡಿದ್ದ ಪಾಕ್, ಅಮೇರಿಕ

0
466

ಶ್ರೀನಗರ, ಜೂ..18: ಕಾಶ್ಮೀರದ ಪೂಲ್ವಾಮ ಜಿಲ್ಲೆಯಲ್ಲಿ ಸೈನಿಕರ ವಾಹನಕ್ಕೆ ಗುರಿಯಿಟ್ಟು ಭಯೋತ್ಪಾದಕರು ಸೋಮವಾರ ನಡೆಸಿದ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಸೈನಿಕರು ವೀರಮೃತ್ಯುವಿಗೆ ಶರಣಾಗಿದ್ದಾರೆ. ಗಾಯಾಳುಗಳಾದ ಆರು ಮಂದಿ ಸೈನಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಗ್ರಾಮಸ್ಥರು ಕೂಡ ಭಯೋತ್ಪಾದಕರ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಬೇರೊಂದು ವಾಹನದಲ್ಲಿ ಇರಿಸಿದ್ದ ಸ್ಫೋಟಕವಸ್ತು ಸ್ಫೋಟಗೊಂಡು ಸೈನಿಕರ ವಾಹನಕ್ಕೆ ಭಾರೀ ಹಾನಿಯಾಗಿತ್ತು.

ಕಳೆದ ಫೆಬ್ರುವರಿಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 40 ಮಂದಿ ಸಿ ಆರ್ ಪಿ ಎಫ್ ಯೋಧರು ವೀರಮೃತ್ಯುವನ್ನಪ್ಪಿದ್ದರು. ಜಮ್ಮು ಶ್ರೀನಗರ ಹೆದ್ದಾರಿಯಲ್ಲಿ ಸಂಚರಿಸಿದ ಸೈನಿಕರ ವಾಹನದ ಮೇಲೆ ದಾಳಿ ನಡೆದಿತ್ತು. ಇಲ್ಲಿಂದ 27 ಕಿಲೊಮೀಟರ್ ದೂರದಲ್ಲಿ ಸೋಮವಾರ ಸ್ಫೋಟ ಸಂಭವಿಸಿತ್ತು. ಪೂಲ್ವಾಮ ಜಿಲ್ಲೆಯ ಅವಂತಿಪುರ ನಗರದಲ್ಲಿ ಭಯೋತ್ಪಾದನಾ ದಾಳಿ ನಡೆಯಬಹುದು ಎಂದು ಕಳೆದ ದಿವಸ ಪಾಕಿಸ್ತಾನ ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿತ್ತು. ಪಾಕಿಸ್ತಾನವು ಇಸ್ಲಾಮಾಬಾದಿನ ಭಾರತ ದೂತವಾಸಕ್ಕೆ ಈ ವಿವರ ನೀಡಿತ್ತು. ಅಮೆರಿಕದ ಗುಪ್ತಚರ ಸಂಸ್ಥೆ ಕೂಡ ಇದೇ ರೀತಿಯ ಮುನ್ನೆಚ್ಚರಿಕೆ ಹೊರಡಿಸಿತ್ತು.