ಹೆತ್ತವರು ಕೂಡಿಟ್ಟ 16 ಲಕ್ಷ ರೂ. ಪಬ್‌ಜಿ ಗೇಮ್ ಆಡಿ ಮುಗಿಸಿದ ಮಗ

0
782

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.4: ಪಬ್‍ಜಿ ಆಡಿದ ಹದಿನೇಳು ವರ್ಷದ ಯುವಕನಿಗೆ 16 ಲಕ್ಷ ರೂಪಾಯಿ ನಷ್ಟವಾಗಿದೆ. ಆಪ್‍ನೊಳಗೆ ವಿವಿಧ ವಸ್ತುಗಳನ್ನು ಖರೀದಿಸುವುದಕ್ಕಾಗಿ ಇಷ್ಟು ಹಣ ಹಾಕಿದ್ದಾನೆ. ಗೇಮ್ ಕಾಸ್ಮೆಟಿಕ್ ವಸ್ತುಗಳು, ಫಿರಂಗಿಗಳು, ಟೂರ್ಮೆಂಟ್ ಪಾಸ್‍ಗಳು, ಕೋವಿಗಳನ್ನು ಆತ ಗೇಮ್ ಆಡಲು ಖರೀದಿಸಿದ್ದಾನೆ. ತಂದೆಯ ಆಸ್ಪತ್ರೆಯ ವೆಚ್ಚಕ್ಕಾಗಿ ಹಾಗೂ ಭವಿಷ್ಯಕ್ಕಾಗಿ ತೆಗೆದಿರಿಸಿದ್ದ ಹಣವನ್ನು ಪಂಜಾಬಿನ ಖಾರ್ ಸ್ವದೇಶಿಯಾದ ಹದಿನೇಳು ವರ್ಷದ ಯುವಕ ಹೀಗೆ ಪೋಲು ಮಾಡಿದ್ದಾನೆ.

ಲಾಕ್‍ಡೌನ್‍ನಲ್ಲಿ ಆನ್‍ಲೈನ್ ಕಲಿಕೆಗೆ ಮೊಬೈಲ್ ತೆಗೆದು ಕೊಟ್ಟಿದ್ದರು. ಫೋನ್‍ನಲ್ಲಿ ತಂದೆಯ ಬ್ಯಾಂಕ್ ಅಕೌಂಟಿತ್ತು. ಇದು ಉಪಯೋಗಿಸಿ ಎಲ್ಲ ಖರೀದಿಸಿಬಿಟ್ಟಿದ್ದಾನೆ ನಿಸ್ಸೀಮ. ಒಂದು ತಿಂಗಳಲ್ಲಿ ಇನ್ ಗೇಂ ಟ್ರಾನ್ಸ್ಯಾಕ್ಷನ್‍ನಲ್ಲಿ ಇಷ್ಟು ಹಣ ಹೋಗಿದೆ. ಬ್ಯಾಂಕಿನಿಂದ ಹಣ ವಾಪಾಸು ಪಡೆದಾಗ ಮೊಬೈಲ್‍ಗೆ ಬಂದ ಮೆಸೆಜುಗಳನು ಆತ ಡಿಲೀಟ್ ಮಾಡಿದ್ದ.

ಅಮ್ಮನ ಬ್ಯಾಂಕ್ ಉಳಿತಾಯವನ್ನೂ ಇದಕ್ಕೆ ಉಪಯೋಗಿಸಿದ್ದಾನೆ. ನಂತರ ಅಕೌಂಟಿನಲ್ಲಿ ಝೀರೋ ಬ್ಯಾಲೆನ್ಸ್ ಆದಾಗ ಹೆತ್ತವರಿಗೆ ಅದು ತಿಳಿದು ಬಂದಿದೆ.

ಘಟನೆಯ ನಂತರ ಬಾಲಕನನ್ನು ಹೆತ್ತವರು ಸ್ಕೂಟರ್ ರಿಪೇರಿ ಕೆಲಸಕ್ಕೆ ಹಾಕಿದ್ದಾರೆ. ಅವನು ಸುಖವಾಗಿ ಮನೆಯಲ್ಲಿರಲು ಬಿಡಲಾರೆ. ಆದ್ದರಿಂದ ಸ್ಕೂಟರ್ ರಿಪೇರಿಗೆ ಅಂಗಡಿಗೆ ಹಾಕಿದ್ದೇನೆ. ಹಣ ಗಳಿಸುವುದು ಎಷ್ಟು ಕಷ್ಟ ಎಂಬುದನ್ನು ಅವನೂ ಅರಿಯಲಿ. ಮಗನ ಭವಿಷ್ಯಕ್ಕಾಗಿ ತೆಗೆದಿಟ್ಟ ಹಣ ಅದು ಗೇಮ್ ಆಡಿ ಕಳೆದ. ಇನ್ನೇನು ಆಗುತ್ತದೆ ಎಂದು ನನಗೆ ಗೊತ್ತಿಲ್ಲ ಎಂದು ಯುವಕ ತಂದೆ ಹೇಳಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.