ಉಪವಾಸ ತೆರೆಯಲು ಬಂದರೆ ಅದೃಷ್ಟ ಬಹುಮಾನ: ಕತರ್ ಶೇಖ್‍ರ ಮಸೀದಿಯಲ್ಲಿ ದಿನಾಲೂ ಇದು ವಿಶೇಷ

0
2619

ದೋಹ,ಮೇ 15: ಈ ಮಸೀದಿಗೆ ಉಪವಾಸ ತೆರೆಯಲು ಬಂದರೆ ಕಾರು, ಮೊಬೈಲು ಸಹಿತ ದಿನಾಲೂ ಒಂದಲ್ಲ ಒಂದು ಬಹುಮಾನ ನೀಡಲಾಗುತ್ತದೆ. ರಮಝಾನ್ ತಿಂಗಳ ಎಲ್ಲ ದಿನಗಳಲ್ಲಿಯೂ ಇಲ್ಲಿ ಉಡುಗೊರೆ, ಬಹುಮಾನಗಳು ಸಿಗಲಿದೆ. ಕತರ್‍‌ನ ಅಲ್‍ವಾಬ್ ಸ್ಟ್ರೀಟ್‍ನ ಶೇಖ್ ಹಮದ್ ಬಿನ್ ಅಬ್ದುಲ್ಲ ಬಿಜ್‍ಜಾಸಿಂ ಅಲ್‍ಥಾನಿಯವರ ಕುಟುಂಬ ಮಸೀದಿ ಇದು. ಈ ಬಾರಿಯೂ ಇಲ್ಲಿ ಉಪವಾಸ ತೊರೆಯುವ ಭಕ್ತರಿಗೆ ಆಫರ್‍‌ಗಳು ಕಾದಿವೆ. ಅಲ್‍ಥಾನಿಯವರ ಮಕ್ಕಳು ಸುಹೈಂ, ನಾಸರ್ ಈ ಕೊಡುಗೆಗಳಿಗೆ ನೇತೃತ್ವ ನೀಡುತ್ತಿದ್ದಾರೆ.

ಮಗ್ರಿಬ್ ಅದಾನ್ ಕೊಟ್ಟ ಕೂಡಲೇ ಉಪವಾಸ ತೊರೆಯಲು ಖರ್ಜೂರ, ನೀರು ಕೊಡಲಾಗುತ್ತದೆ. ನಮಾಝ್‌ನ ನಂತರ ಮಸೀದಿಯ ಮುಂಭಾಗದಲ್ಲಿ ಹಾಕಲಾದ ವಿಶಾಲವಾದ ಟೆಂಟ್‍‌ನ ಉದ್ದದ ಮೇಜಿನಲ್ಲಿ ಎಲ್ಲರಿಗೂ ಚಿಕನ್ ಮಜ್‍ಬೂಸ್,  ಸಿಹಿವಸ್ತು,  ನೀರು ಇರುತ್ತದೆ. ಜೊತೆಗೆ ಒಂದು ಕೂಪನ್. ಆಹಾರ ಸೇವಿಸುವ ಮೊದಲೇ ಕೂಪನ್ ಜೇಬಿನಲ್ಲಿಡಬೇಕು. ಅದರಲ್ಲಿ ಅದೃಷ್ಟ ಇರುತ್ತದೆ. ಆಹಾರ ಸೇವಿಸಿ ಹೋಗುವಾಗ ಕೂಪನ್ ಸಿಗದಿದ್ದರೆ ಸಾಲಾಗಿ ನಿಂತು ಕೂಪನ್ ಪಡೆಯಬಹುದು. ಮಸೀದಿಯ ಮುಂದೆ ಅದೃಷ್ಟ ಚೀಟಿ ಎತ್ತಲಾಗುತ್ತದೆ.

ಮೈಕ್‍ನಲ್ಲಿ ಅಂದಿನ ವಿಜಯಿಯನ್ನು ಘೋಷಿಸಲಾಗುತ್ತದೆ. ಮೊಬೈಲ್, ಟ್ಯಾಬ್ಲೆಟ್ ಪ್ರತಿ ದಿವಸವೂ ಸಿಗುತ್ತದೆ. ಬಹುಮಾನ ಸಿಕ್ಕಿದ ಕೂಪನ್ ಹಿಡಿದುಕೊಂಡು ಡ್ರಾ ಮಾಡಿದ ಸ್ಥಳಕ್ಕೆ ಆಗಲೇ ಗೆದ್ದ ವ್ಯಕ್ತಿ ಬರಬೇಕಾಗುತ್ತದೆ. ಬರದಿದ್ದರೆ ಇನ್ನೊಂದು ಚೀಟಿ ಎತ್ತಲಾಗುವುದು. ರಮಝಾನ್ ಕೊನೆಯ ದಿವಸದಲ್ಲಿ ಬಂಪರ್ ಬಹುಮಾನ ಇರುತ್ತದೆ. ಅದು ನಿಸಾನ್ ಕಾರು ಮಸೀದಿಯ ಮುಂದೆ ಇದೆ. ಬಹುಮಾನದ ವಿಷಯ ಕೇಳಿ ಈ ಮಸೀದಿಗೆ ಇಫ್ತಾರ್‌ಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ.