ಬ್ರಿಟನ್‍ನಲ್ಲಿ ಕ್ವಾರಂಟೈನ್ ಉಲ್ಲಂಘನೆಗೆ 9.5 ಲಕ್ಷ ದಂಡ!

0
98

ಸನ್ಮಾರ್ಗ ವಾರ್ತೆ

ಲಂಡನ್,ಸೆ.22: ಬ್ರಿಟನ್‍ನಲ್ಲಿ ಕೊರೋನ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವವರಲ್ಲಿ ಬೊರಿಸ್ ಜಾನ್ಸನ್ ಸರಕಾರ ಭರವಸೆ ತುಂಬಿದೆ. ಇನ್ನು ಕ್ವಾರಂಟೈನ್ ಉಲ್ಲಂಘಿಸಿದವರು 10,000 ಪೌಂಡ್(ಸುಮಾರು 9.5ಲಕ್ಷ ರೂ.) ದಂಡವನ್ನು ತೆರಬೇಕು ಮತ್ತು ಶಿಕ್ಷೆ ಅನುಭವಿಸಬೇಕೆಂದು ಕಾನೂನನನ್ನು ರೂಪಿಸಿದೆ.

14 ದಿನಗಳ ಕ್ವಾರಂಟೈನ್‌ಅನ್ನು ನಿರಂತರ ಉಲ್ಲಂಘಿಸಿದವರೆಗೆ ಭಾರೀ ದಂಡ ಮತ್ತು ಶಿಕ್ಷೆ ಲಭಿಸಲಿದೆ. ಸಾವಿರ ಪೌಂಡ್ (95000 ರೂ.) ನಿಂದ ದಂಡದ ಮೊತ್ತ ಆರಂಭವಾಗಲಿದೆ. ಇದೇ ವೇಳೆ, ಕ್ವಾರಂಟೈನ್‍ನಲ್ಲಿ ಮನೆಯಲ್ಲಿ ಕೂತು ಕೆಲಸ ಮಾಡಲು ಸಾಧ್ಯವಿಲ್ಲದವರಿಗೆ ಸರಕಾರ 500ಪೌಂಡ್(47,500 ರೂ.) ಸಹಾಯಧನ ನೀಡಲಿದೆ.

ಕಟ್ಟಡ ನಿರ್ಮಾಣ ಕಾರ್ಮಿಕರು, ಹಾಗೂ ನಿರುದ್ಯೋಗಿಗಳಿಗೆ 500 ಪೌಂಡ್ ಧನ ಸಹಾಯ ಲಭಿಸುತ್ತದೆ. ಹೊಸ ತೀರ್ಮಾನಗಳು ಸೆಪ್ಟಂಬರ್ 28ರಿಂದ ಜಾರಿಯಾಗಲಿದ್ದು, ಕ್ವಾರಂಟೈನ್‍ನಲ್ಲಿರುವವರು ಕಡ್ಡಾಯವಾಗಿ ಕೆಲಸಕ್ಕೆ ಬರಬೇಕೆಂದು ಹೇಳುವ ಕೆಲಸದ ಮಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದೆ.