ಮಸೀದಿ ಮುಚ್ಚಬಹುದೇ?

0
16408

ಸನ್ಮಾರ್ಗ ವಾರ್ತೆ

ವಾರದ ಕ್ಲಾಸ್

ಸಂಗ್ರಹ: ಎನ್.ಎಂ. ಪಡೀಲ್

ಒಂದು ದಿನ ಭಾರೀ ಮಳೆ ಸುರಿಯುತ್ತಿರುವ ವೇಳೆ ಅಬ್ದುಲ್ಲಾ ಇಬ್ನು ಹಾರಿಸ್(ರ) ತನ್ನ ಬಾಂಗ್ ಕೊಡುವ ವ್ಯಕ್ತಿ ಯೊಂದಿಗೆ ಹೀಗೆ ಹೇಳಿದರು, ಅ ಶ್‍ಹದು ಅನ್‍ಲಾಯಿಲಾಹ ಇಲ್ಲಲ್ಲಾ ಅಶ್‍ಹದು ಅನ್ನ ಮುಹಮ್ಮದ್ ರಸೂಲುಲ್ಲಾ ಎಂದು ಹೇಳಿದ ಬಳಿಕ ಹಯ್ಯಾಲಸ್ಸಲಾ ಎಂದು ಹೇಳಬೇಡ, ಸಲ್ಲೂ ಫೀ ಬುಯೂತಿಕುಂ, ನಿಮ್ಮ ಮನೆ ಯಲ್ಲಿಯೇ ನಮಾಝ್ ಮಾಡಿ. ಇದನ್ನು ಕೇಳಿದ ಕೆಲವು ಜನರಿಗೆ ಇದೊಂದು ಹಾಸ್ಯದಂತೆ ತೋರಿತು.

ಆಗ ಸಹಾಬಿ ಹೇಳಿದರು, ಇದರಿಂದ ನಿಮಗೆ ಆಶ್ಚರ್ಯವಾಯಿತಾ? ಇದು ಪ್ರವಾದಿ(ಸ) ಹೇಳಿಕೊಟ್ಟಂತಹ ಮಾದರಿಯಾಗಿದೆ.
ನಿಶ್ಚಯವಾಗಿಯೂ ನಮಾಝ್ ಕಡ್ಡಾಯ ಕರ್ತವ್ಯವಾಗಿದೆ. ಆದರೆ ನೀವು ಮಳೆಯಿಂದಾಗಿ ಕೆಸರು ನೀರಿನಲ್ಲಿ ಜಾರಿ ಬಿದ್ದು ಕಷ್ಟಪಡಬಾರ ದೆಂದು ಹಾಗೆ ಮಾಡಲಾಗಿದೆ.

ಬಾಂಗ್ ಕೇಳಿದರೆ ನಮಾಝ್‍ಗೆ ಮಸೀದಿಗೆ ತೆರಳುವುದು ಪ್ರತಿಯೋರ್ವ ಮುಸ್ಲಿಮ್ ಪುರುಷ ನಿಗೆ ಮುಖ್ಯವಾಗಿದೆ. ಗಲಭೆ ವನ್ಯ ಪ್ರಾಣಿಗಳ ಕಾಟ, ಕಚ್ಚುವ ನಾಯಿಗಳು ಇರುವಾಗ, ದರೋಡೆಕೋರರ ಭೀತಿ, ಧರಿಸಲು ವಸ್ತ್ರವಿಲ್ಲದ ಅವಸ್ಥೆಯಲ್ಲಿ, ಜೈಲಿನಲ್ಲಿದ್ದಾಗ, ಕಠಿಣ ಬಿಸಿಲು, ಅಸಾಧ್ಯ ಚಳಿ, ಸಾಂಕ್ರಾಮಿಕ ರೋಗದ ಸಮಯದಲ್ಲಿ ಮಸೀದಿಗೆ ಹೋಗಬೇಕಾಗಿಲ್ಲ. ಸುರಕ್ಷಿತವಲ್ಲದ ಸಂದರ್ಭದಲ್ಲಿ ಮಸೀದಿಗೆ ತೆರಳ ದಂತೆ ಫಿಕ್ಹ್‍ನಲ್ಲಿ ಆದೇಶಿಸಲಾಗಿದೆ.

ಬಾಂಗ್ ಕೇಳಿಯೂ ಮಸೀದಿಗೆ ಬರದಿರು ವುದು ಅನುಚಿತ. ಆದರೆ ಇಂತಹ ಪರಿಸ್ಥಿತಿಯಲ್ಲಿ ಅನುವದನೀಯ. ಜಮಾಅತ್ ನಮಾಝ್‍ನ ಮಹತ್ವ ನಮಗೆ ತಿಳಿದೇ ಇದೆ. ಬದ್ರ್ ಯುದ್ಧದ ಸಂದರ್ಭದಲ್ಲಿ ಅಬ್ದುಲ್ಲಾ ಇಬ್ನು ಉಮರ್(ರ) ರೋಗಿಯಾದ ಸಯೀದ್ ಇಬ್ನು ಝೈದ್ ಇಬ್ನು ಅಮ್ರ್(ರ)ರನ್ನು ಸಂದರ್ಶಿಸಲು ಹೋದ ಸಂದರ್ಭದಲ್ಲಿ ಜುಮುಅದ ಆಝಾನ್ ಆಯಿತು. ಆದರೆ ಹತ್ತಿರದಲ್ಲಿ ಮಸೀದಿ ಇರದ್ದರಿಂದ ಅವರು ಜುಮಾ ಉಪೇಕ್ಷಿಸಿದರು.

ಮಸೀದಿಯ ಶಿಷ್ಟಾಚಾರಗಳ ಬಗ್ಗೆ ಪ್ರವಾದಿ(ಸ) ನಮಗೆ ಕಲಿಸಿದ್ದಾರೆ. ಮಸೀದಿಗೆ ಬರುವಾಗ ಈರುಳ್ಳಿ ತಿಂದು ಬರಬಾರದು. ಅಸಹ್ಯಕರ ವಸ್ತ್ರ ಧರಿಸದೆ ಶುಭ್ರವಾದ ವಸ್ತ್ರ ಧರಿಸಿ ಬರಬೇಕು. ಆಹಾರ ಪಾ ನೀಯ ಸೇವಿಸುತ್ತಾ ಮಲ ವಿಸರ್ಜನೆ ಮಾಡ ಬಾರದು. ಪ್ರಯಾಣಿಕರಿಗೆ ಮಸೀದಿಗೆ ಹೋಗಬೇಕಾ ಗಿಲ್ಲ. ಪ್ರಯಾಣದಲ್ಲಿ ನಮಾಜ್ ಕಸ್ರ್ ಮತ್ತು ಜಮ್‍ಅ ಮಾಡುವ ಅವಕಾಶವಿದೆ. ಇದೆಲ್ಲಾ ದೇವನು ನಮಗೆ
ನೀಡಿದ ಸೌಕರ್ಯಗಳಾಗಿವೆ.

ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಅಂಬುಲೆನ್ಸ್ ಚಾಲಕರು, ಟ್ರಾಫಿಕ್ ಪೋಲೀಸರು ಜಮಾಅತಿಗೆ ಹೋಗಿ ಸೇರಬೇಕೆಂದಿಲ್ಲ. ಕಾವಲು ಗಾರರು, ಸೈನಿಕರು ಅವರ ಸ್ಥಳದಲ್ಲಿಯೇ ನಮಾಝ್ ಮಾಡಬೇಕು. ನಿಮ್ಮ ಜೀವವನ್ನು ಸುಮ್ಮನೆ ಕಷ್ಟಕ್ಕೆ ಗುರಿಪಡಿಸಬೇಡಿ ಎಂದು ಆದೇಶಿಸಲಾಗಿದೆ.

ಸಕೀಫ್ ಗೋತ್ರದ ವ್ಯಕ್ತಿ ಪ್ರವಾದಿ(ಸ) ಬಳಿ ಪ್ರತಿಜ್ಞೆ ಮಾಡಲು ಬಂದಾಗ ಕುಷ್ಠರೋಗಿಯಾಗಿ ದ್ದರು. ಆಗ ಪ್ರವಾದಿ(ಸ) ದೂರದಿಂದಲೇ ಅವರ ಪ್ರತಿಜ್ಞೆ ಸ್ವೀಕರಿಸಿ ಆದಷ್ಟು ಬೇಗ ಊರಿಗೆ ಕಳುಹಿಸಿಕೊಟ್ಟರು. ಸಹಲ್ ಹೇಳಿದರು, ನಾವು ಸಾಂಕ್ರಾಮಿಕ ರೋಗ ಹರಡಿದಾಗ ನಮ್ಮ ನಡುವೆ ಅಂತರವನ್ನು ಪಾಲಿಸುತ್ತಿದ್ದೆವು. ಈಗ ಕೊರೋನಾ ವೈರಸ್‍ಗೂ ಅದೇ ಮಾದರಿಯನ್ನು ಅವಲಂಬಿಸಬೇಕಾಗಿದೆ. ವೈರಸ್ ಹರಡದಂತೆ ತಡೆಗಟ್ಟುವುದು ಪ್ರತಿಯೋರ್ವ ಸತ್ಯವಿಶ್ವಾಸಿಯ ಕರ್ತವ್ಯವಾಗಿದೆ. ಜನರು ಗುಂಪುಗೂಡಬಾರದು. ಅಂತರ ಕಾಯ್ದುಕೊಳ್ಳಬೇಕು. ಇದೆಲ್ಲಾ ಇಸ್ಲಾಮ್ ಕಲಿಸಿದ ಪಾಠವಾಗಿದೆ.

ಇಸ್ಲಾಮೀ ರಾಷ್ಟ್ರಗಳಲ್ಲಿ ಮಸೀದಿಗಳನ್ನು ಮುಚ್ಚಿ ಐದು ಹೊತ್ತಿನ ನಮಾಝ್ ನಿರ್ಬಂಧಿಸ ಲಾಗಿದೆ. ಹತ್ತು ವಾರಗಳ ಜುಮಾ ನಮಾಝ್ ಕೂಡಾ ನಿರ್ವಹಿಸಲಾಗಲಿಲ್ಲ. ಇಂದು ಕೆಲವು ಕಡೆಗಳಲ್ಲಿ ಅ ನುಕೂಲಕರ ಸ್ಥಳಗಳಲ್ಲಿ ಮಸೀದಿ ತೆರೆಯಲು ಪ್ರಯತ್ನಿಸಲಾಗುತ್ತಿದೆ. ಇಡೀ ಪ್ರಪಂಚ ದಲ್ಲಿಯೇ ಈ ರಮಝಾನಿನ ತರಾವೀಹ್, ಈದ್‍ನ ನಮಾಝ್‍ಗಳನ್ನೂ ನಿರ್ವಹಿಸಲಾಗಲಿಲ್ಲ. ಇದು ದೇವನು ಪ್ರತಿಕೂಲ ಪರಿಸ್ಥಿತಿಯಲ್ಲಿ ಸತ್ಯ ವಿಶ್ವಾಸಿಗಳು ಕಷ್ಟಕ್ಕೆ ಗುರಿಯಾಗಬಾರದೆಂದು ನೀಡಿದ ಕೊಡುಗೆ. ಇದು ಇಸ್ಲಾಮ್ ಕಲಿಸಿಕೊಟ್ಟ ಮಾದರಿ.

ಒಬ್ಬ ಮುಸ್ಲಿಮನು ಇನ್ನೊಬ್ಬನನ್ನು ತೊಂದರೆಗೊಳಪಡಿಸಿದರೆ ಅಲ್ಲಾಹನು ಅವನಿಗೆ ತೊಂದರೆ ಕೊಡುತ್ತಾನೆ. ಆದ್ದರಿಂದ ನಮ್ಮಿಂದ ಇತರರಿಗೆ ರೋಗ ಹರಡದಂತೆ ಜಾಗ್ರತೆ ವಹಿಸಬೇಕು.

ನಿಮಗೆ ಪ್ರಯೋಜನವಿರುವ ಕಾರ್ಯ ನಿನ್ನ ನೆರೆಯವನಿಗೆ ಉಪದ್ರವಾಗಿರಬಾರದು. ನಮ್ಮ ಕುಟುಂಬ, ನೆರೆಕರೆ ಸಮಾಜದ ಆ ಆರೋಗ್ಯಕ್ಕಾಗಿ ಪ್ರಯತ್ನಿಸಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಸ್ಲಾಮೀ ಆದೇಶ ಪಾಲಿಸಿ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿ ಸಲು ಪ್ರಯತ್ನಿಸೋಣ. ಸಾಂಕ್ರಾಮಿಕ ರೋಗ ಗಳಿಂದ ಅಲ್ಲಾಹನು ನಮ್ಮನ್ನು ರಕ್ಷಿಸಲಿ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.