Thursday, May 23, 2019

 ಸನ್ಮಾರ್ಗ ಸೀರತ್ ಕ್ವಿಝ್ ಸ್ಪರ್ಧೆ ನಿಯಮಗಳು

1. ಸ್ಪರ್ಧೆಯಲ್ಲಿ ಭಾಗವಹಿಸುವವರು ಈ ಪ್ರಕಟಿತ ಹಾಳೆಗಳಲ್ಲಿ ಅಥವಾ ಬಿಳಿ ಹಾಳೆಯಲ್ಲಿ ಉತ್ತರಗಳನ್ನು ಬರೆದು ಕಳುಹಿಸಬೇಕು.
2. ನಿಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಮಕ್ಕಳ  ಅಥವಾ ಇತರರ ಹೆಸರಲ್ಲಿ ಸ್ಪರ್ಧಿಸುವುದನ್ನು ಪರಿಗಣಿಸಲಾಗುವುದಿಲ್ಲ.
3. ಸನ್ಮಾರ್ಗ ವೆಬ್‍ಸೈಟ್ www.sanmarga.com ) ನಲ್ಲೂ ಈ ಸ್ಪರ್ಧೆಯ ಪ್ರಶ್ನೆಗಳನ್ನು ಪ್ರಕಟಿಸಲಾಗಿದ್ದು,  ಅಲ್ಲಿಯ ಪ್ರಶ್ನೆಗಳನ್ನು ಓದಿ ಬಿಳಿ ಹಾಳೆಯಲ್ಲಿ ಉತ್ತರ ಬರೆದು ಕಳಿಸಿಕೊಡುವುದಕ್ಕೂ ವಾಟ್ಸಪ್ ಮೂಲಕ ಕನ್ನಡ ಲಿಪಿಯಲ್ಲಿ ಟೈಪ್ ಮಾಡಿ ಕಳುಹಿಸಲಿಕ್ಕೂ ಅವಕಾಶ ಇದೆ.
4. ನಿಮ್ಮ ಉತ್ತರಗಳು ಸ್ಪಷ್ಟವಾಗಿರಲಿ.
5. ವಾಟ್ಸಪ್ ಮೂಲಕ ಉತ್ತರಿಸುವವರು (ವಾಟ್ಸಪ್ ಸಂಖ್ಯೆ +8277373059) ತಮ್ಮ ಉತ್ತರಗಳನ್ನು ಕನ್ನಡ  ಲಿಪಿಯಲ್ಲಿ ಟೈಪ್ ಮಾಡಿರಬೇಕು.
6. ಉತ್ತರ ಪತ್ರಿಕೆಯಲ್ಲಿ ನಕಲು ಆಗದಂತೆ ಜಾಗ್ರತೆ ವಹಿಸಬೇಕು. ನಾವು ಸ್ಪರ್ಧಿಗಳಿಂದ ಪ್ರಾಮಾಣಿಕತೆಯನ್ನು  ನಿರೀಕ್ಷಿಸುತ್ತೇವೆ. ಇದು ಪ್ರವಾದಿ ಚರಿತ್ರೆಯನ್ನು ಅಧ್ಯಯನ ನಡೆಸಲು ಪ್ರೇರೇಪಿಸುವುದಕ್ಕೆ ಆಯೋಜಿಸಲಾಗಿರುವ ಸ್ಪರ್ಧೆಯಾಗಿದ್ದು, `ನಕಲು’ ಇಡೀ ಉದ್ದೇಶವನ್ನೇ ವ್ಯರ್ಥಗೊಳಿಸಬಹುದು.
7. ಉತ್ತರ ಕಳುಹಿಸಲು ಕೊನೆಯ ದಿನಾಂಕ ಡಿಸೆಂಬರ್: 13, 2018
8. ಅಂತಿಮ ತೀರ್ಮಾನ ತೀರ್ಪುಗಾರರದ್ದಾಗಿರುವುದು.
ವಿವರಗಳಿಗಾಗಿ ಸಂಪರ್ಕಿಸಿ: +9880096128, +9844963059
            ಬಹುಮಾನಗಳು: 
       ಪ್ರಥಮ-  ರೂ. 3,000/-
       ದ್ವಿತೀಯ-  ರೂ. 2,000/-
       ತೃತೀಯ- ರೂ. 1,000/-
10 ಸಮಾಧಾನಕರ ಬಹುಮಾನಗಳು
ಉತ್ತರ ಕಳುಹಿಸಬೇಕಾದ ವಿಳಾಸ 
ಸಂಚಾಲಕರು, ಸನ್ಮಾರ್ಗ ಸೀರತ್ ಕ್ವಿಝ್ ಸ್ಪರ್ಧೆ ವಿಭಾಗ, ಸನ್ಮಾರ್ಗ ವಾರ ಪತ್ರಿಕೆ
ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು- 575001

I ಬಿಟ್ಟ ಪದ ತುಂಬಿರಿ.

1. ಮಕ್ಕಾದ ಪರಿಸರದಲ್ಲಿ ನಡೆದ ಐತಿಹಾಸಿಕ ಘಟನೆಯಿಂದ ಪ್ರವಾದಿ ಮುಹಮ್ಮದ್(ಸ) ಜನನದ ವರ್ಷವು_________  ಎಂದು ಪ್ರಸಿದ್ದವಾಗಿದೆ.
2. ಪ್ರವಾದಿ ಮುಹಮ್ಮದ್(ಸ)ರಿಗೆ ಎರಡನೇ ಬಾರಿ__________  ಸೂರದ ಏಳು ಸೂಕ್ತಗಳು ಅವತೀರ್ಣಗೊಂಡಿತು.
3. ಕಅಬಾ ಭವನದ ಬಳಿ ಕುರೈಶರು ಸಭೆ ಸೇರುತ್ತಿದ್ದ ಸ್ಥಳ__________.
4. ಸಫಾ ಬೆಟ್ಟದಲ್ಲಿ____________  ಎಂಬವರ ಮನೆಯು ಪ್ರವಾದಿ ಮುಹಮ್ಮದ್(ಸ)ರ ಧರ್ಮಪ್ರಚಾರ  ಕೇಂದ್ರವಾಗಿತ್ತು.
5. ಚಾರಿತ್ರ್ಯ ಮತ್ತು ಬಡವರ ಅನುಕಂಪದ ಕಾರಣ ಖದೀಜಾ(ರ)ರನ್ನು ಜನರು________  ಎಂದು  ಕರೆಯುತ್ತಿದ್ದರು.
6. ಮುಸ್ಲಿಮರಲ್ಲಿ ಹುತಾತ್ಮತೆಯ ಕಿರೀಟ ತೊಟ್ಟ ಪ್ರಥಮ ವ್ಯಕ್ತಿ________.
7. ಕಅಬಾ ಭವನದ ಕೀಲಿಕೈ ಪ್ರಳಯ ಕಾಲದ ತನಕ__________ ರ ವಂಶದ ಬಳಿಯಲ್ಲೇ ಇರುವುದೆಂದು  ಪ್ರವಾದಿ(ಸ) ಹೇಳಿರುವರು.
8. ಮೂರು ಸಾವಿರದಷ್ಟು ಬಲಹೀನ ಮುಸ್ಲಿಮ್ ಸೇನೆಯು ರೋಮನರ ಒಂದು ಲಕ್ಷದ ಬಲಿಷ್ಠ ಸೇನೆಯನ್ನು ಸದೆಬಡಿದ  ಯುದ್ಧ_____________.
9. __________ ಯುದ್ಧಕ್ಕೆ ಹುದೈಬಿಯಾದಲ್ಲಿ ರಿಝ್ವಾನ್ ಪ್ರತಿಜ್ಞೆಯಲ್ಲಿ ಭಾಗವಹಿಸಿದವರು ಮಾತ್ರ ಹೊರಡಲು  ಪ್ರವಾದಿ ಮುಹಮ್ಮದ್(ಸ)ರು ಆಜ್ಞಾಪಿಸುತ್ತಾರೆ.
10. ಕಂದಕ ಯುದ್ಧದಲ್ಲಿ ಕಂದಕ ತೋಡಲು ಸಲಹೆ ನೀಡಿದ ಸಹಾಬಿಯ ಹೆಸರು________
11. ಪ್ರವಾದಿವರ್ಯರು(ಸ) ತಾಯಿಫ್‍ನಲ್ಲಿ ಧರ್ಮಪ್ರಚಾರದ ನಂತರ_________ ರ ಅಭಯಾಶ್ರಯದೊಂದಿಗೆ  ಮಕ್ಕಾ ಪ್ರವೇಶಿಸುತ್ತಾರೆ.
12. ಮದೀನಾದಲ್ಲಿ ಕಪಟ ವಿಶ್ವಾಸಿಗಳ ನಾಯಕ_________
13. ಉಹುದ್ ಯುದ್ಧದ ವೇಳೆ________ ನಲ್ಲಿ ಅಬ್ದುಲ್ಲಾ ಬಿನ್ ಝುಬೈರ್(ರ)ರ ನೇತೃತ್ವದಲ್ಲಿ 50 ಮಂದಿ  ಬಿಲ್ಲುಗಾರರನ್ನು ನೇಮಿಸಲಾಯಿತು.
14.  ದ್ವಿತೀಯ ಅಕಬಾ ಒಡಂಬಡಿಕೆಯ ವೇಳೆ_________ ರನ್ನು ಮದೀನಾದಲ್ಲಿ ಧರ್ಮಪ್ರಚಾರಕ್ಕಾಗಿ  ಕಳುಹಿಸಲಾಯಿತು.
15. ಮದೀನಾಕ್ಕೆ ವಲಸೆ ಬಂದಾಗ ಪ್ರವಾದಿ ಮುಹಮ್ಮದ್(ಸ)ರ ಆತಿಥ್ಯದ ಸೌಭಾಗ್ಯ__________ ರಿಗೆ ಸಿಗುತ್ತದೆ.
16. ಪ್ರವಾದಿವರ್ಯರು(ಸ) ಕಅಬಾ ಭವನದಲ್ಲಿ ವಿರೋಧಿಗಳ ಮುಂದೆ__________  ಎಂಬ ಅಧ್ಯಾಯವನ್ನು  ಪಠಿಸಿದಾಗ ಸತ್ಯ ನಿಷೇಧಿಗಳೂ ಸಾಷ್ಟಾಂಗವೆರಗುತ್ತಾರೆ.
17. ಪ್ರವಾದಿವರ್ಯ(ಸ)ರ ನೇತೃತ್ವದಲ್ಲಿ_____________  ಎಂಬ ಮಸೀದಿಯಲ್ಲಿ ಪ್ರಥಮ ಜುಮಾ ನಮಾಝ್  ನೆರವೇರಿಸಲಾಗುತ್ತದೆ.
18. ಮದೀನಾದಲ್ಲಿ ನಿರ್ಮಾಣಗೊಂಡ ಪ್ರಥಮ ಮಸೀದಿ_________
19. ಇಬ್ಬರು ವ್ಯಕ್ತಿಗಳ ಮೂಲಕ ಇಸ್ಲಾಮ್‍ಗೆ ಬೆಂಬಲ ನೀಡು ಎಂದು ಪ್ರವಾದಿ ಮುಹಮ್ಮದ್(ಸ)ರು ಪ್ರಾರ್ಥಿಸುತ್ತಿದ್ದರು.  ಆ ಇಬ್ಬರು ಉಮರ್ ಬಿನ್ ಖತ್ತಾಬ್ (ರ) ಮತ್ತು__________.
20. ಪ್ರವಾದಿವರ್ಯರು(ಸ) ವಿದಾಯ ಹಜ್ಜ್ನ ವೇಳೆ ತಮ್ಮ ________ ಎಂಬ ಒಂಟೆಯ ಮೇಲೇರಿ ಖುತ್ಬಾ ನೀಡಿದರು.
21. ಪ್ರವಾದಿ ಮುಹಮ್ಮದ್(ಸ)ರು ಉಹುದ್ ಯುದ್ಧಕ್ಕೆ ತೆರಳುವಾಗ____________ ರನ್ನು ತಮ್ಮ ಸ್ಥಾನದಲ್ಲಿ  ಮದೀನಾದ ಆಡಳಿತಗಾರರಾಗಿ ನೇಮಿಸುತ್ತಾರೆ.
22. ಉಮರ್(ರ)ರ ಸಹೋದರಿ ಫಾತಿಮಾರ ಮನೆಯಲ್ಲಿ ಕುರ್‍ಆನ್ ಓದಿಸುತ್ತಿದ್ದ ಸಹಾಬಿ____________
23. ಪ್ರವಾದಿವರ್ಯರು(ಸ) ಗಗನಯಾತ್ರೆ ಮಾಡಿದ ಮಿಂಚಿನ ವೇಗದ ಸವಾರಿ_______________
24. ಮಿಅರಾಜ್‍ನ ಸಂದರ್ಭದಲ್ಲಿ ಇಸ್ಲಾಮೀ ರಾಷ್ಟ್ರದ ನಿರ್ಮಾಣಕ್ಕೆ ಬೇಕಾದ ಸಂದೇಶವನ್ನು ಸೂರ__________ ನಲ್ಲಿ  ಅವತೀರ್ಣಗೊಳಿಸಲಾಯಿತು.
25. ಇಬ್ರಾಹೀಮ್(ಅ)ರ ಕಾಲದಿಂದಲೇ ಮಕ್ಕಾದ ಪರಿಸರದಲ್ಲಿ ನಡೆಯುತ್ತಿದ್ದ ವಾರ್ಷಿಕ ಸಂತೆ_____________
26. ಪ್ರವಾದಿವರ್ಯರ(ಸ) ವಿದಾಯ ಹಜ್ಜ್ನ ಖುತ್ಬಾದಲ್ಲಿ____________ ರಿಗೆ ಸಲ್ಲಬೇಕಾದ ಎಲ್ಲಾ ಬಡ್ಡಿಗಳನ್ನು  ಮನ್ನಾಗೊಳಿಸುವುದರೊಂದಿಗೆ ಅಜ್ಞಾನ ಕಾಲದ ಬಡ್ಡಿಯನ್ನು ಮನ್ನಾ ಮಾಡಿದರು.
27. ಮಿಅರಾಜ್‍ನ ವೃತ್ತಾಂತವನ್ನು ಪ್ರಥಮವಾಗಿ ಪ್ರವಾದಿವರ್ಯರು(ಸ)____________ ರಿಗೆ ತಿಳಿಸುತ್ತಾರೆ.
28. ಮಸ್ಜಿದುನ್ನಬವೀ ನಿರ್ಮಿಸಲು ಸಹಲ್ ಮತ್ತು ಸುಹೈಲ್‍ರಿಂದ ಖರೀದಿಸಿದ ಸ್ಥಳಕ್ಕೆ ಹಣ ನೀಡಿದವರು______________
29.  ಮದೀನಾದಲ್ಲಿ ಇಸ್ಲಾಮ್ ಸ್ವೀಕರಿಸಿ ಬರುವಂತಹ ಬಡವರು ಹಾಗೂ ನಿರ್ಗತಿಕರಿಗಾಗಿರುವ ಆಶ್ರಯಧಾಮ__________
30. ಮಿಅರಾಜ್‍ನ ರಾತ್ರಿ ಪ್ರವಾದಿವರ್ಯರಿಗೆ ಅವತೀರ್ಣಗೊಂಡ ದಿವ್ಯವಾಣಿ_____________
31. ಮುಹಮ್ಮದ್(ಸ)ರ ಹೆಜ್ಜೆಗುರುತುಗಳನ್ನನುಸರಿಸಿ ಕುರೈಶರನ್ನು ಸೌರ್ ಗುಹೆಯ ತನಕ ಕರೆದುಕೊಂಡು ಹೋದ ಪರಿಣಿತ ಶೋಧಕ_____________
32. “ಈತ ನನ್ನ ಜನಾಂಗದ ಫಿರ್‍ಔನ್ ಆಗಿದ್ದ” ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ ವ್ಯಕ್ತಿ____________
33. “ವೃಕ್ಷದಡಿಯಲ್ಲಿ ನಿಮ್ಮೊಂದಿಗೆ ಸತ್ಯವಿಶ್ವಾಸಿಗಳು ಆಜ್ಞಾನುಸರಣೆಯ ಪ್ರತಿಜ್ಞೆ ಮಾಡುತ್ತಿದ್ದಾಗ ಅಲ್ಲಾಹನು ಅವರಿಂದ  ಸಂತುಷ್ಟನಾದನು.” (ಅಲ್ ಫತಹ್:18) – ಪ್ರತಿಜ್ಞೆಯ ಹೆಸರು____________
34. “ಅಬ್ದುಲ್ಲಾರ ಮಗ ಮುಹಮ್ಮದ್(ಸ) ಮತ್ತು ಅಮ್ರ್ ನ ಮಗ ಸುಹೈಲ್‍ರ ಮಧ್ಯೆ ಏರ್ಪಟ್ಟ ಒಪ್ಪಂದ”- ಒಪ್ಪಂದದ ಹೆಸರು______________

II. ಅನುಕ್ರಮವಾಗಿ ಬರೆಯಿರಿ. 

35. ಪ್ರಥಮ ಅಕಬಾ ಒಡಂಬಡಿಕೆ             ಉ:
36. ಕಿಬ್ಲಾ ಬದಲಾವಣೆ                             ಉ:
37. ಅಬೂ ತಾಲಿಬ್ ಕಣಿವೆಯಲ್ಲಿ ಬಹಿಷ್ಕಾರ     ಉ:
38. ಹಿಜ್ರ                                             ಉ:
39. ತಾಯಿಫ್‍ನಲ್ಲಿ ಧರ್ಮ ಪ್ರಚಾರ             ಉ:
40. ದುಃಖದ ವರ್ಷ                             ಉ:
41. ಮಿಅರಾಜ್                                    ಉ:

III. ಈ ಕೆಳಗಿನ ಬಿರುದುಗಳನ್ನು ಪಡೆದ ಸಹಾಬಿಗಳ ಹೆಸರು ಬರೆಯಿರಿ. 

42. ದಾತುನ್ನಿತಾಖೈನ್
43. ದುನ್ನೂರೈನ್
44. ಅಮೀನುಲ್ ಉಮ್ಮತ್
45. ತಯ್ಯಾರ್
46. ಸೈಫುಲ್ಲಾಹ್
47. ಹಿಬ್ಬುರ್ರಸೂಲ್

IV . ಯಾವ ಸಂದರ್ಭದಲ್ಲಿ ಹೀಗೆ ಹೇಳಲಾಗಿದೆ?

48. “ನನ್ನನ್ನು ಶಾಂತಿ ಸೌಹಾರ್ದದ ಪ್ರಯತ್ನದಲ್ಲಿ ಸ್ಮರಿಸುವುದಕ್ಕಿಂತ ದೊಡ್ಡ ಸೌಭಾಗ್ಯ ನನ್ನ ಪಾಲಿಗೆ ಇನ್ನೇನಿರಬಹುದು? ಶಾಂತಿ ಸ್ಥಾಪನೆಯ ಪ್ರಯತ್ನಕ್ಕೆ ನಾನು ಸದಾ ಸಿದ್ಧನಾಗಿರುವೆನು.”
49. “ಅಂದು ನಿಮ್ಮಲ್ಲಿ ಸಂಖ್ಯಾಬಲದ ಜಂಭವಿತ್ತು. ಆದರೆ ಅದು ನಿಮಗೇನೂ ಫಲಕಾರಿಯಾಗಲಿಲ್ಲ. ಭೂಮಿಯು ತನ್ನೆಲ್ಲಾ ವೈಶಾಲ್ಯದ ಹೊರತಾಗಿಯೂ ನಿಮ್ಮ ಪಾಲಿಗೆ ಸಂಕುಚಿತವಾಗಿ ಬಿಟ್ಟಿತು ಮತ್ತು ನೀವು ಬೆನ್ನು ತಿರುಗಿಸಿ ಓಟಕ್ಕಿತ್ತಿರಿ.”
50. “ಸತ್ಯವಿಶ್ವಾಸಿಗಳೇ ಅಲ್ಲಾಹನ  ಅನುಗ್ರಹವನ್ನು ಸ್ಮರಿಸಿರಿ. ನಿಮ್ಮ ಮೇಲೆ ಸೇನೆಗಳು ಎರಗಿ ಬಂದಾಗ ನಾವು ಬಿರುಗಾಳಿಯನ್ನು  ಮತ್ತು ನಿಮಗೆ ಗೋಚರಿಸದ ಸೇನೆಯನ್ನು ಕಳುಹಿಸಿದೆವು.”
51. “ನಾನು ನಿಮ್ಮ ಧರ್ಮ, ನಿಮ್ಮ ವಿಶ್ವಸ್ಥ ನಿಧಿ ಮತ್ತು ನಿಮ್ಮ ಕರ್ಮಗಳ ಫಲವನ್ನು ಅಲ್ಲಾಹನ ವಶಕ್ಕೆ ಒಪ್ಪಿಸಿ ನಿಮ್ಮನ್ನು ಅಲ್ಲಾಹನ ಮಾರ್ಗದ ಹೋರಾಟಕ್ಕಾಗಿ ಕಳುಹಿಸುತ್ತಿದ್ದೇನೆ.”
52. “…ಆದರೆ ನೀವು ದೌರ್ಬಲ್ಯ ತೋರಿದಾಗ, ನಿಮ್ಮ ಕಾರ್ಯದಲ್ಲಿ ಪರಸ್ಪರ ಮತಭೇದ ತಾಳಿದಾಗ ಮತ್ತು ನೀವು  ಮೋಹಿತರಾಗಿದ್ದ ಆ ವಸ್ತುವನ್ನು (ಸಮರಾರ್ಜಿತ ಸೊತ್ತನ್ನು) ಅಲ್ಲಾಹನು ನಿಮಗೆ ಹಠಾತ್ತನೆ ತೋರಿಸಿದಾಗ ನೀವು  ನಿಮ್ಮ ನಾಯಕನ ಅಪ್ಪಣೆಯನ್ನು ಉಲ್ಲಂಘಿಸಿ ನಡೆದು ಬಿಟ್ಟಿರಿ.”
53. “ನಿಮ್ಮ ಗೋತ್ರಗಳಿಂದ ನನಗೆ 12 ಮಂದಿ ಸರದಾರರನ್ನು ಆರಿಸಿಕೊಡಿ. ಅವರು ತಮ್ಮ ತಮ್ಮ ಗೋತ್ರಗಳ  ಹೊಣೆಗಾರರಾಗಿರುವರು. ಹ. ಈಸಾ(ಅ) ಅವರ ಹವಾರಿಗಳು ತಂತಮ್ಮ ಗೋತ್ರಗಳ ಹೊಣೆಗಾರರಾದಂತೆ.”
54. “ಹೆದರಬೇಡಿರಿ. ಖಂಡಿತ ಅಲ್ಲಾಹನು ನಮ್ಮೊಂದಿಗಿದ್ದಾನೆ.”
55. “ಅಲ್ಲಾಹನು ತನ್ನ ಕಡೆಯಿಂದ ತೂಕಡಿಕೆಯ ರೂಪದಲ್ಲಿ ನಿಮ್ಮ ಮೇಲೆ ನೆಮ್ಮದಿ ಹಾಗೂ ನಿರ್ಭಯತೆಯನ್ನು  ಆಚ್ಛಾದಿಸುತ್ತಿದ್ದ …ತನ್ಮೂಲಕ ನಿಮ್ಮ ಪಾದಗಳನ್ನು ನೆಲೆಯೂರಿಸಲಿಕ್ಕೂ ಆಕಾಶದಿಂದ ನಿಮ್ಮ ಮೇಲೆ ಮಳೆ ಸುರಿಸುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ.”

V. ಈ ಮಾತುಗಳನ್ನು ಯಾರು ಹೇಳಿರುವರು?

56. “ನಾನು ಅಂತಿಮ ಪ್ರವಾದಿಯ ಕುರಿತು `ಝಬೂರ್’, ‘ತೌರಾತ್’ ಮತ್ತ್ ‘ಇಂಜೀಲ್’ಗಳಲ್ಲಿ ಓದಿದ ಎಲ್ಲ ಕುರುಹುಗಳೂ  ನಿಮ್ಮ  ಈ ಸೋದರ ಪುತ್ರರಲ್ಲಿ ಮೇಳೈಸಿವೆ. ಖಂಡಿತವಾಗಿಯೂ ಇವರೇ ಅಂತಿಮ ಪ್ರವಾದಿ ಆಗಿರುವರು”.
57. “ಈ ಮರದ ನೆರಳಿನಲ್ಲಿ ಪ್ರವಾದಿಯ ಹೊರತು ಯಾರೂ ತಂಗಲಾರರು” ಎಂದು ನಮ್ಮ ಗ್ರಂಥಗಳಲ್ಲಿದೆ.
58. “ನನ್ನದಂತೂ ಕೇವಲ ಒಂದೇ ಬೇಡಿಕೆ. ಮುಹಮ್ಮದ್(ಸ) ಒಂದು ಏಣಿ ಇಟ್ಟು ಆಕಾಶಕ್ಕೆ ಏರಬೇಕು. ಅಲ್ಲಿಂದ  ಸ್ವರ್ಣಾಕ್ಷರಗಳಿಂದ ಬರೆದ ಒಂದು ಗ್ರಂಥವನ್ನು ತರಬೇಕು.”
59. “ಖಂಡಿತವಾಗಿಯೂ ಈ ವಾಣಿ ಮತ್ತು ಈಸಾ(ಅ) ಅವರು ತಂದ ವಾಣಿ ಎರಡೂ ಒಂದೇ ಮೂಲದಿಂದ ಹೊರಟಿದೆ.  ಅಲ್ಲಾಹನಾಣೆ! ನಾನು ನಿಮ್ಮನ್ನು ಇವರ ವಶಕ್ಕೆ ಒಪ್ಪಿಸಲಾರೆ.”
60. “ಅದು ಮೂಸಾ(ಅ)ರ ಬಳಿಗೆ ಬಂದ ದೇವದೂತರೇ ಆಗಿದ್ದಾರೆ. ನಿಮ್ಮ ಪ್ರವಾದಿತ್ವದ ಕಾಲದಲ್ಲಿ ನಾನು ಶಕ್ತಿಶಾಲಿಯೂ ಯುವಕನೂ ಆಗಿರುತ್ತಿದ್ದರೆ! ನಿಮ್ಮ ಜನಾಂಗವು ನಿಮ್ಮನ್ನು ದೇಶದಿಂದ ಹೊರ ಹಾಕುವಾಗ ನಾನು ಜೀವಿಸಿರುತ್ತಿದ್ದರೆ!”
61. “ನನಗೆ ಕಣ್ಣು ಬೇನೆಯಿದೆ. ನನ್ನ ಕಾಲುಗಳು ಸಣಕಲಾಗಿವೆ. ನಾನು ಈ ಮನೆಯಲ್ಲಿ ಎಲ್ಲರಿಗಿಂತ ಕಿರಿಯನು. ಆದರೂ  ನಾನು ನಿಮಗೆ ನೆರವಾಗುವೆನು.”

VI. ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು?

62. “ಜನರು ಉಮ್ರಾ ಮಾಡುವ ಅವಕಾಶವಿಲ್ಲದೆ ಮರಳಿ ಹೋಗಬೇಕಾದ ಈ ಪರಿಸ್ಥಿತಿಯಿಂದ ದುಃಖಿತರಾಗಿ ಹೀಗೆ  ಮಾಡುತ್ತಿರಬಹುದು. ತಾವು ಸ್ವತಃ ಕ್ಷೌರ ಮಾಡಿಸಿ. ಅದನ್ನು ಕಂಡು ಅವರೂ ಮಾಡಿಸುವರು.”
63. “ನೀವು ಕಿಸ್ರಾರ (ಇರಾನ್‍ನ ದೊರೆ) ಕಂಕಣವನ್ನು ಧರಿಸುವಾಗ ನಿಮಗೆ ಹೇಗೆನಿಸಬಹುದು?”
64. “ಇದು ಪ್ರವಾದಿವರ್ಯರ(ಸ) ಪಾವನ ಹಾಸಿಗೆ. ನೀವು ಬಹುದೇವಾರಾಧಕರು ಮತ್ತು ಮಲಿನ ವ್ಯಕ್ತಿ. ನೀವು ಈ  ಪಾವನ ಹಾಸಿಗೆಯಲ್ಲಿ ಕುಳಿತಿರುವುದು ನನಗಿಷ್ಟವಿಲ್ಲ.”
65. “ತಮಗೆ ಕುರೈಝಾ ಗೋತ್ರದವರ ಕಡೆ ಪ್ರಯಾಣ ಬೆಳೆಸಲು ಆಜ್ಞಾಪಿಸಲಾಗಿದೆ.”
66. “ಅವನು ನಿಮ್ಮ ಜೊತೆ ಹೋಗಬಯಸಿದರೆ ಅವನಿಗಾಗಿ ಯಾವ ಪರಿಹಾರ ಧನವನ್ನೂ ನಾನು ಸ್ವೀಕರಿಸಲಾರೆ. ಹಾಗೆಯೇ  ಅವನನ್ನು ಮುಕ್ತಗೊಳಿಸುವೆನು.”
67. “ಅಲ್ಲಾಹನಾಣೆ! ಆತನು ನಿಮ್ಮನ್ನೆಂದೂ ದುಃಖಕ್ಕೀಡು ಮಾಡಲಾರ. ನೀವು ಬಂಧು- ಬಳಗದವರೊಂದಿಗೆ ಸದ್ವರ್ತನೆ ಮಾಡುವವರು.”
68. “ನಾಶವಾಗಿ ಹೋಗು ನೀನು. ಇದನ್ನು ಕೇಳಿಸಲು ನಮ್ಮನ್ನು ಇಲ್ಲಿ ಒಟ್ಟು ಸೇರಿಸಿದೆಯಾ?”
69. “ಸೋದರಾ! ನೀವು ನನ್ನ ಮನೆಯ ಎಲ್ಲ ವಸ್ತು-ಒಡವೆಗಳನ್ನು ನೋಡಿದ್ದೀರಿ. ಇದರಲ್ಲಿ ಅರ್ಧಾಂಶ ನಿಮ್ಮದು.  ನಿಮಗಿಷ್ಟವಾದ ವಸ್ತುಗಳನ್ನು ನಿಸ್ಸಂಕೋಚವಾಗಿ ತೆಗೆದುಕೊಳ್ಳಿರಿ.”
error: Content is protected !!