ರಾಜಸ್ತಾನ: ಮಂತ್ರಿಯಾಗಿ ಪ್ರತಿಜ್ಞಾವಿಧಿ ಕೈಗೊಂಡ ತಕ್ಷಣ ಶಿವ ದೇವಾಲಯಕ್ಕೆ ತೆರಳಿ ಸಚಿವ ಸಾಲಿಹ್ ಮುಹಮ್ಮದ್ ಮಾಡಿದ್ದೇನು?

0
845

ರಾಜಸ್ತಾನದ ಮುಖ್ಯಮಂತ್ರಿ ಗೆಹಲೋಟ್ ರ ಸಂಪುಟದಲ್ಲಿ ಮಂತ್ರಿಯಾಗಿ ಪ್ರತಿಜ್ಞಾವಿಧಿ ಕೈಗೊಂಡ ತಕ್ಷಣ ಸಚಿವ ಸಾಲಿಹ್ ಮುಹಮ್ಮದ್ ಅವರು ಜೈಸಲ್ಮೇರ್ ಜಿಲ್ಲೆಯ ಪೋಕ್ರಾನ್ ನಲ್ಲಿರುವ ಪ್ರಸಿದ್ಧ ಶಿವ ದೇವಾಲಯಕ್ಕೆ ತೆರಳಿ ಪೂಜಾವಿಧಿಯನ್ನು ನೆರವೇರಿಸಿದರು. ಶಿವ ವಿಗ್ರಹಕ್ಕೆ ಹಾಲು ಮತ್ತು ಬೆಣ್ಣೆಯನ್ನು ಅರ್ಪಿಸುವ ಮೂಲಕ ಅವರು ಪೂಜೆಯನ್ನು ನೆರವೇರಿಸಿದರು ಎಂದು ದೇವಾಲಯದ ಮುಖ್ಯ ಅರ್ಚಕ ಮಧು ಚಂಗಾಣಿ ತಿಳಿಸಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪೋಕ್ರಾನ್ ಕ್ಷೇತ್ರ ಭಾರಿ ಚರ್ಚೆಗೆ ಒಳಗಾಗಿತ್ತು. ರಾಜಸ್ತಾನದ ಅತ್ಯಂತ ಗಮನ ಸೆಳೆದ ಕ್ಷೇತ್ರವಾಗಿ ಇದು ಗುರುತಿಸಿಕೊಂಡಿತ್ತು. ಇಲ್ಲಿ ಬಿಜೆಪಿ ಮತದೃವೀಕರಣಕ್ಕೆ ಪ್ರಯತ್ನಿಸಿದ್ದುದು ಇದಕ್ಕೆ ಕಾರಣವಾಗಿತ್ತು. ಹಿಂದೂ ಆಧ್ಯಾತ್ಮಿಕ ನೇತಾರ ತರತಾರ ಮಠದ ಮುಖ್ಯಸ್ಥರಾದ ಸ್ವಾಮಿ ಪ್ರತಾಪಪುರಿ ಯವರನ್ನು ಬಿಜೆಪಿ ಕಣಕ್ಕಿಳಿಸಿದಾಗ ಕಾಂಗ್ರೆಸ್ ಮುಯ್ಯಿಗೆ ಮುಯ್ಯಿ ಅನ್ನುವಂತೆ ಮುಸ್ಲಿಂ ಧರ್ಮ ಗುರು ಘಾಜಿ ಫಕೀರ್ ಅವರ ಮಗ ಸಾಲಿಹ್ ಮುಹಮ್ಮದರನ್ನು ಕಣಕ್ಕಿಳಿಸಿತ್ತು.