ರಾಜೀವ್ ಗಾಂಧಿ ಹಂತಕರ ಬಿಡುಗಡೆ, ನೀಟ್ ರದ್ದು, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ: ಕಾಂಗ್ರೆಸ್ ಮಿತ್ರ ಪಕ್ಷದ ಭರ್ಜರಿ ಪ್ರಣಾಳಿಕೆ

0
432

ಚೆನ್ನೈ, ಮಾ. 19: ಯುಪಿಎಯ ಮಿತ್ರ ಪಕ್ಷ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿದೆ. ಜತೆಗೆ ನೀಟ್ ಪರೀಕ್ಷೆ ರದ್ದು ಹಾಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತರುವ ಕುರಿತು ಭರವಸೆ ನೀಡಿದೆ. ಡಿಎಂಕೆ ನಾಯಕ ಸ್ಟಾಲಿನ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಅದರ ಮುಖ್ಯಾಂಶಗಳನ್ನು ಓದಿ ಹೇಳಿದ್ದು ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‍ನ್ನು ರದ್ದುಗೊಳಿಸಲಾಗುವುದು ಎಂದರು.

ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತರುವ ಕುರಿತು ಹೆಜ್ಜೆಯನ್ನು ಮುಂದಿಡಲಾಗುವುದು. ವಿದ್ಯಾರ್ಥಿಗಳ ಎಲ್ಲ ಶಿಕ್ಷಣ ಸಾಲಗಳನ್ನು ಮನ್ನಾ ಮಾಡಲಾಗುವುದು. ಕೇಂದ್ರ ಮತ್ತು ರಾಜ್ಯ ನೌಕರರಿಗೆ ಹಳೆಯ ರೀತಿಯಲ್ಲಿ ನಿವೃತ್ತಿ ವೇತನ ಜಾರಿಗೆ ತರಲಾಗುವುದು. ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ನಿಯಂತ್ರಣಕ್ಕೂ ಗಮನ ಹರಿಸಲಾಗುವುದು ಎಂದು ಡಿಎಂಕೆಯ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಡಿಎಂಕೆ 20 ಸೀಟುಗಳಲ್ಲಿ ಚುನಾವಣೆಗೆ ಸ್ಪರ್ಧಿಸಲಿದೆ. ಉಳಿದ 19 ಸ್ಥಾನಗಳಲ್ಲಿ ಡಿಎಂಕೆಯ ಮಿತ್ರ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ.