ದೇಶದಲ್ಲಿ ವ್ಯಾಕ್ಸಿನ್ ಕೊಡುವುದು ಯಾವಾಗ ಮೋದಿಜಿ?- ರಾಹುಲ್ ಗಾಂಧಿ ಟೀಕೆ

0
404

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದಲ್ಲಿ ಕೊರೋನ ಪ್ರತಿರೋಧ ಕಾರ್ಯಕ್ರಮಗಳನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದಲ್ಲಿ ಕೊರೋನ ವ್ಯಾಕ್ಸಿನ್ ಕೊಡವುದು ಯಾವಾಗ ಆರಂಭವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ಜಗತ್ತಿನಲ್ಲಿ 23 ಲಕ್ಷ ಮಂದಿ ಕೊರೋನ ವ್ಯಾಕ್ಸಿನ್ ಪಡೆದುಕೊಂಡಾಗಿದೆ. ಚೀನ, ಅಮೆರಿಕ, ರಷ್ಯ ಮೊದಲಾದ ದೇಶಗಳಲ್ಲಿ ವ್ಯಾಕ್ಸಿನೇಶನ್ ಆರಂಭವಾಗಿದೆ. ಭಾರತದ ನಂಬರ್ ಯಾವಾಗ ಬರುತ್ತದೆ ಮೋದೀಜಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು ಕೊರೋನ ವ್ಯಾಕ್ಸಿನ್ ವಿತರಣೆಯ ಲೆಕ್ಕಗಳನ್ನು ಗ್ರಾಫಿನಲ್ಲಿ ಚಿತ್ರಿಸಿದ್ದಾರೆ.

ದೇಶದಲ್ಲಿ ಕೊರೊನ ಇಂಜೆಕ್ಸನ್‍ಗೆ ಈವರೆಗೆ ಅನುಮತಿ ನೀಡಲಾಗಿಲ್ಲ. ಮುಂದಿನ ವಾರದಿಂದ ಆಕ್ಸಫರ್ಡ್‌ನ ಆಸ್ಟ್ರಸೆನಕ ವ್ಯಾಕ್ಸಿನ್‍ಗೆ ಅನುಮತಿ ನೀಡಲಾಗುವುದೆಂದು ವರದಿಯಾಗಿದೆ.

ಆದ್ಯತಾ ವಿಭಾಗದಲ್ಲಿ 30 ಕೋಟಿ ಭಾರತೀಯರಿಗೆ ಮೊದಲ ಹಂತದಲ್ಲಿ ಕೊರೊನ ವ್ಯಾಕ್ಸಿನ್ ನೀಡಲು ತೀರ್ಮಾನಿಸಲಾಗಿದೆ ಎಂದು ಕಳೆದ ದಿವಸ ಕೇಂದ್ರ ಆರೋಗ್ಯ ಸಚಿವ ಹರ್ಷವಧನ್ ತಿಳಿಸಿದ್ದರು. ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸೈನಿಕರು, ಶುಚೀಕರಣ ಕಾಮಿರ್ಕರು, 50 ವರ್ಷಕ್ಕಿಂತ ಮೇಲ್ಪಟ್ಟವರು, 50 ವರ್ಷಕ್ಕಿಂತ ಕೆಳಗೆ ಗಂಭೀರ ರೋಗ ಇರುವವರು ಮುಂತಾದವರಿಗೆ ಮೊದಲ ಘಟ್ಟದಲ್ಲಿ ಭಾರತದಲ್ಲಿ ವ್ಯಾಕ್ಸಿನ್ ಲಭ್ಯಗೊಳಿಸಲಾಗುವುದು. ಜನವರಿಯಲ್ಲಿ ಕೊರೋನ ವ್ಯಾಕ್ಸಿನ್ ವಿತರಿಸಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದರು.