ಬಿಹಾರದ ಜನತೆ ಸಾವಿರಾರು ಕಿ‌.ಮೀ ನಡೆಯುವಾಗ ಮೋದಿಜಿ, ನಿತೀಶ್‌‌ಜಿ ಶ್ರೀಮಂತರ ಸಾಲ ಮನ್ನಾ ಮಾಡುತ್ತಿದ್ದರು- ರಾಹುಲ್ ಗಾಂಧಿ ಆರೋಪ

0
512

ಸನ್ಮಾರ್ಗ ವಾರ್ತೆ

ಬಿಹಾರ,ನ.3: ಬಿಹಾರದ ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ ಸಾವಿರಾರು ಕಿ.ಮೀ.ನಷ್ಟು ಹಸಿವು ಮತ್ತು ಬಾಯಾರಿಕೆಯಿಂದ ಹಿಂದಿರುಗುತ್ತಿರುವಾಗ ಮೋದಿಜಿ ಮತ್ತು ನಿತೀಶ್‌ಜಿ ಇಬ್ಬರೂ ಭಾರತದ ಶ್ರೀಮಂತ ಜನರ ಸಾಲವನ್ನು ಮನ್ನಾ ಮಾಡುತ್ತಿದ್ದರು” ಎಂದು ಪ್ರಧಾನಿ ಮೋದಿ ಹಾಗೂ ನಿತೀಶ್ ಕುಮಾರ್ ಸರಕಾರದ ವಿರುದ್ಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದರು.

ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿಫಲತೆಯನ್ನು ರಾಹುಲ್ ಬೆಟ್ಟು ಮಾಡಿದರು. ಆರಂಭಿಕ ಲಾಕ್‌ಡೌನ್ ನಲ್ಲಿ ಮೋದಿಜಿ ಟ್ರೈನ್ ಬಂದ್ ಮಾಡಿದರು, ತದನಂತರ ಕಾರ್ಮಿಕರು ಹಸಿವು ಬಾಯಾರಿಕೆಯಿಂದ ಸಾವಿರಾರು ಕಿ.ಮೀ ನಡೆಯುವಾಗ ಮೌನವಹಿಸಿ ಕಣ್ಮರೆಯಾದರು. ಈಗ ಚುನಾವಣೆ ಬಂದ ಕೂಡಲೇ ಸ್ವಲ್ಪವೂ ನಾಚಿಕೆಯಿಲ್ಲದೇ ಮತಯಾಚನೆ ನಡೆಸಲು ನಿಮ್ಮೆದುರು ಬಂದಿದ್ದಾರೆ. ನಿಮಗೆ ಇವರಿಬ್ಬರ ಅವಶ್ಯಕತೆ ಎದುರಾದಾಗ ಇವರು ಏನು ಮಾಡುತ್ತಿದ್ದರು? ಶ್ರೀಮಂತರ ತೆರಿಗೆ, ಸಾಲ ಮನ್ನಾ ಮಾಡುತ್ತಿದ್ದರು ಎಂದು ರಾಹುಲ್ ಆರೋಪಿಸಿದರು.

ಮಂಗಳವಾರ ಬಿಹಾರದಲ್ಲಿ 2 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದು. ಮೊದಲ ರ್ಯಾಲಿ ಕೊರಹಾದಲ್ಲಿ ಮತ್ತು ಎರಡನೆಯರ್ಯಾಲಿ ಕಿಶಂಗಂಜ್ನಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಟೀಕಾಪ್ರಹಾರ ನಡೆಸಿದರು.