1975ರ ತುರ್ತು ಪರಿಸ್ಥಿತಿ ಘೋಷಣೆ ಸಂಪೂರ್ಣ ತಪ್ಪಾಗಿತ್ತು- ರಾಹುಲ್ ಗಾಂಧಿ

0
125

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಫೆ.1975ರಲ್ಲಿ ತನ್ನ ಅಜ್ಜಿ ಹಾಗೂ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರುವ ತೀರ್ಮಾನ ಕೈಗೊಂಡದ್ದು ಸಂಪೂರ್ಣ ತಪ್ಪು ತೀರ್ಮಾನವಾಗಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅಮೆರಿಕದ ಕರ್ನಲ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅರ್ಥಶಾಸ್ತ್ರಜ್ಞ ಕೌಶಿಕ್ ದಾಸ್‍ರೊಂದಿಗಿನ ಸಂದರ್ಶನದ ವೇಳೆ ರಾಹುಲ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತುರ್ತು ಪರಿಸ್ಥಿತಿ ಘೋಷಣೆ ಸಂಪೂರ್ಣ ತಪ್ಪಾಗಿತ್ತು ಎಂದು ತಾನು ಭಾವಿಸಿದ್ದೇನೆ. ನನ್ನ ಅಜ್ಜಿ ಇಂದಿರಾ ಗಾಂಧಿಯವರೇ ಹೀಗೆ ಹೇಳಿದ್ದರು ಎಂದು ರಾಹುಲ್ ಗಾಂಧಿ ಹೇಳಿದರು.

ಆದರೆ, ಯಾವ ಘಟ್ಟದಲ್ಲಿಯೂ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆ ಚೌಕಟ್ಟಿನ ಮೇಲೆ ಕಾಂಗ್ರೆಸ್ ಹಸ್ತಕ್ಷೇಪ ಮಾಡಿಲ್ಲ ಎಂದು ಅವರು ಹೇಳಿದರು. ಈಗ ನಡೆಯುತ್ತಿರುವುದು ಸಂಪೂರ್ಣ ಭಿನ್ನವಾಗಿದೆ. ಸಾಂವಿಧಾನಿಕ ಸಂಸ್ಥೆಗಳಲ್ಲಿ ಆರೆಸ್ಸೆಸ್ ಅವರ ಜನರನ್ನು ತುಂಬಿಸುತ್ತಿದೆ. ಆದುದರಿಂದ ಬಿಜೆಪಿಯನ್ನು ಸೋಲಿಸಿದರು ಆಡಳಿತ ವ್ಯವಸ್ಥೆಯನ್ನು ಬೇಗನೆ ವಿಮೋಚನೆಗೊಳಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಆರೆಸ್ಸೆಸ್ ಸಂಬಂಧ ಇರಿಸಿಕೊಂಡಿರುವ ಹಿರಿಯ ಅಧಿಕಾರಿಗಳು ತನ್ನ ಆದೇಶಗಳನ್ನು ಪಾಲಿಸುವುದಿಲ್ಲ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್ ತನ್ನೊಂದಿಗೆ ಹೇಳಿದ್ದನ್ನು ರಾಹುಲ್ ಗಾಂಧಿ ಸಂದರ್ಶನದಲ್ಲಿ ನೆನೆದರು. ಇದು ಆರೆಸ್ಸೆಸ್ ಆಡಳಿತ ಸಂಸ್ಥೆಗಳಲಿ ಆರೆಸ್ಸೆಸ್ಸಿನ ಹಸ್ತಕ್ಷೇಪವನ್ನು ಕಮಲ್‍ನಾಥ್‍ರಿಗೆ ಅನುಭವವಾಗಿದೆ.

ಆಧುನಿಕ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಸರಕಾರಿ ಸಂಸ್ಥೆಗಳು ಸ್ವತಂತ್ರ ಮತ್ತು ಪರಸ್ಪರ ಪೂರಕವಾಗಿ ವರ್ತಿಸಿದಾಗ ಇರುತ್ತದೆ. ಆದರೆ ಭಾರತದಲ್ಲಿ ಎಲ್ಲ ಸಂಸ್ಥೆಗಳ ಸ್ವತಂತ್ರ ಸ್ವಭಾವವನ್ನು ಆರೆಸ್ಸೆಸ್ ಯೋಜನಾ ಬದ್ಧವಾಗಿ ಆಕ್ರಮಿಸಿ ಇಲ್ಲದಾಗಿಸಿದೆ. ಪ್ರಜಾಪ್ರಭುತ್ವ ನಶಿಸುತ್ತಿದೆ ಎಂದು ನಾನು ಹೇಳುವುದಿಲ್ಲ. ಅದನ್ನು ಕತ್ತು ಹಿಸುಕಿ ಕೊಲ್ಲಲಾಗುತ್ತಿದೆ ಎನ್ನಬೇಕಾಗಿದೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ.

ಪಾರ್ಟಿಯೊಳಗೆ ಪ್ರಜಾಪ್ರಭುತ್ವವಾದಿ ಚುನಾವಣೆ ನಿರ್ಣಾಯಕವೆಂದು ವಾದಿಸಿದ ಮೊದಲ ವ್ಯಕ್ತಿ ನಾನು. ಬಿಜೆಪಿ ಮತ್ತು ಇತರ ರಾಜಕೀಯ ಪಾರ್ಟಿಗಳ ಸಹಿತ ಪಾರ್ಟಿಯೊಳಗೆ ಪ್ರಜಾಪ್ರಭುತ್ವ ಇದೆ ಎಂದು ಯಾರೂ ಕೆಳುವುದಿಲ್ಲ ಎನ್ನುವುದು ಕುತೂಹಲದ ವಿಚಾರವಾಗಿದೆ. ಹೀಗೆ ಕಾಂಗ್ರೆಸ್ಸಿನ ಭಿನ್ನಮತೀಯರ ಕುರಿತ ಪ್ರಶ್ನೆಗೆ ರಾಹುಲ್ ಹೇಳಿದರು.