ನನ್ನ ಕುಟುಂಬವನ್ನು ಮೋದಿ ಅಪಮಾನಿಸಿದರು, ಜೀವ ಹೋದರೂ ನಾನು ಹೀಗೆ ಮಾಡಲಾರೆ- ರಾಹುಲ್ ಗಾಂಧಿ

0
152

ಉಜ್ಜೈನಿ,ಮೇ 15: ಚುನಾವಣಾ ಪ್ರಚಾರದ ವೇಳೆ ತನ್ನ ತಂದೆ, ಅಜ್ಜಿಯನ್ನು ಪ್ರಧಾನಿ ನರೇಂದ್ರ ಮೋದಿ ಅಪಮಾನಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ಅವರು ಚುನಾವಣಾ ರ್ಯಾಲಿಯಲ್ಲಿ ಮಾತಾಡುತ್ತಿದ್ದರು.

‘ಸತ್ತರೂ ಹೀಗೆ ನಾನು ಮೋದಿಗೆ ಉತ್ತರ ನೀಡಲಾರೆ. ಮೋದಿಯ ತಂದೆ, ತಾಯಿಯನ್ನು ನಾನು ಯಾವತ್ತೂ ಅಪಮಾನಿಸಲಾರೆ. ನಾನು ಆರೆಸ್ಸೆಸ್, ಬಿಜೆಪಿಯೋ ಅಲ್ಲದ್ದು ಅದಕ್ಕೆ ಕಾರಣವಾಗಿದೆ. ನಾನು ಕಾಂಗ್ರೆಸ್ಸಿಗನಾಗಿರುವೆ. ನನ್ನ ವಿರುದ್ಧ ಮೋದಿ ಎಷ್ಟು ಶತ್ರುತ್ವದ ಮಳೆಗೆರೆದರೂ ನಾನು ಮರಳಿ ಪ್ರೀತಿಯನ್ನಷ್ಟೇ ನೀಡಬಲ್ಲೆ. ನಾವು ಪ್ರೀತಿಯಿಂದ ಮೋದಿಯನ್ನು ಸೋಲಿಸುತ್ತೇವೆ” ರಾಹುಲ್ ಗಾಂಧಿ ಹೇಳಿದರು. ಮೋಡ, ಮಾವುಗಳ ಕುರಿತ ಹೇಳಿಕೆಗಳನ್ನು ನಿಲ್ಲಿಸಿ ನೈಜ ಸಮಸ್ಯೆಗಳ ಕುರಿತು ಜನರೊಡನೆ ಮಾತಾಡಲು ಪ್ರಧಾನಿ ತಯಾರಾಗಬೇಕು ಎಂದು ರಾಹುಲ್ ಆಗ್ರಹಿಸಿದರು.