ಚುನಾವಣೆಯ ಸಮಯದಲ್ಲಿ ರಾಹುಲ್ ಪ್ರವಾಸ ಹೋಗಿದ್ದರು- ಟೀಕಿಸಿದ ಆರ್‌ಜೆಡಿ ನಾಯಕ

0
395

ಸನ್ಮಾರ್ಗ ವಾರ್ತೆ

ಪಾಟ್ನ: ಬಿಹಾರ ಚುನಾವಣೆಯಲ್ಲಿ ಮಹಾಸಖ್ಯದ ಸೋಲಿಗೆ ಕಾಂಗ್ರೆಸ್ಸನ್ನು ಆರ್‌ಜೆಡಿ ನಾಯಕ ಕಟುವಾಗಿ ಟೀಕಿಸಿದ್ದಾರೆ. 70 ಸೀಟುಗಳಲ್ಲಿ ಸ್ಪರ್ಧಿಸಿದ ಕಾಂಗ್ರೆಸ್‍ಗೆ 70 ರ್ಯಾಲಿಗಳನ್ನು ಮಾಡಲು ಆಗಿಲ್ಲ ಅದರ ನಾಯಕ ರಾಹುಲ್ ಗಾಂಧಿ ಚುನಾವಣೆಯ ಸಮಯದಲ್ಲಿ ಪ್ರವಾಸಕ್ಕೆ ಹೋಗಿದ್ದರು ಎಂದು ಆರ್‍ಜೆಡಿ ನಾಯಕ ಶಿವಾನಂದ ತಿವಾರಿ ಆರೋಪಿಸಿದರು.

ಕಾಂಗ್ರೆಸ್ ಮಹಾಸಖ್ಯವನ್ನು ಸಂಕಲೆಯಿಂದ ಬಂಧಿಸಿತು. ಅವರು 70ಸೀಟುಗಳಲ್ಲಿ ಸ್ಪರ್ಧಿಸಿದರು 70 ರ್ಯಾಲಿಗಳನ್ನು ಕೂಡ ಮಾಡಲು ಅವರಿಂದಾಗಿಲ್ಲ. ರಾಹುಲ್ ಗಾಂಧಿ ಮೂರು ದಿವಸ ಇದ್ದಾಗ ಮಾತ್ರ ಬಂದರು. ಪ್ರಿಯಾಂಕಾಬ ರಲಿಲ್ಲ. ಬಿಹಾರದ ಕುರಿತು ಗೊತ್ತಿಲ್ಲದವರು ಇಲ್ಲಿಗೆ ಬಂದರು. ಇದು ಸರಿಯಲ್ಲ ಎಂದು ಶಿವಾನಂದ ತಿವಾರಿ ಹೇಳಿದರು.

ಇದು ಬಿಹಾರದಲ್ಲಿ ಮಾತ್ರ ಆಗುವ ವಿಷಯವೆಂದು ನಾನು ತಿಳಿದಿಲ್ಲ. ಇತರ ರಾಜ್ಯಗಳಲ್ಲಿಯೂ ಸಾಕಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಿ ಹೆಚ್ಚು ಸೀಟುಗಳಲ್ಲಿ ಸೋಲುಂಡಿದೆ. ಕಾಂಗ್ರೆಸ್ ಇದರ ಬಗ್ಗೆ ಖಂಡಿತಾ ಚಿಂತಿಸಬೇಕು ಎಂದು ತಿವಾರಿ ಹೇಳಿದರು. ಬಿಹಾರದಲ್ಲಿ ಸ್ಪರ್ಧಿಸಿದ 70 ಸೀಟುಗಳಲ್ಲಿ 19ರಲ್ಲಿ ಮಾತ್ರ ಗೆದ್ದಿದೆ. 243 ಸೀಟುಗಳಲ್ಲಿ ನಡೆದ ಚುನಾವಣೆಯಲ್ಲಿ 122 ಸೀಟುಗಳನ್ನು ಪಡೆದರೆ ಕೇವಲ ಬಹುಮತ ಲಭಿಸುತ್ತದೆ. ಮಹಾಘಟ್‍ಬಂಧನ್‍ಗೆ 110 ಸೀಟುಗಳು ಮಾತ್ರ ಸಿಕ್ಕಿದೆ. ಮಹಾಸಖ್ಯದ ಆರ್‍ಜೆಡಿ, ಎಡಪಕ್ಷಗಳು ಉತ್ತಮ ಪ್ರದರ್ಶನವನ್ನು ನೀಡಿವೆ.