ಪ್ರಧಾನಿ ಮೋದಿಯವರಿಗೆ ಜನ್ಮದಿನದ ಶುಭಾಶಯ ಕೋರಿದ ರಾಹುಲ್ ಗಾಂಧಿ

0
342

ಸನರ್ಗ ವಾರ್ತೆ

ಹೊಸದಿಲ್ಲಿ,ಸೆ.17: ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಟ್ಟುಹಬ್ಬದ ಶುಭಾಶಯನ್ನು ಕೋರಿದ್ದಾರೆ. ಪ್ರಧಾನಿಯ 70ನೇ ಹುಟ್ಟುಹಬ್ಬದ ದಿನ ಟ್ವಿಟರ್‌ನಲ್ಲಿ ರಾಹುಲ್ ಗಾಂಧಿ ಶುಭಾಶಯ ಕೋರಿದರು.

‘ಪ್ರಧಾನಿ ನರೇಂದ್ರ ಮೋದೀಜಿಗೆ ಹುಟ್ಟುಹಬ್ಬದ ಶುಭಾಶಯಗಳು ‘ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರು. ಕಳೆದ ವರ್ಷವೂ ಮೋದಿಗೆ ರಾಹುಲ್ ಗಾಂಧಿ ಶುಭಾಶಯಗಳನ್ನು ಕೋರಿದ್ದರು.

ಹುಟ್ಟು ಹಬ್ಬಕ್ಕಾಗಿ 70 ಕಿಲೊ ಗ್ರಾಂ ಲಾಡು ತಯಾರಾಗಿದೆ. ಪ್ರಧಾನಿಯ ಜನ್ಮದಿನವನ್ನು ಒಂದುವಾರ ಸೇವಾಪರವಾಗಿ ಆಚರಿಸಲಾಗುವುದು ಎಂದು ಬಿಜೆಪಿ ಕಾರ್ಯಕರ್ತರು ತಿಳಿಸಿದರು. ಪ್ರಧಾನಿ ಸೇವೆಯಲ್ಲಿ ನಂಬಿಕೆಯಿದೆ ಆದ್ದರಿಂದ ಸೇವೆಯ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತೆಂದು ಕಾರ್ಯಕರ್ತರು ಹೇಳಿದರು.

ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ ಪ್ರಕಾರ ಈ ದಿನದಲ್ಲಿ 20,000 ಮಂದಿಗೆ ಇನ್ಶುರೆನ್ಸ್ ನೀಡುವ ಕಾರ್ಯಕ್ರಮವನ್ನು ವಡೋದರದಲ್ಲಿ ಸಂಯೋಜಿಸಲಾಗಿದೆ. ಸೆಪ್ಟಂಬರ್ ಹದಿನಾಲ್ಕರಿಂದ 20ರವರೆಗೆ ಸೇವಾ ಸಪ್ತಾಹ್ ಆಚರಿಸಲಾಗುತ್ತಿದೆ. ಕೊರೋನ ಪ್ರೊಟೊಕಾಲ್ ಪ್ರಕಾರ ಕಾರ್ಯಕ್ರಮ ನಡೆಯುತ್ತಿದೆ. ಶುಚೀಕರಣ ಕಾರ್ಯಕ್ರಮಗಳು, ಸ್ಯಾನಿಟರಿ ಪ್ಯಾಡ್‍ಗಳು, ವ್ಹೀಲ್ ಚೇರ್‌ಗಳು, ಶ್ರವಣ ಯಂತ್ರಗಳನ್ನು ವಿತರಿಸಲು ಬಿಜೆಪಿ ನಿರ್ಧರಿಸಿದೆ.

2014ರ ನಂತರ ಎಲ್ಲ ಹುಟ್ಟುಹಬ್ಬ ದಿನದಲ್ಲಿ ಮೋದಿ ತನ್ನ ತಾಯಿ ಹೀರಾ ಬಾಯಿಯವರನ್ನು ಭೇಟಿಯಾಗುತ್ತಿದ್ದಾರೆ.ಆದರೆ ಕೊರೋನ ಹಿನ್ನೆಲೆಯಲ್ಲಿ ಈ ಬಾರಿ ತಾಯಿಯ ಭೇಟಿಯನ್ನು ಮಾಡುವ ಕಾರ್ಯಕ್ರಮವಿಲ್ಲ.

ಓದುಗರೇ,‌ ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.