ದಣಿದು ಮಂಡಿಯೂರಿದ ಕಾಂಗ್ರೆಸ್; ನಡೆಯದ ಪ್ರಿಯಾಂಕಾ ಮ್ಯಾಜಿಕ್

0
579

ಹೊಸದಿಲ್ಲಿ,ಮೇ 24: ಮೋದಿ ಅಲೆಯ ಮುಂದೆ ರಾಹುಲ್, ಪ್ರಿಯಾಂಕಾರ ಮ್ಯಾಜಿಕ್ ನಡೆಯಲಿಲ್ಲ. ರಾಹುಲ್ ಮತ್ತು ಪ್ರಿಯಾಂಕಾರ ರಾಜಕೀಯ ಜೀವನದಲ್ಲಿ ಇದು ಬಹುದೊಡ್ಡ ತಿರುಗೇಟು ಆಗಿದೆ. ಸೋನಿಯಾ ಗಾಂಧಿಯಿಂದ ಅಧ್ಯಕ್ಷ ಸಾನ ವಹಿಸಿಕೊಂಡ ಬಳಿಕ ಮೊದಲ ಲೋಕಸಭಾ ಚುನಾವಣೆಯಿದು. ಸಂಘಟನೆಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಡಿದ ಯೋಧನಂತೆ ರಾಹುಲ್ ಇದ್ದರೆ ಪಕ್ಷದೊಳಗಿನ ಕೊರತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದರು.

ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಮರಳಿದರಿಂದ ಸ್ವಲ್ಪ ಚೇತರಿಕೆಯ ನಿರೀಕ್ಷೆಯಿದ್ದರೂ ಲೋಕಸಭಾ ಚುನಾವಣೆಯಲ್ಲಿ ಎಲ್ಲವೂ ಹುಸಿಯಾಯಿತು. ಮೋದಿ ಛಾತಿ ಮುಂದೆ ರಾಹುಲ್ ಹೊಳೆಯುವಲ್ಲಿ ವಿಫರಾದರು. ಇಂದು ಸಂಭಾವಿತ್ವಕ್ಕಿಂತಲೂ ರಾಜಕೀಯ ಚಾಣಾಕ್ಷತೆ ಮುಖ್ಯವಾಗಿದೆ ಎನ್ನುವುದು ಈಗಲಾದರೂ ರಾಹುಲ್ ಅರ್ಥ ಮಾಡಿಕೊಳ್ಳ ಬೇಕಿರುವುದು ಅನಿವಾರ್ಯವಾಗಿದೆ.

ಪೂರ್ವ ಉತ್ತರ ಪ್ರದೇಶದ ಹೊಣೆ ಎತ್ತಿಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ದಾರುಣ ವೈಫಲ್ಯ ಅನುಭವಿಸಿದ್ದಾರೆ. ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ನಡುವೆ ಮತಗಳು ಒಡೆದು ಹೋದರೆ, ಬಿಜೆಪಿ ತನ್ನ ವೋಟ್ ಬ್ಯಾಂಕನ್ನು ಹೆಚ್ಚಿಸಿಕೊಂಡಿತು. ಪಕ್ಷದಲ್ಲಿ ಬಹುತೇಕ ಬದಲಾವಣೆಗಳಿಗೆ ರಾಹುಲ್ ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.