ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ಗಳಲ್ಲಿ ಚಹಾ

0
351

ಸನ್ಮಾರ್ಗ ವಾರ್ತೆ

ಜೈಪುರ,ನ.30 ದೇಶದ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಗ್ಲಾಸುಗಳ ಬದಲಾಗಿ ಮಣ್ಣಿನ ಲೋಟದಲ್ಲಿ ಚಹಾ ಮಾರಾಟ ಮಾಡಲಾಗುವುದು ಎಂದು ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ನಾನೂರು ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಲೋಟೆಯಲ್ಲಿ ಚಹಾ ನೀಡಲಾಗುವುದು. ಮುಂದೆ ದೇಶದ ಎಲ್ಲ ರೈಲ್ವೆ ನಿಲ್ದಾಣದಲ್ಲಿ ಇದನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಭಾರತದ ಉದ್ದೇಶದಲ್ಲಿ ಇಂತಹ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಸಚಿವರು ಹೇಳಿದ್ದು ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುವುದು ಪರಿಸರ ರಕ್ಷಣೆಗೆ ಸಹಾಯಕವಾಗಲಿದೆ. ಜೊತೆಗೆ ಲಕ್ಷಾಂತರ ಮಂದಿಗೆ ಕೆಲಸ ಸಿಗಲಿದೆ ಎಂದು ರಾಜಸ್ಥಾನದಲ್ಲಿ ಹೇಳಿದರು. ಈ ಹಿಂದೆ ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗಲು ಮಣ್ಣಿನ ಕಪ್‍ಗಳಲ್ಲಿ ಚಹಾ ನೀಡುವ ಯೋಚನೆ ಮಂಡಿಸಿದ್ದರು. ‘ಲಾಲು ಕಾ ಕೂಲ್ ಹಟ್’ ಮರಳುತ್ತಿದೆ ಎಂದು ಹಿಂದಿ ಮಾಧ್ಯಮಗಳು ವಿಶ್ಲೇಷಿಸಿವೆ.