ಭಾರತವೆಂಬ ಆಶಯವನ್ನು ಉಳಿಸಿಕೊಳ್ಳಲು ಧ್ವನಿಯೆತ್ತಬೇಕಾದ ಸಮಯವಿದು- ಮನ್‍ಮೋಹನ್ ಸಿಂಗ್

0
426

ಹೊಸದಿಲ್ಲಿ, ಆ. 13: ಭಾರತವೆಂಬ ಆಶಯವನ್ನು ಉಳಿಸಿಕೊಳ್ಳಲು ಧ್ವನಿಯತ್ತಬೇಕಾದ ಸಮಯ ಇದು ಎಂದು ಮಾಜಿ ಪ್ರಧಾನಿ ಡಾ. ಮನ್‍ಮೋಹನ್ ಸಿಂಗ್ ಹೇಳಿದರು. ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದದುಪಡಿಸಿದ ಕ್ರಮದಲ್ಲಿ ಮತ್ತು ನಂತರದ ಘರ್ಷಣಾ ಸ್ಥಿತಿಗೆ ಅವರು ಆತಂಕ ವ್ಯಕ್ತಪಡಿಸಿದರು. ಎಲ್ಲ ಧ್ವನಿಯನ್ನು ಪರಿಗಣಿಸುವುದು ಪ್ರಧಾನ ವಿಷಯ. ಇಂಡಿಯ ಎಂಬ ಮಹತ್ತರ ಆಶಯವನ್ನು ಸಂರಕ್ಷಿಸಬೇಕಾಗಿದೆ. ನಾವು ಧ್ವನಿಯೆತ್ತಿದರೆ ಮಾತ್ರವೇ ಅದು ಸಾಧ್ಯ ಎಂದು ಮಾಜಿ ಪ್ರಧಾನಿ ಹೇಳಿದರು. ಅವರು ಜೈಪಾಲ್ ರೆಡ್ಡಿ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು.

ಭಾರತ ಕಠಿಣ ಪರಿಸ್ಥಿತಿಯಲ್ಲಿ ಹಾದು ಹೋಗುತ್ತಿದೆ. ದೇಶವನ್ನು ಹಿಂತಳ್ಳುವ ಶಕ್ತಿಗಳನ್ನು ಎದುರಿಸಲು ಪ್ರಗತಿಪರ ಚಿಂತಕರೆಲ್ಲರೂ ಸಹಕರಿಸುವುದು ಆವಶ್ಯಕವಾಗಿದೆ ಎಂದು ಮನ್‍ಮೋಹನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here