ರಾಜಸ್ತಾನದಲ್ಲಿ ಒಂದು ಲಕ್ಷ ಜನರಿಗೆ ಚಿಕಿತ್ಸಾ ವ್ಯವಸ್ಥೆ

0
677

ಸನ್ಮಾರ್ಗ ವಾರ್ತೆ

ಜೈಪುರ, ಮಾ. 23: ಕೊರೊನಾ ವ್ಯಾಪಿಸುವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಭಾಗವಾಗಿ ರಾಜಸ್ಥಾನದಲ್ಲಿ ಒಂದು ಲಕ್ಷ ಮಂದಿಯನ್ನು ದೂರದಲ್ಲಿರಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಸಿದ್ಧವಾಗುತ್ತಿದೆ. ರಾಜಸ್ಥಾನದಲ್ಲಿ ಕೊರೊನಾ 28 ಮಂದಿಗೆ ಇದೆ ಎಂದು ದೃಢಪಟ್ಟಿದೆ. ಈ ಪರಿಸ್ಥಿತಿಯಲ್ಲಿ ಮುನ್ನೆಚ್ಚರಿಕೆಯಾಗಿ ಕಾಲೇಜುಗಳು, ಹೊಟೇಲುಗಳು, ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡಲು ಸರಕಾರ ಮುಂದಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲಿ ಕೊರೊನಾ ಶಂಕಿತರನ್ನು ದೂರ ನಿಲ್ಲಿಸಿ ಚಿಕಿತ್ಸೆ ನೀಡುವುದು ಮತ್ತು ಆಯಾ ಜಿಲ್ಲೆಯಲ್ಲಿ ಅದಕ್ಕೆ ವ್ಯವಸ್ಥೆ ಮಾಡಲು ರಾಜಸ್ಥಾನ ಸರಕಾರ ಸೂಚನೆ ನೀಡಿದೆ. ಜೈಪುರದಲ್ಲಿ 10000 ಮಂದಿಗೆ ಚಿಕಿತ್ಸಾ ವ್ಯವಸ್ಥೆ ಸಜ್ಜಾಗುತ್ತಿದೆ.

ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಹಕಾರ ಪಡೆಯುವುದಕ್ಕಾಗಿ ಸೇನೆ ಮತ್ತು ಕೇಂದ್ರ ಅಧೀನದ ಏಜೆನ್ಸಿಗಳ ಅಧಿಕಾರಿಗಳ ಸಭೆಯನ್ನು ರವಿವಾರ ಮುಖ್ಯ ಮಂತ್ರಿ ಗೆಹ್ಲೋಟ್ ಕರೆದಿದ್ದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯಾ ಪ್ರದೇಶಗಳಲಿ ರೋಗ ಪ್ರತಿರೋಧ ಕಾರ್ಯಗಳನ್ನು ಊರ್ಜಿತಗೊಳಿಸಲು ರಾಜ್ಯ ಸರಕಾರ 25 ಕೋಟಿ ರೂಪಾಯಿ ನೀಡಲಿದೆ. ಅಗತ್ಯವಾದರೆ ಇನ್ನಷ್ಟು ಹಣವನ್ನು ಬಿಡುಗಡೆಗೊಳಿಸಲಾಗುವುದು ಎಂದು ಗೆಹ್ಲೋಟ್ ತಿಳಿಸಿದರು. ರಾಜ್ಯದಲ್ಲಿ ಐದಕ್ಕೂ ಹೆಚ್ಚು ಮಂದಿ ಒಂದೆಡೆ ಸೇರಿ ನಿಲ್ಲುವುದನ್ನು ನಿಷೇಧಿಸಲಾಗಿದೆ. ಈ ಹಿಂದೆ ಇಪ್ಪತ್ತು ಮಂದಿಗಿಂತ ಹೆಚ್ಚು ಜನ ಸೇರುವುದನ್ನು ತಡೆಯಲಾಗಿತ್ತು. ಹೊಸ ಪರಿಸ್ಥಿತಿಯಲ್ಲಿ ಐದು ಮಂದಿಗಿಂತ ಹೆಚ್ಚು ಮಂದಿ ಒಂದೆಡೆ ಕಲೆತಿರುವುದನ್ನು ನಿಷೇಧಿಸಲಾಗಿದೆ.