ರಾಜಸ್ಥಾನ: ಬಿಜೆಪಿ ಶಾಸಕಿ ಕೊರೋನದಿಂದ ನಿಧನ

0
129

ಸನ್ಮಾರ್ಗ ವಾರ್ತೆ

ಜೈಪುರ,ನ.30: ರಾಜಸ್ಥಾನದ ಶಾಸಕಿ ಬಿಜೆಪಿ ನಾಯಕಿಯೂ ಆಗಿರುವ ಕಿರಣ್ ಮಹೇಶ್ವರಿ ಕೊರೋನದಿಂದ ಮೃತಪಟ್ಟಿದ್ದು ಅವರಿಗೆ 59 ವರ್ಷ ವಯಸ್ಸಾಗಿತ್ತು. ರಾಜ್‍ಸಾಮಂದ್ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದ ಅವರು ಮೂರು ಸಲ ಆಯ್ಕೆಯಾಗಿದ್ದರು. ಕೊರೋನ ಸೋಂಕು ತಗುಲಿರುವುದು ದೃಢಗೊಂಡ ನಂತರ ಕೆಲವು ತಿಂಗಳು ಮೆದಾಂತ ಆಸ್ಪತ್ರೆಯಲ್ಲಿ ಚಿಕಿತಸೆ ಪಡೆದಿದ್ದರು. ರವಿವಾರ ರಾತ್ರೆ ಅವರು ಮೃತಪಟ್ಟಿದ್ದಾರೆ.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ವಿಧಾನಸಭಾ ಸ್ಪೀಕರ್ ಸಿಪಿ ಜೋಷಿ, ಬಿಜೆಪಿ ರಾಜ್ಯ ಅಧ್ಯಕ್ಷ ಸತೀಷ್ ಪೂನಿಯ, ಹಿರಿಯ ಬಿಜೆಪಿ ನಾಯಕರು ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.