ರಾಜಸ್ಥಾನ: ಮಾದಕದ್ರವ್ಯ ನೀಡಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಬಂಧನ

0
637

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.1: ರಾಜಸ್ಥಾನದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಮೂರು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆಯು ತಡವಾಗಿ ವರದಿಯಾಗಿದೆ.13 ಮತ್ತು 15 ವರ್ಷದ ಬಾಲಕಿಯರನ್ನು ಜೈಪುರ ಮತ್ತು ಕೋಟಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಲಾಗಿದೆ. ಸೆಪ್ಟಂಬರ್ 18ರಂದು ಜಿಲ್ಲೆಯಿಂದ ಹೊರಗೆ ಜೈಪುರ ಮತ್ತು ಕೋಟಕ್ಕೆ ಕರೆದುಕೊಂಡು ಹೋಗಿ ಇಬ್ಬರು ಅಪ್ರಾಪ್ತ ಆರೋಪಿಗಳು ಮತ್ತು ಇತರ ಮೂವರು ಸೇರಿ ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿಯರ ತಂದೆ ಹೇಳಿದ್ದಾರೆ. ಸೆಪ್ಟಂಬರ್ 21ಕ್ಕೆ ಕೋಟದಲ್ಲಿ ಇಬ್ಬರು ಬಾಲಕಿಯರು ಪತ್ತೆಯಾಗಿದ್ದರು.

ನಮ್ಮ ಮೇಲೆ ಅಕ್ರಮ ನಡೆದಿದೆ ಎಂದು ಮೊದಲು ಬಾಲಕಿಯರು ಹೇಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕದ್ರವ್ಯ ನೀಡಿದ ಬಳಿಕ ಸಾಮೂಹಿಕ ಅತ್ಯಾಚಾರ ಮಾಡಲಾಯಿತು ಎಂದು ಹೇಳುತ್ತಿರುವ ವೀಡಿಯೊ ಲಭ್ಯವಾಗಿತ್ತು. ದೂರು ಕೊಟ್ಟರೆ ಕೊಲ್ಲುವುದಾಗಿ ಬೆದರಿಸಿದ್ದರಿಂದ ಹೇಳಿಕೆ ನೀಡಲು ನಿರಾಕರಿಸಿದ್ದರು ಎಂದು ಸಂಬಂಧಿಕರು ಹೇಳಿದರು.

ಘಟನೆಯ ಕುರಿತು ತಂದೆ ಪೊಲೀಸರಿಗೆ ದೂರು ನೀಡಿದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮನ್ನು ತಮ್ಮ ಸಂಬಂಧಿಕರನ್ನೂ ಕೊಲ್ಲುವುದಾಗಿ ಪೊಲೀಸರ ಮುಂದೆಯೇ ಬೆದರಿಕೆಯನ್ನು ಹಾಕಿದ್ದರಿಂದ ಘಟನೆಯ ಬಗ್ಗೆ ಬಾಲಕಿಯರು ಹೇಳಿಕೊಂಡಿಲ್ಲ ಎಂದು ಬಾಲಕಿಯರ ಕುಟುಂಬ ಆರೋಪಿಸಿದೆ.