ರಾಜ್ಯಸಭಾ ಉಪಾಧ್ಯಕ್ಷರ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿ ತಿರಸ್ಕೃತ

0
107

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.21: ರಾಜ್ಯಸಭಾ ಉಪಾಧ್ಯಕ್ಷರ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಯು ರಾಜ್ಯಸಭೆಯಲ್ಲಿ ತಿರಸ್ಕೃತವಾಗಿದೆ. 47 ಸದಸ್ಯರು ಹರಿವಂಶ ಸಿಂಗ್ ವಿರುದ್ಧ ಸಲ್ಲಿಸಿದ ಅವಿಶ್ವಾಸ ಗೊತ್ತುವಳಿ ನೋಟಿಸು ತಿರಸ್ಕೃತವಾಗಿದೆ. ಸದನದ ಶಿಷ್ಟಾಚಾರ ಪ್ರಕಾರ ನೋಟಿಸಿಗೆ ಅವಕಾಶವಿಲ್ಲ ಎಂದು ಅಧ್ಯಕ್ಷ ವೆಂಕಯ್ಯ ನಾಯಿಡು ಗೊತ್ತುವಳಿಗೆ ಅವಕಾಶ ನೀಡಲಿಲ್ಲ.

ವಿವಾದಿತ ಕೃಷಿ ಮಸೂದೆ ಪರ ಮತದಾನದ ವೇಳೆ ಉಪಾಧ್ಯಕ್ಷರು ಪಕ್ಷಪಾತದಿಂದ  ವರ್ತಿಸಿದ್ದಾರೆ ಎಂದು ಅವಿಶ್ವಾಸ ಗೊತ್ತುವಳಿ ನೋಟಿಸು ನೀಡುತ್ತಿದ್ದರು.

ಮತದಾನಕ್ಕೆ ಮನವಿ ಮಾಡಿದರೂ ಅವಸರವಸರವಾಗಿ ಮಸೂದೆಯನ್ನು ಪಾಸು ಮಾಡಲು ಉಪಾಧ್ಯಕ್ಷರು ಶ್ರಮಿಸಿದ್ದಾರೆ. ಪ್ರಜ್ಞಾಪೂರ್ವಕ ಸುರಕ್ಷಾ ಅಧಿಕಾರಿಗಳು ಸದನದಲ್ಲಿ ನಿಲ್ಲಿಸಿ ಪ್ರತಿಪಕ್ಷಗಳಿಗೆ ಮಾತಾನಾಡಲು ಸಾಕಷ್ಟು ಸಮಯ ಕೊಟ್ಟಿಲ್ಲ ಎಂದು ನೋಟಿಸಿನಲ್ಲಿ ಆರೋಪಿಸಲಾಗಿತ್ತು.

ರಾಜ್ಯಸಭೆಯಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದೆ. ಇದೇ ವೇಳೆ, ಕೃಷಿ ಮಸೂದೆ ರಾಜ್ಯಸಭೆಯಲ್ಲಿ ಪ್ರತಿಭಟಿಸಿದ ಸಂಸದರನ್ನು ಅಮಾನತುಗೊಳಿಸಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.