ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳ ಮರುಪ್ರಸಾರ ಸಾಧ್ಯತೆ

0
768

ಸನ್ಮಾರ್ಗ ವಾರ್ತೆ

ನದೆಹಲಿ; ಮಾ. ಕೊರೋನಾವನ್ನು ತಡೆಯುವುದಕ್ಕಾಗಿ ದೇಶಾದ್ಯಂತ 21 ದಿನಗಳ ಲಾಕ್ಡೌನ್ ಜಾರಿಯಲ್ಲಿರುವಂತೆಯೇ ಜನರು ಒತ್ತಡವನ್ನು ತಡೆದುಕೊಳ್ಳುವುದಕ್ಕಾಗಿ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ಮರುಪ್ರಸಾರ ಮಾಡಬೇಕೆಂದು ಅನೇಕರು ಆಗ್ರಹಿಸಿದ್ದು ಇದಕ್ಕೆ ದೂರದರ್ಶನ ಸಕಾರಾತ್ಮಕ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ.

ಸಾವಿರ 987 ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ್ ಅವರ ರಾಮಾಯಣ ಧಾರಾವಾಹಿ ಬಹಳ ಜನಪ್ರಿಯವಾಗಿತ್ತು. ಹಾಗೆಯೇ ಸಾವಿರ 388 ರಲ್ಲಿ ದೂರದರ್ಶನದಲ್ಲಿ ಮೊದಲ ಬಾರಿಗೆ ಪ್ರಸಾರವಾಗಿದ್ದ ಬಿ ಆರ್ ಚೋಪ್ರಾ ಅವರ ಮಹಾಭಾರತ ಧಾರಾವಾಹಿಯೂ ಜನಪ್ರಿಯವಾಗಿತ್ತು. ಇದೀಗ ಟ್ವೀಟರ್ ಮೂಲಕ ಅನೇಕ ಮಂದಿ ಈ ಎರಡು ಧಾರವಾಹಿಗಳನ್ನು ಮರುಪ್ರಸಾರ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಯಾಗಿರುವ ಶಶಿಶೇಖರ ಅವರು ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ಮತ್ತೆ ಪ್ರಸಾರ ಮಾಡುವುದಕ್ಕಾಗಿ ಪ್ರಯತ್ನಗಳನ್ನು ಆರಂಭಿಸಿದ್ದೇವೆ. ಧಾರಾವಾಹಿಗಳ ಹಕ್ಕು ಸ್ವಾಮ್ಯತೆ ಹೊಂದಿರುವವರೊಂದಿಗೆ ಚರ್ಚೆ ಆರಂಭಿಸಿದ್ದು ಮುಂದಿನ ಬೆಳವಣಿಗೆಗಳನ್ನು ಶೀಘ್ರ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕುರಿತಂತೆ ಎರಡು ಧಾರಾವಾಹಿಗಳ ಮರು ಪ್ರಸಾರಕ್ಕೆ ಇರುವ ಪ್ರಕ್ರಿಯೆಗಳೆಲ್ಲ ಪೂರ್ಣಗೊಂಡ ಬಳಿಕ ಸ್ಪಷ್ಟ ಚಿತ್ರಣವನ್ನು ನೀಡಲಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.