ಸನ್ಮಾರ್ಗ ಕುರ್‌ಆನ್ ಕ್ವಿಝ್ ಸ್ಪರ್ಧೆ

(ಅಲ್ ಅಅ್‌ರಾಫ್ ಮತ್ತು ಅಲ್ ಅನ್‍ಫಾಲ್ ಅಧ್ಯಾಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು)
ನಿಯಮಗಳು
1. ಸ್ಪರ್ಧೆಯಲ್ಲಿ ಭಾಗವಹಿಸುವವರು ಈ ಪ್ರಕಟಿತ ಹಾಳೆಗಳಲ್ಲಿ ಅಥವಾ ಬಿಳಿ ಹಾಳೆಗಳಲ್ಲಿ ಉತ್ತರಗಳನ್ನು ಬರೆದು ಕಳುಹಿಸಬೇಕು.
2. ನಿಮ್ಮ ಹೆಸರು, ಪೂರ್ಣ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಮಕ್ಕಳ  ಅಥವಾ ಇತರರ ಹೆಸರಲ್ಲಿ ಸ್ಪರ್ಧಿಸುವುದನ್ನು ಪರಿಗಣಿಸಲಾಗುವುದಿಲ್ಲ. ಉತ್ತರದ ಜೊತೆ ನಿಮ್ಮ ಪಾಸ್‍ಪೋರ್ಟ್    ಅಳತೆಯ ಒಂದು ಭಾವಚಿತ್ರವನ್ನು ಕಳುಹಿಸಿಕೊಡಿ.
3. ಸನ್ಮಾರ್ಗ‌ ವೆಬ್‍ಸೈಟ್ (www.Sanmarga.com)ನಲ್ಲೂ ಈ ಸ್ಪರ್ಧೆಯ ಪ್ರಶ್ನೆಗಳನ್ನು ಪ್ರಕಟಿಸಲಾಗಿದ್ದು,  ವಾಟ್ಸ್ ಆ್ಯಪ್ ಮೂಲಕವೂ ಈ ಪ್ರಶ್ನೆಗಳ ವೆಬ್ ಲಿಂಕನ್ನು ಹಂಚಲಾಗುತ್ತದೆ. ಒಂದು ವೇಳೆ ರಮಝಾನ್   ವಿಶೇಷಾಂಕ ಲಭ್ಯವಾಗದವರು ಈ ಪ್ರಶ್ನೆಗಳನ್ನು ಓದಿಕೊಂಡು ಬಿಳಿ ಹಾಳೆಯಲ್ಲಿ ಉತ್ತರವನ್ನು ಬರೆದು  ಕಳುಹಿಸಿಕೊಡಬಹುದು. ಅಥವಾ 8277373059 ಈ ಸಂಖ್ಯೆಗೆ ಉತ್ತರಗಳನ್ನು ಟೈಪ್ ಮಾಡಿ ಕಳುಹಿಸುವ   ಮೂಲಕವೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆದರೆ ಉತ್ತರ ಪ್ರತಿಯ ಫೋಟೋ ತೆಗೆದು ವಾಟ್ಸ್ ಆಪ್ ಅಥವಾ ಈ-ಮೇಲ್ ಮೂಲಕ ಕಳುಹಿಸಿದರೆ ಪರಿಗಣಿಸಲಾಗುವುದಿಲ್ಲ.
4. ನಿಮ್ಮ ಉತ್ತರಗಳು ಸ್ಪಷ್ಟವಾಗಿರಲಿ.
5. ಪ್ರತಿ ಉತ್ತರದ ಮುಂದೆ ಅಧ್ಯಾಯದ ಹೆಸರು ಮತ್ತು ಸೂಕ್ತಗಳ ಸಂಖ್ಯೆ ಬರೆದರೆ ಉತ್ತಮ.
6. ಪ್ರತಿ ಉತ್ತರಕ್ಕೂ ಒಂದು ಅಂಕ ನೀಡಲಾಗುವುದು.
7. ವಾಟ್ಸ್ ಆಪ್ ಮೂಲಕ ಉತ್ತರಿಸುವವರು (ವಾಟ್ಸ್ ಅಪ್ ಸಂಖ್ಯೆ +91 8277373059) ತಮ್ಮ ಉತ್ತರಗಳನ್ನು ಕನ್ನಡ ಲಿಪಿಯಲ್ಲಿ ಟೈಪ್ ಮಾಡಿ ಕಳುಹಿಸಬೇಕು.
8. ಉತ್ತರ ಪತ್ರಿಕೆಯಲ್ಲಿ ನಕಲು ಆಗದಂತೆ  ಜಾಗ್ರತೆ ವಹಿಸಬೇಕು. ನಾವು ಸ್ಪರ್ಧಿಗಳಿಂದ ಪ್ರಾಮಾಣಿಕತೆಯನ್ನು ನಿರೀಕ್ಷಿಸುತ್ತೇವೆ. ಇದು ಕುರ್‍ಆನನ್ನು ಅಧ್ಯಯನ ನಡೆಸಲು ಪ್ರೇರೇಪಿಸುವುದಕ್ಕೆ ಆಯೋಜಿಸಲಾಗಿರುವ ಸ್ಪರ್ಧೆ
ಯಾಗಿದ್ದು, `ನಕಲು’ ಇಡೀ ಉದ್ದೇಶವನ್ನೇ ವ್ಯರ್ಥಗೊಳಿಸಬಹುದು.
9. ಉತ್ತರ ಕಳುಹಿಸಲು ಕೊನೆಯ ದಿನಾಂಕ ಜೂನ್: 08, 2019
10. ಅಂತಿಮ ತೀರ್ಮಾನ ತೀರ್ಪುಗಾರರದ್ದಾಗಿರುವುದು.
ವಿವರಗಳಿಗಾಗಿ ಸಂಪರ್ಕಿಸಿ: +9880096128
[ಬಹುಮಾನಗಳು: ಪ್ರಥಮ – ರೂ. 6,000, ದ್ವಿತೀಯ – ರೂ. 5,000, ತೃತೀಯ – ರೂ. 4,000
[ತಲಾ 1,000 ರೂಪಾಯಿಯಂತೆ 10 ಸಮಾಧಾನಕರ ಬಹುಮಾನಗಳು]

ಉತ್ತರ ಕಳುಹಿಸಬೇಕಾದ ವಿಳಾಸ
ಸಂಚಾಲಕರು, ಸನ್ಮಾರ್ಗ ಕುರ್‍ಆನ್ ಸ್ಪರ್ಧೆ ವಿಭಾಗ, ಸನ್ಮಾರ್ಗ ವಾರ ಪತ್ರಿಕೆ
ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು- 575001

I. ಬಿಟ್ಟಗಳನ್ನು ಪದ ತುಂಬಿರಿ.
1.    ___________ ಅತ್ಯುತ್ತಮ ಉಡುಪಾಗಿರುತ್ತದೆ. ಇದು ಅಲ್ಲಾಹನ ಕುರುಹುಗಳಲ್ಲೊಂದಾಗಿದೆ.
2.    ಮೂಸಾ(ಅ)ರಿಗೆ ದಿವ್ಯವಾಣಿ ಅವತೀರ್ಣವಾಗುತ್ತಿದ್ದ ಸ್ಥಳ ___________
3.    ಅಲ್ಲಾಹನ ಪ್ರಸ್ತಾಪ ಕೇಳಿದೊಡನೆ ___________ ಕಂಪಿಸುವವರೇ ನಿಜವಾದ ಸತ್ಯವಿಶ್ವಾಸಿಗಳು.
4.    ನೀವು ___________ಗಳನ್ನು ಬಯಸುತ್ತೀರಿ. ವಾಸ್ತವದಲ್ಲಿ ಅಲ್ಲಾಹನ ದೃಷ್ಟಿಯಲ್ಲಿ ಪರಲೋಕವಿದೆ.
5.    ದೇವಾಜ್ಞೆಯಂತೆ ಮೂಸಾ(ಅ)ರು ಸಿನಾಯ್ ಪರ್ವತದಲ್ಲಿ ___________ ದಿನಗಳ ಕಾಲ ತಂಗಿದ್ದರು.
6.    ನಿಶ್ಚಯವಾಗಿಯೂ ಭೂಮಿಯ ಮೇಲೆ ಚಲಿಸುವ ಸೃಷ್ಟಿಗಳಲ್ಲಿ ___________ ಅನ್ನು ನಿರಾಕರಿಸುವವರೇ ಅಲ್ಲಾಹನ ಬಳಿ ಅತ್ಯಂತ ನಿಕೃಷ್ಟರು.
7.    ಅಲ್ಲಾಹನು ಮನುಷ್ಯನ ಮತ್ತು ಅವನ ___________ ನಡುವೆ ಇದ್ದಾನೆಂದೂ ನೀವು ಅವನ ಕಡೆಗೆ ಒಟ್ಟುಗೂಡಿಸಲ್ಪಡುವಿರೆಂದೂ ಅರಿತುಕೊಳ್ಳಿರಿ.
8.    ಮೂಸಾ(ಅ)ರ ಅನುಪಸ್ಥಿತಿಯಲ್ಲಿ ಅವರ ಜನಾಂಗದವರು ___________ನ್ನು ತಯಾರಿಸಿದರು.
9.    ಶತ್ರುವು ___________ಗಳ ಕಡೆಗೆ ವಾಲಿದರೆ ನೀವೂ ಅದಕ್ಕೆ ಸಿದ್ಧರಾಗಿರಿ ಮತ್ತು ಅಲ್ಲಾಹನ ಮೇಲೆ         ಭರವಸೆಯನ್ನಿರಿಸಿರಿ.
10.    ಓ ಸತ್ಯವಿಶ್ವಾಸಿಗಳೇ, ನೀವು ದೇವಭಯವನ್ನಿರಿಸಿಕೊಂಡರೆ ಅಲ್ಲಾಹ್ ನಿಮಗೊಂದು ___________ ಒದಗಿಸುವನು.
11.    ಭೂಮಿ-ಆಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದನು. ತರುವಾಯ ತಮ್ಮ ___________ದಲ್ಲಿ ವಿರಾಜಮಾನನಾದನು.
12.    ವಿಶ್ವಾಸವಿರಿಸಿದರೂ ವಲಸೆ ಮಾಡಿ ಬಾರದವರೊಂದಿಗೆ ಅವರು ವಲಸೆ ಮಾಡಿ ಬರುವವ ವರೆಗೂ ನಿಮ್ಮ ___________ ಇಲ್ಲ.
13.    ಜನರು ___________ ಮಾಡುತ್ತಿರುವಾಗ ಅವರನ್ನು ಶಿಕ್ಷಿಸುವುದು ಅಲ್ಲಾಹನ ರೂಢಿಯಲ್ಲ.
14.    ಅಲ್ಲಾಹನ ಗ್ರಂಥದಲ್ಲಿ ___________ ಪರಸ್ಪರರು ಹೆಚ್ಚು ಹಕ್ಕುದಾರರು.
15.    ಓ ಸತ್ಯವಿಶ್ವಾಸಿಗಳೇ, ಕ್ಷೋಭೆ ಅಳಿದು ಹೋಗುವ ವರೆಗೂ ___________ ಸಂಪೂರ್ಣವಾಗಿ ಅಲ್ಲಾಹನಿಗಾಗಿ ಆಗುವ ವರೆಗೂ ಈ ಸತ್ಯನಿಷೇಧಿಗಳೊಡನೆ ಹೋರಾಡಿರಿ.
16.    ಪರಸ್ಪರರಿಂದ ಮರೆಗೊಳಿಸಲ್ಪಟ್ಟ ಅವರ ___________ ಪರಸ್ಪರರ ಮುಂದೆ ತೆರೆಯುವಂತಾಗಲೆಂದು, ಶೈತಾನನು ಅವರನ್ನು ಪ್ರಚೋದಿಸಿದನು.
17.    ಓ ಆದಮರ ಸಂತತಿಯೇ ನಾವು ನಿಮ್ಮ ದೇಹದ ಲಜ್ಜಾ ಭಾಗಗಳನ್ನು ಮರೆಸಲಿಕ್ಕಾಗಿ ದೇಹದ ರಕ್ಷಣೆ ಹಾಗೂ ಅಲಂಕಾರ ಸಾಧನವಾಗಿ ನಿಮಗೆ ___________ನ್ನು ಇಳಿಸಿರುತ್ತೇವೆ.
18.    ಕೆಟ್ಟ ನೆಲದಿಂದ ___________ ಬೆಳೆಯ ವಿನಃ ಇನ್ನೇನು ಹೊರಬರುವುದಿಲ್ಲ.
19.    ಆದ್ ಜನಾಂಗದವರು ___________ಗಳನ್ನು ಕಟ್ಟಡಗಳ ರೂಪದಲ್ಲಿ ಕೊರೆಯುತ್ತಿದ್ದರು.
20.    ನಾವು ಈ ಶೈತಾನರನ್ನು ___________ಗಳ ಸಂರಕ್ಷಕರಾಗಿ ಮಾಡಿದ್ದೇವೆ.

II. ಬಿಟ್ಟ ಪದಗಳನ್ನು ತುಂಬಿರಿ.
21.    ಅನೇಕ ___________ ಮತ್ತು ___________ರನ್ನು ನಾವು ನರಕಕ್ಕಾಗಿಯೇ ಸೃಷ್ಟಿಸಿದ್ದೇವೆಂಬುದು ಪರಮಾರ್ಥ.
22.    ನಮ್ಮ ವಚನಗಳನ್ನು ___________ ಆಗಿಸುವವರು ಮತ್ತು ಅವುಗಳ ವಿರುದ್ಧ ___________ ತೋರುವವರೇ ನರಕಾಗ್ನಿಯವರಾಗಿದ್ದು ಅಲ್ಲಿ ಅವರು ಸದಾ ಕಾಲ ವಾಸಿಸುವರು.
23.    ಫಿರ್‍ಔನನ ಜನರಿಗೆ ಬುದ್ಧಿ ಬರಬಹುದೆಂದು ನಾವು ಅವರನ್ನು ಅನೇಕ ವರ್ಷಗಳ ವರೆಗೆ ___________ ಮತ್ತು ___________ದಲ್ಲಿ ಸಿಲುಕಿಸಿದೆವು.
24.    ಬದ್ರ್ ಯುದ್ಧದಲ್ಲಿ ಅಲ್ಲಾಹನು ಮುಸ್ಲಿಮರಿಗೆ ___________ ಮತ್ತು  ___________ ರೂಪದಲ್ಲಿ ಸಹಾಯ ಮಾಡಿದನು.
25.    ನಾವು ಜ್ಞಾನದ ಆಧಾರದಲ್ಲಿ ಸವಿಸ್ತಾರಗೊಳಿಸಿರುವ ಹಾಗೂ ವಿಶ್ವಾಸವಿಡುವವರಿಗೆ ___________ ಮತ್ತು ___________ಯಾಗಿರುವ ಗ್ರಂಥವನ್ನು ಇವರ ಬಳಿಗೆ ತಂದಿದ್ದೇವೆ.
26.    ಈ ಸಮರಾರ್ಜಿತ ___________ಸೊತ್ತು ___________ ಮತ್ತು ರದ್ದು.
27.    ನೀವು ಪರಸ್ಪರ ಶತ್ರುಗಳಾಗಿರುತ್ತೀರಿ ಮತ್ತು ನಿಮಗಾಗಿ ಒಂದು ನಿರ್ದಿಷ್ಟ ಕಾಲಾವಧಿವರೆಗೆ ಭೂಮಿಯ ಮೇಲೆಯೇ ___________ ಮತ್ತು ___________ಗಳಿವೆ.
28.     ___________ ಮತ್ತು ___________ನೊಂದಿಗೆ ಅಲ್ಲಾಹನನ್ನೇ ಕೂಗಿ ಪ್ರಾರ್ಥಿಸಿರಿ.
29.    ಅಲ್ಲಾಹ್ ಮತ್ತು ಅವನ ರಸೂಲರನ್ನು ಅನುಸರಿಸಿರಿ. ಪರಸ್ಪರ ಜಗಳಾಡಬೇಡಿರಿ. ಅನ್ಯಥಾ ನಿಮ್ಮಲ್ಲಿ ___________ವುಂಟಾಗುವುದು  ಮತ್ತು ನೀವು ___________ಗಳಾಗಿ ಬಿಡುವಿರಿ.
30.    ಇದನ್ನು ಅವತೀರ್ಣಗೊಳಿಸುವ ಉದ್ದೇಶವು ನೀವು ಇದರ ಮೂಲಕ (ನಿಷೇಧಿಗಳಿಗೆ) ___________ ನೀಡಬೇಕು ಮತ್ತು ವಿಶ್ವಾಸಿಗಳಿಗೆ ___________ ನೀಡಬೇಕು ಎಂಬುದಾಗಿರುತ್ತದೆ.

III. ಯಾರು ಯಾರಿಗೆ ಹೇಳಿದರು?
31.    “ನೀವು ಬರುವುದಕ್ಕೆ ಮುಂಚೆಯೂ ನಾವು ಸತಾಯಿಸಲ್ಪಡುತ್ತಿದ್ದೇವು. ಈಗ ನೀವು ಬಂದ ಬಳಿಕವೂ ಸತಾಯಿಸಲ್ಪಡುತ್ತಿದ್ದೇವೆ.”
32.    “ವಾಸ್ತವದಲ್ಲಿ ನೀನು ಸ್ವಯಂ ತನ್ನ ಅಪಮಾನವನ್ನು ಬಯಸುವವರಲ್ಲಾಗಿರುತ್ತೀ”
33.    “ನಿಮ್ಮ ಪ್ರಭು ನಿಮಗೆ ಮಾಡಿದ್ದ ವಾಗ್ದಾನಗಳು ಸರಿಯಾಗಿರುವುದನ್ನು ನೀವು ಕಂಡುಕೊಂಡಿರಾ?”
34.    “ಇದೋ ಈಗ ಸುಡುವ ಶಿಕ್ಷೆಯನ್ನು ಸವಿಯಿರಿ. ನಿಮ್ಮ ಸ್ವಹಸ್ತಗಳು ಈ ಮುಂಚೆ ಸಿದ್ಧಗೊಳಿಸಲ್ಪಟ್ಟಿದ್ದ ಸಾಧನಗಳ ಪ್ರತಿಫಲವಿದು.”
35.    “ಅದೋ ಮುಂದಿರುವ ಪರ್ವತವನ್ನು ನೋಡು. ಅದು ತನ್ನ ಸ್ಥಾನದಲ್ಲಿ ಸ್ಥಿರವಾಗಿ ನಿಂತರೆ ನೀನು ನನ್ನನ್ನು         ನೋಡಬಲ್ಲೆ”
36.    “ನಮ್ಮ ಮೇಲೆ ಒಂದಿಷ್ಟು ನೀರನ್ನು ಸುರಿದುಬಿಡಿರಿ ಅಥವಾ ಅಲ್ಲಾಹನು ನಿಮಗೆ ಕೊಟ್ಟ ಆಹಾರದಿಂದಲೇ ತುಸು ಎಸೆದು  ಬಿಡಿರಿ.”
37.    “ನಾನು ನಿಮ್ಮ ಕೈಕಾಲುಗಳನ್ನು ವಿರುದ್ಧ ದಿಕ್ಕುಗಳಿಂದ ಕಡಿಸಿ ಬಿಡುವೆನು. ಅನಂತರ ನಿಮ್ಮೆಲ್ಲರನ್ನು   ಶಿಲುಬೆಗೇರಿಸುವೆನು.”
38.    “ನಿಮ್ಮ ಪ್ರಭು ನೂಹರ ಜನಾಂಗದ ತರುವಾಯ ನಿಮ್ಮನ್ನು ಅದರ ಉತ್ತರಾಧಿಕಾರಿಯನ್ನಾಗಿಯೂ ದೃಢ ಕಾಯರನ್ನಾಗಿಯೂ ಮಾಡಿದನೆಂಬುದನ್ನು ಮರೆಯದಿರಿ.”
39.    “ನೀವು ಸತ್ಯವಿಶ್ವಾಸಿಗಳನ್ನು ಸುಸ್ಥಿರಗೊಳಿಸಿರಿ. ನಾನೀಗಲೇ ಸತ್ಯ ನಿಷೇಧಿಗಳ ಹೃದಯಗಳಲ್ಲಿ ಭೀತಿಯನ್ನುಂಟು ಮಾಡುತ್ತೇನೆ.”
40.    “ಭೂಮಿಯಲ್ಲಿ ಸುಧಾರಣೆಯಾದ ಬಳಿಕ ಕ್ಷೋಭೆಯನ್ನುಂಟು ಮಾಡಬೇಡಿರಿ.”

IV. ಸರಿಯೋ ತಪ್ಪೋ ತಿಳಿಸಿ.
41.    ಜನರು ಕ್ಷಮೆಯಾಚಿಸುವಾಗ ಅವರನ್ನು ಶಿಕ್ಷಿಸುವುದು ಅಲ್ಲಾಹನ ರೂಢಿ.
42.    ಮೂಸಾರು (ತಮ್ಮ ಸಂಗಡ) ನಾವು ಗೊತ್ತುಪಡಿಸಿದ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ತಮ್ಮ ಜನಾಂಗದ ಎಪ್ಪತ್ತು ಮಂದಿಯನ್ನು ಆರಿಸಿಕೊಂಡರು.
43.    ಯಾರ ತೂಗು ತಟ್ಟೆಯು ಹಗುರವಾಗಿರುವುದೋ ಅವರೇ ಸಾರ್ಥಕ್ಯ ಹೊಂದುವರು.
44.    ಭೂಮಿಯಲ್ಲಿ ಶತ್ರುಗಳನ್ನು ಚೆನ್ನಾಗಿ ಸದೆಬಡಿಯುವವರೆಗೂ ತನ್ನ ಬಳಿ ಸೆರೆಯಾಳುಗಳಿರುವುದು ಓರ್ವ ಪ್ರವಾದಿಗೆ ಶೋಭಿಸುವುದಿಲ್ಲ.
45.    ಮೂಸಾರ ಅನುಪಸ್ಥಿತಿಯಲ್ಲಿ ಅವರ ಜನಾಂಗದವರು ತಮ್ಮ ಅಭರಣಗಳಿಂದ ತಯಾರಿಸಿದ ಕರುವಿನ ವಿಗ್ರಹದಿಂದ ಕತ್ತೆಯ ಸ್ವರ ಹೊರಡುತ್ತಿತ್ತು.

V. ಆವರಣ ಹಾಕಿದ ಪದ ಯಾರಿಗೆ ಅನ್ವಯಿಸುತ್ತದೆ?
46.    ಮೂಸಾರು(ಅ) ತಮ್ಮ (ಸಹೋದರನ) ತಲೆಗೂದಲನ್ನು ಹಿಡಿದೆಳೆದರು.
47.    ದುರುದ್ದೇಶದಿಂದ (ಇದನ್ನು) ಮುಟ್ಟಬೇಡಿರಿ. ಅನ್ಯಥಾ ಒಂದು ವೇದನಾಯುಕ್ತ ಯಾತನೆ ನಿಮ್ಮನ್ನು ಅಕ್ರಮಿಸುವುದು.
48.    ಅವರು (ಅದರ) ಅರ್ಹ ವ್ಯವಸ್ಥಾಪಕರಲ್ಲ. ಧರ್ಮನಿಷ್ಠರು ಮಾತ್ರ ಅದರ ಅರ್ಹ ವ್ಯವಸ್ಥಾಪಕರಾಗಬಲ್ಲರು.
49. ನಾನು (ನಿಮ್ಮ) ನೈಜ ಹಿತಚಿಂತಕನಾಗಿದ್ದೇನೆಂದು ಅವರೊಡನೆ ಆಣೆ ಹಾಕಿ ಹೇಳಿದನು.
50. (ಆ ಜನಾಂಗದ ಮೇಲೆ) ನಾವೊಂದು ಮಳೆಗರೆದೆವು. ಅನಂತರ ಆ ಅಪರಾಧಿಗಳ ಪಾಡೇನಾಯಿತೆಂದು ನೋಡಿರಿ.

VI. ಈ ಸೂಕ್ತಗಳನ್ನು ಯಾರ ಕುರಿತಾಗಿ ಹೇಳಲಾಗಿದೆ?
51.    ನಿಮಗೆ ಅಖಿಲ ಜಗತ್ತಿನ ಜನಾಂಗಗಳ ಮೇಲೆ ಶ್ರೇಷ್ಠತೆ ಪ್ರದಾನ ಮಾಡಿದವನು ಅಲ್ಲಾಹನೇ ಆಗಿರುತ್ತಾನೆ.
52.    ಅವರ ಸ್ವರ್ಗ ಪ್ರವೇಶವು ಸೂಜಿಯ ರಂಧ್ರದೊಳಗೆ ಒಂಟೆ ಪ್ರವೇಶಿಸುವಷ್ಟೇ ಅಸಂಭವ.
53.    ನಿಮ್ಮ ಹೃದಯಗಳಲ್ಲೇನಾದರೂ ಒಳಿತು ಇರುವುದೆಂದು ಅಲ್ಲಾಹನಿಗೆ ತಿಳಿದರೆ ಅವನು ನಿಮ್ಮಿಂದ ಪಡೆದುದಕ್ಕಿಂತಲೂ ಉತ್ತಮವಾದುದನ್ನು ನಿಮಗೆ ನೀಡುವನು.
54.    ಯಾವ ಕಾರ್ಯಗಳಿಂದ ಅವರನ್ನು ತಡೆಯಲಾಗಿತ್ತೋ ಅವುಗಳನ್ನೇ ಅವರು ತಮ್ಮ ಉದ್ಧಟತನದಿಂದ ಮಾಡುತ್ತ ಹೋದಾಗ “ಹೀನ ವಾನರರಾಗಿರಿ” ಎಂದು ನಾವು ಹೇಳಿದೆವು.
55.    ನೀವು ಭೂಮಿಯಲ್ಲಿರುವ ಸಕಲ ಸಂಪತ್ತನ್ನು ಖರ್ಚು ಮಾಡಿದರೂ ಇವರ ಹೃದಯಗಳನ್ನು ಜೋಡಿಸಲಾಗುತ್ತಿರಲಿಲ್ಲ.

VII. ಇದು ಯಾರ ಪ್ರಾರ್ಥನೆ?
56.    “ಓ ನಮ್ಮ ಪ್ರಭೂ, ನಮ್ಮ ಮತ್ತು ನಮ್ಮ ಜನಾಂಗದ ನಡುವೆ ಸರಿಯಾಗಿ ತೀರ್ಮಾನ ಮಾಡಿಬಿಡು. ನೀನು ಅತ್ಯುತ್ತಮ ತೀರ್ಪು ನೀಡುವವನಾಗಿರುತ್ತೀ.”
57.    “ಓ ನಮ್ಮ ಪ್ರಭೂ, ನಾವು ನಮ್ಮ ಮೇಲೆ ಅನ್ಯಾಯವೆಸಗಿಕೊಂಡೆವು. ಈಗ ನೀನು ನಮ್ಮನ್ನು ಕ್ಷಮಿಸದಿದ್ದರೆ ಹಾಗೂ ನಮ್ಮ ಮೇಲೆ ಕೃಪೆ ದೋರದಿದ್ದರೆ ನಿಶ್ಚಯವಾಗಿಯೂ ನಾವು ನಷ್ಟ ಹೊಂದುವವರಲ್ಲಾಗುವೆವು”
58. “ನಮಗೆ ಈ ಮಾರ್ಗವನ್ನು ತೋರಿಸಿಕೊಟ್ಟ ಅಲ್ಲಾಹನಿಗೆ ಸರ್ವಸ್ತುತಿಯು. ಅಲ್ಲಾಹ್ ನಮಗೆ ಮಾರ್ಗದರ್ಶನ ನೀಡದಿರುತ್ತಿದ್ದರೆ, ನಾವು ಸ್ವಯಂ ಮಾರ್ಗದರ್ಶನ ಹೊಂದುತ್ತಿರಲಿಲ್ಲ.”
59.    “ಓ ನನ್ನ ಪ್ರಭೂ, ನನ್ನನ್ನೂ ನನ್ನ ಸಹೋದರನನ್ನೂ ಕ್ಷಮಿಸು ಮತ್ತು ನಮ್ಮನ್ನು ನಿನ್ನ ಕರುಣೆಯಲ್ಲಿ ಸೇರಿಸಿಕೋ,  ನೀನು ಅತ್ಯಂತ ಕೃಪಾಳುವಾಗಿರುವೆ.”
60.    “ಓ ನಮ್ಮ ಪ್ರಭೂ, ನಮ್ಮನ್ನು ಈ ಅಕ್ರಮಿಗಳೊಂದಿಗೆ ಸೇರಿಸಬೇಡ”.

VIII. ಉತ್ತರಿಸಿರಿ.
61.    ಅಲ್ಲಾಹನು ಸತ್ಯವಿಶ್ವಾಸಿಗಳ ಸಹಾಯಕ್ಕಾಗಿ ಎಷ್ಟು ದೇವಚರರನ್ನು ಕಳುಹಿಸುತ್ತಲಿದ್ದನು?
62.    ಪ್ರವಾದಿ ಮುಹಮ್ಮದ್(ಸ) ಬದ್ರ್ ಯುದ್ಧಕ್ಕೆ ಹೊರಟ ಸಂದರ್ಭದಲ್ಲಿ ಅಲ್ಲಾಹನು ಅವರಿಗೆ ತೋರಿಸಿದ ಸ್ವಪ್ನ ಯಾವುದು?
63.    ಅಲ್ಲಾಹನ ಬಳಿ ಅತ್ಯಂತ ಕೀಳ್ತರದ ಪ್ರಾಣಿಗಳು ಎಂದು ಯಾರ ಕುರಿತಾಗಿ ಹೇಳಲಾಗಿದೆ?
64. “ಅವನ ಪರಿಸ್ಥಿತಿಯು ನಾಯಿಯಂತಾಯಿತು” ಎಂದು ಅಲ್ಲಾಹನು ಯಾರ ಕುರಿತಾಗಿ ಹೇಳಿರುವನು?
65. ಫಿರ್‍ಔನನ ಕಾಲದಲ್ಲಿ ಬನೀ ಇಸ್ರಾಈಲರು ಎದುರಿಸುತ್ತಿದ್ದಂತಹ ಅತಿ ದೊಡ್ಡ ಪರೀಕ್ಷೆ ಯಾವುದು?
66. ಇಬ್ಲೀಸನು ಪ್ರಥಮವಾಗಿ ಅಲ್ಲಾಹನೊಂದಿಗೆ ಹೇಳಿದ ಅಹಂಕಾರದ ಮಾತು ಯಾವುದು?
67.    “ನಾವು ಚಂಡಮಾರುತ ಕಳುಹಿಸಿದೆವು. ಮಿಡತೆಗಳ ಕೂಟವನ್ನು ಬಿಟ್ಟೆವು. (ಧಾನ್ಯ ಕೆಡಿಸುವ ಕೀಟಗಳನ್ನು ಹಬ್ಬಿಸಿದೆವು.” ಇದು ಅಲ್ಲಾಹನು ಯಾವ ಜನಾಂಗಕ್ಕೆ ನೀಡಿದ ಶಿಕ್ಷೆ?
68. ಸೀನಾಯ್ ಮರುಭೂಮಿಯಲ್ಲಿ ಅಲ್ಲಾಹನು ಬನೀ ಇಸ್ರಾಈಲರಿಗೆ ನೀಡಿದ ಮೂರು ಅನುಗ್ರಹಗಳು ಯಾವುವು?
69. ಸೂರ ಅಲ್ ಅಅ್‌ರಾಫ್‍ನಲ್ಲಿ ಪ್ರಸ್ತಾಪಿಸಿದ ಮೂಸಾ(ಅ)ರ ಮೂರು ಪವಾಡಗಳು ಯಾವುವು?
70.    ವಿಚಾರಣೆಯ ದಿನ ಅಲ್ಲಾಹನು ಸಂದೇಶವಾಹಕರೊಡನೆ ಏನೆಂದು ಪ್ರಶ್ನಿಸುತ್ತಾನೆ?

IX. ಅರಬಿ ಪದದ ಅರ್ಥ ಬರೆಯಿರಿ:
71.    ಅಅ್‌ರಾಫ್    –
72.    ಅನ್‍ಫಾಲ್    –
73.    ಸಬ್ತ್    –
74.    ಅಮಾನತ್    –
75.    ತಕ್ವಾ    –