ಪುಟಿನ್‍ರಿಂದ ಸಂವಿಧಾನ ಸುಧಾರಣೆ ಘೋಷಣೆ; ರಷ್ಯದ ಪ್ರಧಾನಿ ರಾಜೀನಾಮೆ

0
637

ಸನ್ಮಾರ್ಗ ವಾರ್ತೆ

ಮಾಸ್ಕೊ, ಜ. 16: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಂವಿಧಾನ ಸುಧಾರಣೆ ಘೋಷಿಸಿದ ಬೆನ್ನಿಗೆ ಪ್ರಧಾನಿ ದಿಮಿತ್ರಿ ಮೆಡ್ವಡೇವ್ ರಾಜೀನಾಮೆ ನೀಡಿದರು. ಪುಟಿನ್‍ರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಗುರಿ ತಲುಪುವುದರಲ್ಲಿ ಸಚಿವ ಸಂಪುಟ ವಿಫಲವಾಗಿದೆ ಎಂದು ಪುಟಿನ್ ಹೇಳಿದ್ದರು.

ಮೆಡ್ವಡೇವ್‍ರಿಗೆ ಕೃತಜ್ಞತೆ ಸೂಚಿಸಿ ಪ್ರಸಿಡೆನ್ ಶಿಯಲ್ ಕೌನ್ಸಿಲ್ ಉಪಮುಖ್ಯಸ್ಥನನ್ನಾಗಿ ಮೆಡ್ವಡೇವ್‍ರನ್ನು ಪುಟಿನ್ ನೇಮಕಗೊಳಿಸಿದರು. ಹೊಸ ಸಚಿವ ಸಂಪುಟವನ್ನು ಘೊಷಿಸುವವರೆಗೆ ಮಂತ್ರಿಗಳು ಅವೇ ಹುದ್ದೆಯಲ್ಲಿ ಮುಂದುವರಿಯುವಂತೆ ಪುಟಿನ್ ಆಗ್ರಹಿಸಿದ್ದಾರೆ. ಇದೇವೇಳೆ ಪಾರ್ಲಿಮೆಂಟಿನಲ್ಲಿ ಹೆಚ್ಚು ಅಧಿಕಾರ ನೀಡುವ ರೀತಿಯಲ್ಲಿ ಸುಧಾರಣೆ ಜಾರಿಗೆ ತರಲು ಅವರು ಬಯಸಿದ್ದಾರೆ. ಪ್ರಧಾನಮಂತ್ರಿ, ಸಚಿವರನ್ನು ಆಯ್ಕೆ ಮಾಡುವ ಅಧಿಕಾರ ಪಾರ್ಲಿಮೆಂಟಿಗೆ ನೀಡಲಾಗುವುದು. ಈಗ ಅಧ್ಯಕ್ಷರು ಈ ಅಧಿಕಾರ ಹೊಂದಿದ್ದಾರೆ. ಇದೇವೇಳೆ ಪಾರ್ಲಿಮೆಂಟರಿ ರೀತಿಯಲ್ಲಿ ಪರಿವರ್ತನೆಯಾದ ರಷ್ಯ ಸುಸ್ಥಿರವಾಗಿರದು ಎಂದು ಪುಟಿನ್ ಹೇಳಿದರು. ಪುಟಿನ್‍ರ ನಿಕಟ ಅನುಯಾಯಿಯಾದ ಮೆಡ್ವಡೇವ್ 2012ರಿಂದ ಪ್ರಧಾನಿಯಾಗಿದ್ದು 2008ರಿಂದ 2012ರವರೆಗೆ ರಷ್ಯದ ಅಧ್ಯಕ್ಷರಾಗಿದ್ದರು.