ರವೂಪ್ ಒಂಟಿಯಲ್ಲ, ಅವರಿಗೆ ನ್ಯಾಯ ಒದಗಿಸಲು ಪಕ್ಷ ಹೋರಾಡಲಿದೆ- ವೆಲ್ಫೇರ್ ಪಾರ್ಟಿ

0
503

ಸನ್ಮಾರ್ಗ ವಾರ್ತೆ-

ಮಂಗಳೂರು, ಆ. 20- ಅಮಾಯಕರನ್ನು ಸಮಾಜಘಾತುಕ ಶಕ್ತಿಗಳಾಗಿ ಗುರುತಿಸಿ ಅವರ ಮಾನ ಹಾನಿ ಮಾಡುವ ಕೆಲಸ ಮಾದ್ಯಮಗಳು ಹಿಂದಿನಿಂದಲು ಬಹಳ ವ್ಯವಸ್ಥಿತವಾಗಿ ನಡೆಸುತ್ತಾ ಬಂದಿದೆ, ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಮತ್ತು ಅಮಾಯಕರ ಬದುಕು ದುಸ್ತರ ಮಾಡುವ ಮಾದ್ಯಮಗಳ ಈ ರೀತಿಯ ಸುದ್ದಿ ಬಿತ್ತರಿಸುವಿಕೆ ಆಘಾತಕಾರಿಯಾಗಿದೆ, ದರ್ಮಗುರುಗಳಾಗಿ ಸೌಮ್ಯ ಸ್ವಭಾವ ಹೊಂದಿದ ಬೆಳ್ತಂಗಡಿಯ ರವೂಪ್ ಅವರ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿರುವುದು ಖಂಡನೀಯವಾಗಿದೆ, ಮಾದ್ಯಮಗಳು ಆರೋಗ್ಯಪೂರ್ಣ ಸಮಾಜದ ಕಟ್ಟುವಲ್ಲಿ ಕೊಡುಗೆ ನೀಡಬಲ್ಲುದು ಎಂದು ವೆಲ್ಪೇರ್ ಪಾರ್ಟಿ ಬಲವಾಗಿ ನಂಬುತ್ತದೆ. ಆ ಕಾರಣಕ್ಕಾಗಿ ದ್ವೇಷದ ಸುಳ್ಳು ಸುದ್ದಿಯನ್ನು ಬಿತ್ತರಿಸಿದ ಮಾದ್ಯಮಗಳಿಗೆ ಸರಕಾರ ಎಚ್ಚರಿಕೆ ಮತ್ತು ಕಠಿಣ ಕಾನೂನು ರೂಪಿಸಬೇಕೆಂದು ವೆಲ್ಪೇರ್ ಪಾರ್ಟಿ ಆಗ್ರಹಿಸಿದೆ.

ಮಾದ್ಯಮಗಳು ಪೂರ್ವಾಗ್ರಹ ಪೀಡಿತರಾಗಿ ಸುದ್ದಿಗಳನ್ನು ಪ್ರಕಟಿಸಿ ಅಮಾಯಕರನ್ನು ಬಲಿಪಶು ಮಾಡುತ್ತದೆ. ಕನಿಷ್ಟ ಪೋಲೀಸ್ ಇಲಾಖೆಯೊಂದಿಗೆ ಮಾಹಿತಿ ಪಡೆಯುವ ಕೆಲಸ ಕೂಡಾ ಕೆಲವೊಮ್ಮೆ ಮಾಡುವುದಿಲ್ಲ, ತನ್ನ ಟಿ ಆರ್ ಪಿ ಹೆಚ್ಚಿಸಲು ಇಂತಹ ವಾರ್ತೆಗಳನ್ನು ಪ್ರಕಟಿಸಿ ಜನರನ್ನು ಗೊಂದಲಕ್ಕೀಡು ಮಾಡುತ್ತದೆ. ಇದು ಅತ್ಯಂತ ಅಪಾಯಕಾರಿ, ನೆರೆ ಪರಿಹಾರ ನೀಡದ ಕೇಂದ್ರ ಸರಕಾರದ ವಿರುದ್ದದ ಜನರ ಕೋಪವನ್ನು ತಣ್ಣಗಾಗಿಸಲು ಮತ್ತು ಗಮನ‌ ಬೇರೆಡೆ ಸೆಳೆಯಲು ಇಂತಹ ವಾರ್ತೆ ಹರಿಯಬಿಡುವ ಸಾದ್ಯತೆ ಕೂಡಾ ತಳ್ಳಿಹಾಕುವಂತಿಲ್ಲ, ಈ ಎಲ್ಲಾ ವಿಷಯಗಳನ್ನು ಗಂಭಿರವಾಗಿ ಪರಿಗಣಿಸಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ವೆಲ್ಫೇರ್ ಪಾರ್ಟಿಯು, ರವೂಪ್ ರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ವೆಲ್ಪೇರ್ ಪಾರ್ಟಿ ಹೋರಾಡಲಿದೆ ಎಂದು ವೆಲ್ಪೇರ್ ಪಾರ್ಟಿ ಪುತ್ತೂರು ವಲಯದ ಅಧ್ಯಕ್ಷರಾದ ಇಬ್ರಾಹಿಂ ಅಜ್ಜಾವರ ಮಾದ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.