ಕೇರಳದ ಮೂರು ಮತಗಟ್ಟೆಗಳಲ್ಲಿ ಮರು ಮತದಾನ

0
25

ತಿರುವನಂತಪುರಂ,ಮೇ 17: ಕೇರಳದ ಮೂರು ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ. ಧರ್ಮಡದ ಎರಡು ಮತಗಟ್ಟೆಗಳು ಮತ್ತು ತೃಕ್ಕರಿಪ್ಪುರದ ಒಂದು ಬೂತ್‍ಗಳಲ್ಲಿ ಮರು ಮತದಾನ ನಡಯುವುದು. ನಾಲ್ಕು ಮತಗಟ್ಟೆಗಳಿಗೆ ಮರು ಮತದಾನ ನಡೆಸಬೇಕೆಂದು ಆಯೋಗ ಗುರುವಾರ ತೀರ್ಮಾನಿಸಿತ್ತು. ಆದಿತ್ಯವಾರ ಎಲ್ಲ ಮತಗಟ್ಟೆಗಳಲ್ಲಿ ಮರು ಮತದಾನ ಇರಲಿದೆ. ತೃಕ್ಕರಿಪುರದ 48ನೇ ನಂಬರ್ ಮತಗಟ್ಟೆ, ಧರ್ಮಡದ 52 ಮತ್ತು 53ನೆ ಮತಗಟ್ಟೆಗಳಲ್ಲಿ ಮರು ಮತದಾನ ನಡೆಯುವುದು. ಕಾಸರಗೋಡು ಜಿಲ್ಲೆಯಲ್ಲಿ ಮೂರು ಮತಗಟ್ಟೆ, ಕಣ್ಣೂರು ಜಿಲ್ಲೆಯ ಒಂದು ಮತಗಟ್ಟೆಗೆ ಮರು ಮತದಾನ ಆಗಲಿದೆ. ಕಾಸರಗೋಡಿನ ಕಲ್ಯಾಶ್ಶೇರಿ ಮತಗಟ್ಟೆ ನಂಬರ್ 19, ಪಿಲಾತ್ತರ,ಬೂತ್ ನಂಬರ್ 69. ಪುದಿಯಂಗಾಡಿ ಜಮಾಅತ್ ಎಚ್‍ಎಸ್ ಉತ್ತರ ಬ್ಲಾಕ್, ಕಣ್ಣೂರಿನ ತಳಿಪ್ಪರಂಬ್ ಮತಗಟ್ಟೆ ನಂಬರ್166 ಪಾಂಬುರ್ತಿ ಮಾಪ್ಪಿಳ್ಳ ಎಯುಪಿಎಸ್‍ಗಳಲ್ಲಿ ಮರು ಮತದಾನ ನಡೆಯಲಿದೆ.

LEAVE A REPLY

Please enter your comment!
Please enter your name here