ಕುರ್‍ಆನ್ ಓದುವಾಗ ಗಮನಿಸಬೇಕಾದದ್ದು

0
626

ಕೆ.ಸಿ. ಜಲೀಲ್ ಪಿ.

ಪವಿತ್ರ ಕುರ್‍ಆನನ್ನು ಅರ್ಥಸಹಿತ ಓದ ಬೇಕೆಂಬ ವಿಚಾರ ಈಗ ಹೆಚ್ಚಿನ ಮುಸ್ಲಿಮರಿಗೆ ಮನವರಿಕೆಯಾಗಿದೆ. ಕುರ್‍ಆನ್ ಅನ್ನು ಅನುವಾದಿ ಸುವುದು ತಪ್ಪು ಎಂಬ ವಾದ ಈಗ ಕೇಳಿಬರುವು ದಿಲ್ಲ. ಮಾತ್ರವಲ್ಲ, ಅಂತಹ ವಾದಗಳನ್ನು ಮಾಡುತ್ತಿದ್ದವರು ಕೂಡಾ ಇಂದು ಕುರ್‍ಆನ್ ಅನುವಾದಿಸುತ್ತಿದ್ದಾರೆ. ಕುರ್‍ಆನ್ ಕಲಿಕಾ ತರಗತಿ ಗಳನ್ನು ಕೂಡಾ ಬಹಳ ಮುತುರ್ವರ್ಜಿಯಿಂದ ನಡೆಸಲಾಗುತ್ತಿದೆ.

ಆದರೆ ಸಂಘಟನೆಗಳು ಅದು ಅವರ ಸಂಘ ಟನೆಯ ಕಾರ್ಯಕ್ರಮಗಳು ಎಂಬ ರೀತಿಯಲ್ಲಿ ಕುರ್‍ಆನ್ ಕಲಿಕೆಯನ್ನು ಮಾಡುವಾಗ ಉಂಟಾ ಗುವ ಗೊಂದಲಗಳನ್ನು ಅವಗಣಿಸಲು ಸಾಧ್ಯವಿಲ್ಲ. ಸಂಘಟನಾ ಪಕ್ಷಪಾತದ ಕಾರಣ ಯಾರಾದರೂ ಕುರ್‍ಆನನ್ನು ದುವ್ರ್ಯಾಖ್ಯಾನ ನಡೆಸುತ್ತಾರೋ? ಆದ್ದರಿಂದ ಕುರ್‍ಆನ್ ಎಂದರೇನು? ಅದನ್ನು ಹೇಗೆ ಕಲಿಯಬೇಕು? ಎಂಬ ವಿಷಯದಲ್ಲಿ ಸ್ಪಷ್ಟವಾದ ತಿಳುವಳಿಕೆ ಅಗತ್ಯ.

ಹಾಗಾದರೆ ಕುರ್‍ಆನ್ ಎಂದರೇನು? ಅದು ಅಲ್ಲಾಹನ ವಚನ. ಅದರ ಮುಂದೆ ಇತರೆಲ್ಲ ವಚನಗಳು ಅಪ್ರಸಕ್ತವಾಗಿದೆ. ನಮ್ಮ ಸಂಘಟನೆಯ ಮಹೋನ್ನತ ನಾಯಕನ ದೃಷ್ಟಿಕೋನಗಳಿಗೆ ಅದರ ಮುಂದೆ ಯಾವುದೇ ಪ್ರಸಕ್ತಿಯೂ ಇಲ್ಲ. ಅದನ್ನು ಅಲ್ಲಾಹನು ಸ್ಪಷ್ಟ ಪಡಿಸುತ್ತಾನೆ. ನಿಶ್ಚಯ ವಾಗಿಯೂ ಇದು ಸನ್ಮಾರ್ಗವಾಗಿದೆ. ನೀವದನ್ನು ಅನುಸರಿಸಿರಿ. ಇತರ ಮಾರ್ಗವನ್ನು ಹಿಂಬಾಲಿಸ ಬೇಡಿ. (ಕುರ್‍ಆನ್ ಅಲ್ಲಾಹನು ಮನುಷ್ಯನಿಗೆ ನೀಡಿರುವ ಸನ್ಮಾರ್ಗವನ್ನು ಅತ್ಯಂತ ಜಾಗರೂಕತೆ ಯಿಂದ ಪಾ ಲಿಸಬೇಕು. ನನ್ನ ಅಥವಾ ಇತರರ ದೃಷ್ಟಿಕೋನಗಳಿಗೆ ಅದರಲ್ಲಿ ಸ್ವಲ್ಪವೂ ಸ್ಥಾನವಿಲ್ಲ. ಆದ್ದರಿಂದಲೇ ಅಂತ್ಯದಿನದ ವರೆಗೆ ಸನ್ಮಾರ್ಗವಾಗಿ, ಸನ್ಮಾರ್ಗವನ್ನು ತೋರುವ ದಾರಿದೀಪವಾಗಿ ಕುರ್‍ಆನನನ್ನು ಸುರಕ್ಷಿತವಾಗಿ ಉಳಿಸಲಾಗಿದೆ. ಮರಣಾನಂತರ ಎದುರಿಸುವ ಪ್ರಥಮ ಪ್ರಶ್ನೆಯೂ ಕುರ್‍ಆನನ್ನು ಅನುಸರಿಸಿದ್ದೀರಾ ಎಂಬುದಾಗಿದೆ.

ಆದ್ದರಿಂದ ಯಾವ ಸಂಘಟನೆಯು ಕುರ್‍ಆನ್ ತರಗತಿ ಏರ್ಪಡಿಸಿದರೂ ಅದರ ಮುಖ್ಯ ಉದ್ದೇಶ ಇದೇ ಆಗಿರಬೇಕು. ಆಗ ಅರ್ಥ ತಿಳಿಯಬೇಕು. ಅದರ ಆಶಯಗಳನ್ನು ಅಳವಡಿಸಿ ಕೊಳ್ಳಬೇಕು. ಬಳಿಕ ಆಶಯವನ್ನು ಮನನ ಮಾಡಿ, ಸ್ವಂತ ಜೀವನ ಹಾಗೂ ಸಮಾಜದ ಜೀವನ ಕುರ್‍ಆನ್‍ಗೆ ವಿಧೇಯವಾಗಿದೆಯೇ ಎಂದು ಪರಿಶೀಲಿಸಬೇಕು. ನಮ್ಮ ವಿಶ್ವಾಸ ಹಾಗೂ ಕರ್ಮಗಳು ಕುರ್‍ಆನ್‍ಗೆ ವಿಧೇಯವಾಗಿರ ಬೇಕು. ನಮ್ಮ ವಿಶ್ವಾಸ ಹಾಗೂ ಕರ್ಮಗಳು ಕುರ್‍ಆನ್‍ನಂತೆ ಇಲ್ಲದೆ ಇರುವುದು ಅರಿವಿಗೆ ಬಂದರೆ ಕುರ್‍ಆನ್ ಹಾಗೂ ಸುನ್ನತ್‍ಗೆ ವಿಧೇಯಗೊಳಿಸಬೇಕು.

ಇದನ್ನೇ ಸಂಘಟನೆಗಳು ಹಾಗೂ ಸಮಾಜವೂ ಮಾಡಬೇಕು. ಕುರ್‍ಆನ್‍ನಲ್ಲಿರುವುದು ಏನೆಂದು ಕಲಿತು ಸಂಘಟನೆಯನ್ನು ಅದೇ ರೀತಿ ಬದಲಾ ಯಿಸಬೇಕು ಎಂದಲ್ಲದೇ ನಮ್ಮ ಸಂಘಟನೆಯು ಮೊದಲೇ ತೀರ್ಮಾನಿಸಿದಂತೆ ಕುರ್‍ಆನನ್ನು ವ್ಯಾಖ್ಯಾ ನಿಸುವುದು ಎಂಬುದು ಮಹಾ ಪಾಪ ವಾಗಿದೆ. ಪೂರ್ವ ಗ್ರಂಥಗಳ ಅನುಯಾಯಿಗಳು ದಾರಿತಪ್ಪಿದ್ದು ಹಾಗೂ ಶಪಿಸಲ್ಪಟ್ಟ ಕಾರಣವು ಅಲ್ಲಾಹನ ಗ್ರಂಥದೊಂದಿಗೆ ಅವರು ಮಾಡಿದ ಅಕ್ರಮವಾಗಿತ್ತು. ಪ್ರವಾದಿಗಳು ಹಾಗೂ ಸಹಾಬಿಗಳು ನಮಗೆ ಮಾದರಿ. ವಿಶ್ವಾಸಿಗಳು ಅವರನ್ನೇ ಅನುಸರಿಸ ಬೇಕು. ಅವರು ಯಾವುದೇ ಪೂರ್ವಾಗ್ರಹ ವಿಲ್ಲದೆ ಕುರ್‍ಆನನ್ನು ಅಂಗೀಕರಿಸಿದ್ದರು. ಅವರು ಕುರ್‍ಆನ್‍ನ ಆಧಾರದಲ್ಲೇ ಸಂಘಟಿತರಾಗಿದ್ದರು.

ಚರಿತ್ರೆಯತ್ತ ದೃಷ್ಟಿದಾಯಿಸಿದಾಗ:

ಪ್ರವಾದಿ(ಸ)ರು ತಮಗೆ ಅವತೀರ್ಣಗೊಳ್ಳುತ್ತಿದ್ದ ಕುರ್‍ಆನ್ ಸೂಕ್ತಗಳನ್ನು ಆಯಾಯ ಸಂದರ್ಭದಲ್ಲಿ ಓದಿ ಕೇಳಿಸುತ್ತಿದ್ದರು. ಅದನ್ನು ತನ್ನ ಶತ್ರುಗಳಿಗೂ ತಲುಪಿಸುತ್ತಿದ್ದರು. ಪ್ರವಾದಿ(ಸ) ಹಾಗೂ ಅನುಯಾಯಿಗಳು ಅದನ್ನು ಅನುಸರಿಸುತ್ತಿದ್ದರು. ಹೀಗೆ ಹೊಸ ಹೊಸ ನಿಯಮಗಳಂತೆ ಅವರ ಜೀವನದಲ್ಲೂ ಮಾರ್ಪಾಡುಂಟಾಗುತ್ತಿತ್ತು. ಕುರ್‍ಆನ್‍ನಿಂದ ಹೊಸ ನಾಗರಿಕ ಕಾನೂನುಗಳು ಅರಿವಿನ ಕೋಶಗಳು ಬೆಳೆದು ಬಂತು. ಮುಸ್ಲಿಮರ ಅಧೀನದಲ್ಲಿರುವ ದೇಶಗಳಲ್ಲಿ ಕುರ್‍ಆನ್‍ನಿಂದ ಮೂಡಿ ಬಂದ ಶೈಕ್ಷಣಿಕ ಶಾಸ್ತ್ರಗಳು ನಾಗರಿಕತೆಯ ಬೆಳವಣಿಗೆಗೆ ಕಾರಣವಾಯಿತು. ಯುರೋಪ್‍ನ ಹೆಬ್ಬಾಗಿಲು ಎಂದು ಕರೆಯಲ್ಪಡುವ ಸ್ಪೇನ್ ಇಸ್ಲಾಮ್‍ನ ವಶಕ್ಕೆ ಬಂದಾಗ ಅದರ ಅತ್ಯುತ್ತಮ ಉದಾಹರಣೆಗಳು ಗೋಚರಿಸಿತು.

ಕುರ್‍ಆನ್ ಪಾರಾಯಣವು ಫಿಕ್ಹ್ ಅಥವಾ ಇತರ ಸಂಕುಚಿತ ವಿಷಯಗಳಿಗೆ ಸೀಮಿತ ಗೊಂಡಾಗ ಈ ಮಹತ್ತರವಾದ ಮಾದರಿಗಳಿಗೆ ಮುಸುಕು ಕವಿಯಿತು. ವಶಾಹತುಶಾಹಿಗಳ ಮೂಲಕ ಹಾದು ಹೋದ ಮುಸ್ಲಿಮ್ ಸಮೂಹ ಗಳು ಕೇವಲ ಆರಾಧನೆ ಹಾಗೂ ವ್ಯಕ್ತಿ ನಿಯಮಗಳಿಗೆ ಕುರ್‍ಆನನ್ನು ಸೀಮಿತಗೊಳಿಸಿತು. ಕುರ್‍ಆನ್ ಆಶಯಗಳನ್ನು ಅರಿಯದೆ ಕೇವಲ ಪುಣ್ಯ ದೊರೆಯಲು ಓದುವ ಗ್ರಂಥವಾಗಿ ಬದ ಲಾಯಿತು. ಮದ್ರಸಾ ಶಿಕ್ಷಣಕ್ಕೆ ಮಾತ್ರ ಕುರ್‍ಆನ್ ಸೀಮಿತವಾಯಿತು.
ಅರೇಭಿಯಾದ ನಾಡುಗಳಲ್ಲಿ ಉದಿಸಿ ಬಂದ ತೌಹೀದ್‍ನ ಕಿರಣಗಳು ನಮ್ಮಲ್ಲಿಗೆ ಬಂದ ಬಳಿಕ ಈ ರಂಗದಲ್ಲಿ ಚಲನೆ ಉಂಟಾಯಿತು. ಕುರ್‍ಆನ್ ಮತ್ತು ಸುನ್ನತ್ ಇಸ್ಲಾಮ್‍ನ ಮೂಲ ಆಧಾರವೆಂಬ ಯೋಚನೆ ಬಂತು. ಇಸ್ಲಾಹೀ ಸಂಘಟನೆಯು ರೂಪಗೊಂಡ ಬಳಿಕ ವ್ಯಾಪಕವಾಗಿ ಕುರ್‍ಆನ್ ಮತ್ತು ಸುನ್ನತ್ ಆಧಾರ ಪ್ರಮಾಣವೆಂಬುದು ಪ್ರಚಾರ ಪಡೆಯಿತು. ಕುರ್‍ಆನ್ ಅನುವಾದಗಳು ಪ್ರಕಟವಾಯಿತು. ಇಸ್ಲಾಮ್ ಕೇವಲ ಆರಾಧನೆಗಳಿಗೆ ಸೀಮಿತವಾದ ಧರ್ಮವಲ್ಲವೆಂದೂ, ಜೀವನದ ಎಲ್ಲ ರಂಗಗಳಲ್ಲೂ ದಾರಿ ತೋರಿಸುವ ಸಂಪೂರ್ಣ ಜೀವನ ವ್ಯವಸ್ಥೆಯೆಂಬ ಚಿಂತನೆಯೂ ಬೆಳೆದು ಬಂತು. ಅರೆಬಿಕ್ ಕಾಲೇಜುಗಳ ಪಠ್ಯಕ್ರಮದಲ್ಲೂ ಕುರ್‍ಆನ್ ಪಠಣವು ಸ್ಥಾನ ಪಡೆಯಿತು.

ಇನ್ನೊಂದು ಕಡೆಯಲ್ಲಿ `ಸಮಸ್ತ’ ವಿಭಾಗಗಳು ಕುರ್‍ಆನ್‍ನ ಅನುವಾದ ಮಾಡುವುದನ್ನು ತೀವ್ರವಾಗಿ ವಿರೋಧಿಸುತ್ತಿತ್ತು. ಕುರ್‍ಆನ್ ಉನ್ನತ ಗ್ರಂಥವೆಂದೂ, ಅತ್ಯಂತ ಸೂಕ್ಷ್ಮ ಜ್ಞಾನಿಗಳು, ಪಾಂಡಿತ್ಯವಿರುವ ಇಮಾಮರಿಗೆ ಮಾತ್ರ ಅದು ಗ್ರಹಿಸಲು ಸಾಧ್ಯವೆಂದು ಅವರು ವಾದಿಸಿದರು. ಕುರ್‍ಆನನ್ನು ಗ್ರಹಿಸಿದ ಇಮಾಮರುಗಳನ್ನು ಜನಸಾಮಾನ್ಯರು ಹಿಂಬಾಲಿಸಬೇಕೆಂದು ಅವರ ವಾದ. ಮರಣಾನಂತರ ಕಬರ್‍ನಲ್ಲಿ ನೀನು ಯಾವುದನ್ನು ಅನುಸರಿಸಿದ್ದೀಯೆಂದು ದೇವಚರರು ಪ್ರಶ್ನಿಸಿದರೆ ಕುರ್‍ಆನನ್ನು ನಾನು ಅನುಸರಿಸಿ ದ್ದೇನೆಂದು ಹೇಳಬೇಕೆಂದು ಹೇಳಿಕೊಟ್ಟದ್ದಲ್ಲದೆ ಜೀವನದಲ್ಲಿ ಕುರ್‍ಆನನ್ನು ಅನುಸರಿಸಿ ಬದುಕ ಬೇಕೆಂದು ಹೇಳಿರಲಿಲ್ಲ.
ಏನಿದ್ದರೂ ಮುಸ್ಲಿಮ್ ಸಂಘಟನೆಗಳು ನಡೆಸು ತ್ತಿರುವ ಕುರ್‍ಆನ್ ಕಲಿಕಾ ಕೇಂದ್ರಗಳು ಸಂಘಟನಾ ಪಕ್ಷಪಾತವಿಲ್ಲದೆ ಕುರ್‍ಆನನ್ನು ಸ್ವತಂತ್ರವಾಗಿ ಕಲಿಯಲು ಉಪಕಾರವಾದರೆ ನಿಶ್ಚಯವಾಗಿಯೂ ಇದು ಶುಭ ನಿರೀಕ್ಷೆಯಾಗಿದೆ.

ಜಮಾಅತೆ ಇಸ್ಲಾಮೀ ಹಿಂದ್ ಕುರ್‍ಆನ್ ಹಾಗೂ ಸುನ್ನತ್‍ನ ಪ್ರಭಾವದಿಂದ ರೂಪಗೊಂಡ ಸಂಘಟನೆಯಾದುದರಿಂದ ಎಲ್ಲಾ ಅರ್ಥದಲ್ಲೂ ಕುರ್‍ಆನನ್ನು ಪ್ರತಿನಿಧಿಸಲು ಬಾಧ್ಯಸ್ಥವಾಗಿದೆ. ಯಾವುದಾದರೂ ರೀತಿಯಲ್ಲಿ ಕುರ್‍ಆನ್‍ನೊಂದಿಗಿನ ಸಂಘಟನೆಯ ವ್ಯತಿಚಲಿಸುವಿಕೆಯು ಅದರ ಮೂಲದಿಂದಲೇ ವ್ಯತಿಚ ಲಿಸುವಿಕೆಯಾಗಿದೆ. ಕುರ್‍ಆನ್ ಆದರ್ಶವೇ ನಮ್ಮ ಆದರ್ಶವೆಂದೂ ಕುರ್‍ಆನ್ ತೋರಿಸುವ ಗುರಿಯೇ ನಮ್ಮ ಗುರಿ ಯೆಂದೂ, ಧ್ಯೇಯ ಹಾಗೂ ಧೋರಣೆ ಕಾರ್ಯಕ್ರಮಗಳಿಗೆ ಕುರ್‍ಆನ್ ಮತ್ತು ಸುನ್ನತ್ ಮೂಲಾಧಾರವೆಂದೂ ಸ್ಪಷ್ಟಪಡಿಸಿದ ಸಂಘಟನೆಯದು. ಅದರ ಸಂವಿಧಾನವನ್ನು ಕುರ್‍ಆನ್ ಮತ್ತು ಸುನ್ನತ್‍ನಿಂದ ರೂಪಿಸಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತನೂ ಕುರ್‍ಆನ್ ಹಾಗೂ ಸುನ್ನತ್‍ನಂತೆ ಜೀವನದ ಪ್ರತಿಯೊಂದು ರಂಗವನ್ನೂ ಕ್ರಮೀಕರಿಸಬೇಕೆಂದು ಅದರ ಸಂವಿಧಾನ ಸೂಚಿಸುತ್ತದೆ. ಹೀಗಿರುವಾಗ ಪ್ರತಿಯೊಬ್ಬ ಕಾರ್ಯಕರ್ತರು ಕುರ್‍ಆನ್ ಕಲಿಯಲೇ ಬೇಕಾಗುತ್ತದೆ.

ಜಮಾಅತೆ ಇಸ್ಲಾಮಿಯ ಉಗಮವು ಕುರ್‍ಆನ್‍ನಿಂದ ಆದದ್ದು ಆಕಸ್ಮಿಕವೋ ಅಸಹಜವೋ ಅಲ್ಲ.ಇದು ಚರಿತ್ರೆಯ ಪುನರ್ರಚನೆಯಾಗಿದೆ. ಈ ಆಶಯಗಳನ್ನೇ ನೆಚ್ಚಿ ಕೊಂಡಿರುವ ಸಂಘಟನೆಗಳೂ ಇವೆ. ಪ್ರವಾದಿ ಹಾಗೂ ಅನುಯಾಯಿಗಳು ಪ್ರಾಯೋಗಿಕಗೊಳಿಸಿದ ಕುರ್‍ಆನನ್ನು ಪುನರ್ರಚಿಸುವ ಉದ್ದೇಶವು ಅದರದ್ದು. ಹಾಗಾದರೆ ಅದು ಆರಂಭದ ಹಂತದಂತೆ ಕುರ್‍ಆನ್‍ನಿಂದಲೇ ಮೊಳಕೆ ಒಡೆಯಬೇಕಲ್ಲವೇ. ಜಮಾಅತೆ ಇಸ್ಲಾಮೀ ಸ್ಥಾಪಕ ನಾಯಕರಾದ ಅಬುಲ್ ಆಲಾ ಮೌದೂದಿಯವರು `ತರ್ಜುಮಾನುಲ್ ಕುರ್‍ಆನ್’ನ ಮೂಲಕವೇ ರಂಗಪ್ರವೇಶ ಮಾಡಿದರು. ಅದು ಕುರ್‍ಆನ್‍ನೆಡೆಗೆ ಮರಳ ಬೇಕು ಎಂಬ ಆಹ್ವಾನದೊಂದಿಗೆ ಆಗಿತ್ತು. ಕುರ್‍ಆನ್‍ನ ಕುರಿತು ಅವರ ನಿಲುವನ್ನು ವ್ಯಕ್ತಪಡಿಸಲು ಅವರ ಈ ಒಂದು ವಾಕ್ಯವೇ ಸಾಕು: “ಹಲ ವಾರು ಚಿಂತಕರ, ಶಾಸ್ತ್ರಜ್ಞರ ಧಾರಾಳ ಗ್ರಂಥಗಳನ್ನು ಓದಿ, ಮನಸ್ಸಿನಲ್ಲಿ ಒಂದು ಲೈಬ್ರರಿಯನ್ನೇ ತುಂಬಿಕೊಂಡೆ. ಆದರೆ ಕುರ್‍ಆನ್ ಓದಿ ನೋಡಿದಾಗ ಅವರೆಲ್ಲರೂ ಸಣ್ಣ ಮಕ್ಕಳಂತೆ ನನಗೆ ತೋಚಿತು. ಜೀವನ ಕಾಲವಿಡೀ ವ್ಯಯಿಸಿಯೂ ಅವರಿಗೆ ಪರಿಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ಕುರ್‍ಆನ್ ಒಂದೋ ಎರಡೋ ವಾಕ್ಯಗಳಲ್ಲಿ ಪರಿಹಾರ ಸೂಚಿಸಿದೆ. ಕುರ್‍ಆನ್ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿರುವ `ಮಾಸ್ಟರ್ ಕೀ’ ಅಗಿದೆ.”

ಅವರ ತಫ್ಹೀಮುಲ್ ಕುರ್‍ಆನನ್ನು ಆಳವಾಗಿ ಅಧ್ಯಯನ ನಡೆಸಿದರೆ ಅದರ ಮೌಲ್ಯ ವಿಶೇಷತೆ, ಅಗಾಧತೆ, ಸರಳತೆ, ಮಹತ್ವದ ಅರಿವಾಗುತ್ತದೆ. ಕುರ್‍ಆನ್ ಅಲ್ಲದ ಅವರ ರಚನೆಗಳನ್ನು ನೋಡಿದರೂ ಅದರಲ್ಲಿ ಕುರ್‍ಆನ್‍ನ ನೆರಳು ಗೋಚರಿಸುವುದು. ಉದಾಹರಣೆಗೆ ಅವರು ರಚಿಸಿದ `ರಿಸಾಲೆ ದೀನಿಯಾತ್’ (ಇಸ್ಲಾಮ್ ಧರ್ಮ) ಒಂದೇ ಒಂದು ಕುರ್‍ಆನ್ ಸೂಕ್ತವನ್ನು ಅದರಲ್ಲಿ ಉದ್ಧರಿಸಲಾಗಿಲ್ಲ. ಆದರೆ ಎಲ್ಲವೂ ಕುರ್‍ಆನ್ ಎಂದು ಆ ಪುಸ್ತಕವನ್ನು ಅಧ್ಯಯನ ನಡೆಸಿದವರ ಹೃದಯಾಂತರಾಳದ ಮಾತು.

ಇಂದು ಕುರ್‍ಆನ್‍ನ ಅಧ್ಯಯನಕ್ಕೆ ಕುರ್‍ಆನ್ ವ್ಯಾಖ್ಯಾನಗಳು, ಅನುವಾದ ಗಳು, ಸಿಡಿಗಳು ಅನಧಿಕೃತ ಸೌಕರ್ಯಗಳೆಲ್ಲವನ್ನೂ ಜಮಾಅತ್ ಸಿದ್ಧಪಡಿಸಿದೆ. ಐಚ್ಛಿಕ ನೆಲೆಯಲ್ಲಿ ಜನರು ಇದನ್ನು ಉಪಯೋಗಿಸುತ್ತಲೂ ಇದ್ದಾರೆ. ಆದರೆ ನಿಜವಾದ ಉದ್ದೇಶ ಈಡೇರುತ್ತಿದೆಯೇ? ಎಂಬುದು ಪ್ರಶ್ನಾಕಾರವಾಗಿ ಉಳಿದಿದೆ. ಕುರ್‍ಆನ್ ಅಧ್ಯಯನದ ಹಿಂದಿನ ಮಾದರಿಗಳನ್ನು ಮುಂದಿರಿಸಿಕೊಂಡು ಅದರ ಚೈತನ್ಯ ಹಾಗೂ ಆವೇಶವನ್ನು ಮರಳಿ ಗಳಿಸಬೇಕಾಗಿದೆ.