ಪಶ್ಚಿಮ ಬಂಗಾಳದಲ್ಲಿ ಸಾರಿಗೆ ಸಚಿವ ರಾಜೀನಾಮೆ; ಬಿಜೆಪಿ ಸೇರ್ಪಡೆ ವದಂತಿ

0
423
  • ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಸುವೇಂದು ಅಧಿಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅದರ ಪ್ರತಿಯನ್ನು ರಾಜ್ಯಪಾಲ ಜಗ್‍ದೀಪ್ ಧನ್‍ಕರ್‌ರಿಗೆ ಕಳುಹಿಸಿದ್ದಾರೆ.

ಕೇವಲ ಶಾಸಕರಾಗಿ ಉಳಿದಿರುವ ಅಧಿಕಾರಿ ಪಾರ್ಟಿಗೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿಗೆ ಸೇರ್ಪಡೆಯಾಗುವರೆಂಬ ದಟ್ಟ ವದಂತಿಯಿದೆ. ಮುಂದಿನ ವರ್ಷ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳದ ನಂದಿ ಗ್ರಾಮದಿಂದ ವಿಧಾನಸಭೆ ಪ್ರವೇಶಿಸಿದ್ದ ಸುವೇಂದು ಕಳೆದ ಕೆಲವು ತಿಂಗಳಿಂದ ಪಾರ್ಟಿಯೊಂದಿಗೆ ಅಸಹಮತ ವ್ಯಕ್ತಪಡಿಸುತ್ತಾ ಬಂದಿದ್ದರು.

ಪಾರ್ಟಿಯ ಮೀಟಿಂಗ್ ಕ್ಯಾಬಿನೆಟ್ ಸಭೆಗಳಲ್ಲಿ ಪಾಲ್ಗೊಂಡಿರಲಿಲ್ಲ. ತೃಣಮೂಲ ಕಾಂಗ್ರೆಸ್‍ನ ಧ್ವಜ, ಬ್ಯಾನರ್‍ಗಳಿಲ್ಲದೆ ಸ್ವಂತವಾಗಿ ರ್ಯಾಲಿ ಮತ್ತು ಸಭೆಗಳನ್ನು ಮಾಡಿದ್ದರು. ಹಿರಿಯ ನಾಯಕರಾದ ಸುವೇಂದುರನ್ನು ಸಮಾಧಾನ ಪಡಿಸಲು ಪಾರ್ಟಿ ಪ್ರಯತ್ನಿಸಿ ವಿಫಲವಾಗಿದೆ.