ಸುಧಾರಣೆಗಳ ಹೆಚ್ಚಳವೇ ಆರ್ಥಿಕ ಹಿನ್ನಡೆಗೆ ಕಾರಣ: ನೀತಿ ಅಯೋಗದ ಸಿಇಒ ಅಮಿತಾಭ್ ಕಾಂತ್

0
206

ಹೊಸದಿಲ್ಲಿ, ಆ. 3: ಕೇಂದ್ರ ಸರಕಾರದ ಸುಧಾರಣೆಗಳು ಆರ್ಥಿಕ ಹಿನ್ನಡೆಗೆ ಕಾರಣವೆಂದು ನೀತಿ ಅಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದರು. ಜಿಎಸ್‍ಟಿ, ಐಬಿಸಿ, ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ ಮೊದಲಾದ ಹಲವಾರು ಸುಧಾರಣೆಗಳನ್ನು ಕೇಂದ್ರ ಸರಕಾರ ತಂದಿದೆ. ಇದು ಅರ್ಥವ್ಯವಸ್ಥೆಯನ್ನು ಹಿಂತಳ್ಳಿದೆ ಎಂದು ಅಮಿತಾಭ್ ಕಾಂತ್ ಹೇಳಿದರು. ಆಯಿಲ್ ಆಂಡ್ ಗ್ಯಾಸ್, ಗಣಿಗಾರಿಕೆ, ಕಲ್ಲಿದ್ದಲು ಮೊದಲಾದ ಕ್ಷೇತ್ರಗಳಲ್ಲಿ ಇನ್ನು ಸುಧಾರಣೆಯನ್ನು ನಿರೀಕ್ಷಿಸುತ್ತೇನೆ. ಈಗ ಇರುವ ಸಮಸ್ಯೆಗಳನ್ನು ನಿಭಾಯಿಸಲು ಹಣಕಾಸು ಸಂಸ್ಥೆಗಳಿಗೆ ಹಣ ಲಭ್ಯಗೊಳಿಸಬೇಕು. ಇದಲ್ಲದೆ ಖಾಸಗಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಬೇಕು. ಹಲವು ಕ್ಷೇತ್ರಗಳ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದು ಅವರು ಹೇಳಿದರು.

ಗ್ಯಾಸ್ ಗ್ರಿಡ್, ಪೈಪ್‍ಲೈನ್, ಟ್ರಾನ್ಸ್‍ಮಿಶನ್ ಲೈನ್‍ಗಳನ್ನು ಖಾಸಗಿ ವ್ಯವಸ್ಥೇಗೆ ಕೊಡುವುದು ಉತ್ತಮ. ಹೆಚ್ಚು ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ಮಾಡಬೇಕೆಂದು ಅವರು ಆಗ್ರಹಿಸಿದರು.