ಅಲಿಘರ್ ಮುಸ್ಲಿಂ ಯೂನಿವರ್ಸಿಟಿಯಿಂದ ‘ಮುಸ್ಲಿಂ’ ಹೆಸರನ್ನು ಕಿತ್ತುಹಾಕಿ: ಬಿಜೆಪಿ ಸಂಸದ

0
657

ಅಲಿಘರ್ ಮುಸ್ಲಿಂ ಯೂನಿವರ್ಸಿಟಿಯ ಮುಸ್ಲಿಂ ಹೆಸರು ಕಿರಿ ಕಿರಿ ಅನ್ನಿಸುತ್ತಿದ್ದು ಅದರಿಂದ ಮುಸ್ಲಿಂ ಹೆಸರನ್ನು ಕಿತ್ತುಹಾಕಿ ಕೇವಲ ‘ಅಲಿಘರ್ ಯುನಿವರ್ಸಿಟಿ’ ಎಂದು ಬದಲಾಯಿಸಬೇಕೆಂದು ಉತ್ತರ ಪ್ರದೇಶದ ಅಲಿಘರ್ ಕ್ಷೇತ್ರದ ಬಿಜೆಪಿ ಸಂಸದ ಸತೀಶ್ ಗೌತಮ್ ಸರಕಾರವನ್ನು ಒತ್ತಾಯಿಸಿದ್ದಾರೆ.

‘ಮುಸ್ಲಿಂ’ ಎಂಬ ಪದ ದೊಡ್ಡದೊಂದು ಜನವಿಭಾಗದ ನೆಮ್ಮದಿಗೆ ಭಂಗತರುತ್ತಿದೆ. ಈ ಯುನಿವೆರ್ಸಿಟಿಯು ಮುಸ್ಲಿಂ ಪರ ಮನಸ್ತಿಯವರಿಂದ ನಡೆಸಲ್ಪಡುತ್ತಿದೆ ಮತ್ತು ಇದು ಅಲ್ಲಿನ ಪ್ರತಿ ಚಟುವಟಿಕೆಗಳೂ ಇದನ್ನು ಸಾಬೀತುಪಡಿಸುತ್ತಿವೆ. ಅಲ್ಲಿ ಈದ್ ಗೆ ರಜೆ ಇದೆ, ಆದರೆ, ಹಿಂದೂಗಳ ದೊಡ್ಡ ಹಬ್ಬವಾದ ದೀಪಾವಳಿಗೆ ರಜೆ ಇಲ್ಲ. ಮುಸ್ಲಿಂ ವಿದ್ಯಾರ್ಥಿಗಳಿಗೆ ಕಾಂಪಾಸ್ ನಲ್ಲಿ ನಮಾಜ್ ಮಾಡಲು ಅಲ್ಲಿ ಅನುಮತಿಯಿದೆ. ಆದರೆ, ಕಾಂಪಸ್ ನಲ್ಲಿ ದೇವಾಲಯ ಇಲ್ಲ. ನಿಜವಾಗಿಯೂ ಅವರು ಜಾತ್ಯತೀತರು ಎಂದಾದರೆ, ಕ್ಯಾಂಪಸ್ ನ ಒಳಗೆ ದೇವಾಲಯ, ಗುರುದ್ವಾರ ಮತ್ತು ಚರ್ಚ್ ಗಳನ್ನು ಸ್ಥಾಪಿಸಬೇಕಿತ್ತು ಎಂದವರು ಹೇಳಿದ್ದಾರೆ.

ಅದೇವೇಳೆ, “ಬನಾರಸ್ ಹಿಂದೂ ಯುನಿವೆರ್ಸಿಟಿಯ ಹೆಸರನ್ನೂ ಬದಲಿಸಬೇಕೇ?” ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ಭಾರತವು ಹಿಂದೂ ರಾಷ್ಟ್ರವಾಗಿದ್ದು, ಹಿಂದೂ ಯುನಿವರ್ಸಿಟಿಯ ಹೆಸರನ್ನು ಬದಲಿಸಬೇಕಾದ ಅಗತ್ಯವಿಲ್ಲ” ಎಂದರು.