10 ರಲ್ಲಿ 9 ಮಂದಿ ರಿಪಬ್ಲಿಕನ್ ಸದಸ್ಯರಿಗೆ ಟ್ರಂಪ್‌ ಸೋಲನ್ನು ಒಪ್ಪಿಕೊಳ್ಳಲು ಮನಸ್ಸಿಲ್ಲ!

0
138

ಸನ್ಮಾರ್ಗ ವಾರ್ತೆ

ಜಾರ್ಜಿಯ,ಡಿ.8: ನವೆಂಬರಿನಲ್ಲಿ ನಡೆದ ಚುನಾವಣೆಯಲ್ಲಿ ಈವರೆಗೂ ಸೋಲು ಒಪ್ಪಿಕೊಳ್ಳದ ಟ್ರಂಪ್‍ರ ನಿಲುವನ್ನು ಬಹುವಂಶ ರಿಪಬ್ಲಿಕನ್ ಪಾರ್ಟಿಯ ಅಮೆರಿಕನ್ ಕಾಂಗ್ರೆಸ್ ಸದಸ್ಯರು ಬೆಂಬಲಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. 249 ಮಂದಿಯಲ್ಲಿ ಕೇವಲ 25 ಮಂದಿ ಮಾತ್ರ ಬೈಡನ್ ವಿಜಯವನ್ನು ಸಮ್ಮತಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಸದಸ್ಯರು ಸಮೀಕ್ಷೆಗೆ ಅಸಹಕಾರ ತೋರಿಸಿದ್ದು ಇಬ್ಬರು ಟ್ರಂಪ್ ಗೆದ್ದಿದ್ದಾರೆ ಎಂದು ಹೇಳಿದ್ದಾರೆ. ಜಾರ್ಜಿಯದಲ್ಲಿ ನಿರ್ಣಾಯಕ ಅಮೆರಿಕದ ಸೆನೆಟ್ ರನ್ ಆಫ್ ಚುನಾವಣೆಯಲ್ಲಿ ಟ್ರಂಪ್‍ರ ನಿಲುವು ಚುನಾವಣೆಗೆ ಹೇಗೆ ಬಾಧಕವಾಗಬಹುದು ಎಂದು ರಿಪಬ್ಲಿಕನ್ ಪಾರ್ಟಿಯಲ್ಲಿ ಹೆದರಿಕೆ ಇದೆ. ಇಲ್ಲಿ ರಿಪಬ್ಲಿಕನ್ ಪಾರ್ಟಿಗೆ ಗೆಲುವು ಅನಿವಾರ್ಯವಾಗಿದೆ.

ಅಮೆರಿಕದ ಸೆನೆಟ್‍ನಲ್ಲಿ ಈಗ 50 ರಿಪಬ್ಲಿಕನ್ ಮತ್ತು 48 ಡೆಮಕ್ರಾಟ್‍ಗಳಿದ್ದಾರೆ. ಜಾರ್ಜಿಯಲ್ಲಿ ನಡೆದ ಅಮೆರಿಕ ಸೆನೆಟ್ ಚುನಾವಣೆಯಲ್ಲಿ ಡೆಮಕ್ರಾಟಿಕ್ ಪಾರ್ಟಿ ಗೆದ್ದರೆ ಸೆನೆಟ್‍ನಲ್ಲಿ 50-50 ಬಲಾಬಲವಾಗಲಿದೆ. ಉಪಾಧ್ಯಕ್ಷೆಯ ಮತದಿಂದ ಡೆಮಕ್ರಾಟಿಕರಿಗೆ ಗೆಲುವು ಸಿಗಬಹುದು. ಒಂದು ಸೀಟು ರಿಪಬ್ಲಿಕನ್‌ಗೆ ಹೋದರೆ ಅಮೆರಿಕದ ಸೆನೆಟ್‍ನಲ್ಲಿ ರಿಪಬ್ಲಿಕನ್ ಪಾರ್ಟಿ ಸ್ಪಷ್ಟ ಬಹುಮತ ಗಳಿಸಬಹುದು. ಮೈಕ್ ಪೆನ್ಸ್, ಟ್ರಂಪ್ ಇಲ್ಲಿ ದೊಡ್ಡ ಮಟ್ಟದ ಪ್ರಚಾರ ನಡೆಸಿದ್ದಾರೆ. ಮತದಾರರು ಬೆಂಬಲಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.