ರೈತ ಸಮರ: ಉರುಳೀತೇ ಸರಕಾರ?: ಅಮಿತ್ ಶಾರನ್ನು ಭೇಟಿಯಾದ ಹರ್ಯಾಣ ಮುಖ್ಯಮಂತ್ರಿ

0
528

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಕಟ್ಟರ್ ಉಪಮುಖ್ಯಮಂತ್ರಿ ದುಷ್ಯಂತ್ ಸಿಂಗ್ ಚೌಟಾಲ ಕೇಂದ್ರ ಗೃಹ ಸಚಿವ ಅಮಿತ್‍ಶಾರನ್ನು ಭೇಟಿಯಾಗಿದ್ದು, ರೈತ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ ಎಂಬುದಾಗಿ ವರದಿಯಾಗಿದೆ.

ರೈತರ ಹೋರಾಟದ ಮುಖ್ಯ ಕೇಂದ್ರ ಹರ್ಯಾಣವಾಗಿದೆ ಎಂದು ಕಟ್ಟರ್ ಶಾರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು, ಮಿತ್ರ ಪಕ್ಷ ಜೆಜೆಪಿಯ ರಾಜ್ಯ ಅಧ್ಯಕ್ಷರು ಸಮಾಲೋಚನೆ ವೇಳೆ ಇದ್ದರು.

ರೈತ ಹೋರಾಟದಿಂದಾಗಿ ಹರ್ಯಾಣದ ಬಿಜೆಪಿ-ಜೆಜೆಪಿ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎಂದು ವರದಿಯಾಗಿತ್ತು. 2019ರಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಕೇವಲ ಬಹುಮತ ಗಳಿಸಲು ಬಿಜೆಪಿಗೆ ಜೆಜೆಪಿ ಬೆಂಬಲ ನೀಡಿತ್ತು. ಕೃಷಿ ಕ್ಷೇತ್ರದಲ್ಲಿ ಪ್ರಭಾವಿಯಾಗಿರುವ ಜೆಜೆಪಿ ರೈತರ ತಿರುಗೇಟಿಗೆ ಹೆದರಿದೆ. ಕಟ್ಟರ್ ಸರಕಾರದಿಂದ ಬೆಂಬಲ ವಾಪಸು ಪಡೆಯಲು ಜೆಜೆಪಿ ಶಾಸಕರು ಸಿದ್ಧರಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇಂತಹ ವಾರ್ತೆಗಳನ್ನು ಕಟ್ಟರ್ ನಿರಾಕರಿಸಿದ್ದರು. ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಜೆಜೆಪಿ-ಬಿಜೆಪಿ ಸಖ್ಯ ಹಿನ್ನಡೆ ಅನುಭವಿಸಿತ್ತು.