ಬಲಪಂಥೀಯ ಭಯೋತ್ಪಾದನೆ: ವೈಭವ್ ರಾವತ್ ಮನೆಯಲ್ಲೇ ಸಿಕ್ರೇಟ್ ರೂಮ್‌ ಹೊಂದಿದ್ದ!

0
773

ವೈಭವ್ ರಾವತ್ ಬಂಧನದ ಮರುದಿನ ಎಟಿಎಸ್ ಆತನ ಮನೆಗೆ ಮತ್ತೊಮ್ಮೆ ದಾಳಿ ನಡೆಸಿದಾಗ ವೈಭವ್ ರಾವತ್ ತನ್ನ ಮನೆಯಲ್ಲಿಯೇ ಗುಪ್ತ ಕೋಣೆಯೊಂದನ್ನು ಹೊಂದಿದ್ದನೆಂಬುದು ಮಿಡ್ ಡೇ.ಕಾಮ್ ವರದಿ ಮಾಡಿದೆ.

ಭಯೋತ್ಪಾದನಾ ನಿಗ್ರಹ ದಳವು( ಎಟಿಎಸ್) ನಲಸೋಪರದಲ್ಲಿ ಬಂಧಿಸಿದ ಆರೋಪಿ ವೈಭವ್ ರಾವತ್ ಮನೆಯಿಲ್ಲಿರುವ ಗುಪ್ತ ಕೋಣೆಯನ್ನು ಪರಿಶೀಲನೆಗೊಳಪಡಿಸುತ್ತಿದೆ.
ವೈಭವ್ ರಾವತ್ ಬಂಧನದ ಮರುದಿನ ಎಟಿಎಸ್ ಆತನ ಮನೆಗೆ ಮತ್ತೊಮ್ಮೆ ದಾಳಿ ನಡೆಸಿದಾಗ ವೈಭವ್ ರಾವತ್ ತನ್ನ ಮನೆಯಲ್ಲಿಯೇ ಗುಪ್ತ ಕೋಣೆಯೊಂದನ್ನು ಹೊಂದಿದ್ದನೆಂಬುದು ಬಹಿರಂಗವಾಗಿದೆ. ಒಂದು ಲ್ಯಾಪ್‌ಟಾಪ್, ಎರಡು ಸಿಪಿಯು,ನಾಲ್ಕು ಏರ್ ಗನ್ ಗಳು, ಇಪ್ಪತ್ತು ಬಾಕ್ಸ್ ಗಳಲ್ಲಿ ಎರ್ ಗನ್ ಬುಲೆಟ್ಸ್, ಎರಡು ನೋಟ್ ಬುಕ್ಸ್, ಒಂದು ಡೈರಿ, ಒಂದು ಮೊಬೈಲ್ ಫೋನ್ ಸೇರಿದಂತೆ ಮೂರು ಸಿಮ್‌ ಹಾಗೂ ಎರಡು ಪತ್ರಗಳನ್ನು ವಶಕ್ಕೆ ಪಡೆದುಕೊಂಡಿತು.

ಇದಲ್ಲದೇ ವೈಭವ್ ರಾವತ್ ಮನೆಯ ಹತ್ತಿರದಲ್ಲಿಯೇ ಇದ್ದ ಆತನ ಅಂಗಡಿಯಿಂದ 12 ಬಾಂಬ್ ಗಳು, ಎರಡು ಜೆಲಟಿನ್ ಸ್ಟಿಕ್ಸ್, 26 ಗನ್ ಪೌಡರ್ ಬಾಕ್ಸ್ ಗಳು, ಒಂದು ಪೇಪರ್ ನಲ್ಲಿ ಸುತ್ತಿಟ್ಟ‌‌ 150 ಗ್ರಾಂ ವೈಟ್ ಪೌಡರ್, ‘ವಿಷ’ಎಂದು ಬರೆದಿದ್ದ ಒಂದು ಲೇಟರಿನ ಎರಡು ಬಾಟಲಿಗಳು, ಇಪ್ಪತ್ತು ಬಾಕ್ಸ್ ಏರ್ ಗನ್ ಬುಲೆಟ್ಸ್ ಗಳನ್ನು ಎಟಿಎಸ್ ವಶಕ್ಕೆ ಪಡೆದುಕೊಂಡಿತು.

ರಾವತ್ ನನ್ನು ಬಂಧಿಸಿದ ದಿನ‌ ಆತನ ಮನೆಯಲ್ಲಿ ಸಿಕ್ರೇಟ್ ಕೋಣೆಯೊಂದಿದೆ ಎಂಬ ಸುಳಿವು ಅಧಿಕಾರಿಗಳಿಗೆ ತಿಳಿದಿರಲಿಲ್ಲ. ಆದರೆ ರಾವತ್ ನನ್ನು ವಿಚಾರಣೆಗೊಳಪಡಿಸಿದಾಗ ತನ್ನ ಮನೆಯಲ್ಲಿ ಎರಡು ಬೆಡ್‌ರೂಮ್, ಹಾಲ್ ಹಾಗೂ ಅಡುಗೆ ಕೋಣೆ ಇರುವುದಾಗಿ ಹೇಳಿಕೆ ನೀಡಿದ ಮರುದಿನವೇ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು ಈ ಕೋಣೆಯನ್ನು ಉದ್ದೇಶಪೂರ್ವಕವಾಗಿಯೇ ನಿರ್ಮಿಸಲಾಗಿತ್ತೆಂಬುದು ತಿಳಿದು ಬಂದಿದೆ.

ಬಾಹ್ಯ ನೋಟಕ್ಕೆ ರಾವತ್ ಮನೆಯು ಒಂದು ಬೆಡ್ ರೂಮ್ ಮನೆಯಂತೆ ಕಾಣುತ್ತದೆ ಆದರೆ ಇನ್ನೊಂದು ಕೋಣೆಯೂ ಇದೆ ಎಂಬ ಯಾವುದೇ ರೀತಿಯ ಸಂಶಯ ಬಾರದಂತೆ ಗೋಡೆಯನ್ನು ಅಲಂಕರಿಸಲಾಗಿತ್ತು. ಕೇವಲ ಒಂದು ಕೀ ಹೋಲ್ ಬಿಟ್ಟರೆ ಸಿಕ್ರೇಟ್ ಕೋಣೆಗೆ ತಲುಪುವ ಯಾವುದೇ ಕುರುಹುಗಳು ಮನೆಯಲ್ಲಿರಲ್ಲಿಲ್ಲ.
ರಾವತ್ ವಾರದಲ್ಲಿ ಎರಡು ದಿನ ತಾನು ಸದಸ್ಯನಾಗಿರುವ ಬಲಪಂಥೀಯ ಸಂಘದ ಸಭೆಯನ್ನು ಸೇರಿಸುತ್ತಿದ್ದನು. ಈ ಕೋಣೆಯನ್ನು ಸ್ಪೋಟಕಗಳನ್ನು ತಯಾರಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಉಪಯೋಗಿಸಲಾಗುತ್ತಿತ್ತು ಎಂಬುದು ಮನೆಯ ಸಿಕ್ರೇಟ್ ಕೋಣೆಯಿಂದ ಲಭಿಸಿದ ವಸ್ತುಗಳಿಂದಲೇ ತಿಳಿದು ಬಂದಿದೆ.

ವಿಚಾರವಾದಿ ನರೇಂದ್ರ ಧಾಬೋಲ್ಕರ್ ಹಾಗೂ ರಾಜಕಾರಣಿ ಗೋವಿಂದ್ ಪನ್ಸಾರೆ ಹತ್ಯೆಯ ಕುರಿತು ನಡೆಸಲಾದ ತನಿಖೆಗಳಲ್ಲಿ ವೈಭವ್ ರಾವತ್ ಮೇಲೆ ಬಲವಾದ ಸಂಶಯವು ಮೂಡಿಬಂದಿತ್ತು.‌ತದನಂತರ ಎಟಿಎಸ್ ಅಧಿಕಾರಿಗಳು ಸತತ ಆರು ತಿಂಗಳುಗಳ ಕಾಲ ಭಿಕ್ಷುಕರ, ದಾರಿಹೋಕರ, ಚಂಬಾರರ ವೇಷ ಹಾಕಿ ವೈಭವ್ ರಾವತ್ ನ ಚಲನ‌ವಲನಗಳ ಮೇಲೆ ನಿಗಾ ಇರಿಸತೊಡಗಿದರು‌. ಈ ನಡುವೆ ವೈಭವ್ ರಾವತ್, ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಬಲವಾದ ನಂಟನ್ನು ಹೊಂದಿರುವುದನ್ನು ಎಟಿಎಸ್ ಗಮನಿಸಿದ್ದು ವಾರದ ಎರಡು ದಿನ ತನ್ನ ಮನೆಯಲ್ಲಿ ಸಭೆ ಸೇರುವುದನ್ನು ಮತ್ತು ಸಭೆಯಲ್ಲಿ ಭಾಗಿಯಾಗುತ್ತಿರುವವರ ವಿವರಗಳನ್ನು ಕಲೆಹಾಕಿದೆ.