ಮಧ್ಯಪ್ರಾಚ್ಯ ವರದಿಗಳಿಗೆ ಪ್ರಸಿದ್ಧರಾಗಿದ್ದ ಪತ್ರಕರ್ತ ರಾಬರ್ಟ್ ಫಿಸ್ಕ್ ನಿಧನ

0
333

ಸನ್ಮಾರ್ಗ ವಾರ್ತೆ

ಲಂಡನ್,ನ.2: ಮಧ್ಯಪ್ರಾಚ್ಯದ ವರದಿಗಳಿಂದ ಪ್ರಸಿದ್ಧರಾದ ಪತ್ರಕರ್ತ ರಾಬರ್ಟ್ ಫಿಸ್ಕ್(74) ನಿಧನರಾಗಿದ್ದಾರೆ. ದ. ಇಂಡಿಪೆಂಡ್‍ಗಾಗಿ ಕೆಲಸ ಮಾಡಿದ ಅವರ ಮಧ್ಯಪ್ರಾಚ್ಯದ ವರದಿಗಳೆಲ್ಲವೂ ಜಗತ್ತಿನ ಗಮನಸೆಳೆದಿತ್ತು. ವಯೋಸಹಜ ಅಸೌಖ್ಯದಿಂದ ಅವರು ನಿಧನಾಗಿದ್ದಾರೆ.

ಸರಕಾರದ ಅಧಿಕೃತ ಪ್ರಕಟಣೆಗಳನ್ನು ಅವರು ನಿರಂತರ ಪ್ರಶ್ನಿಸುತ್ತಿದ್ದರು.ಸತ್ಯವನ್ನು ಬಹಿರಂಗಪಡಿಸುತ್ತಿದ್ದರು. 1989ರವರೆಗೆ ಅವರು ದಿ ಟೈಮ್ಸ್ ಪತ್ರಕರ್ತನಾಗಿದ್ದರು. ನಂತರ ಇಂಡಿಪೆಂಡೆಂಟ್‍ಗೆ ಸೇರಿದರು. ಡಬ್ಲಿನ್‍ನಲ್ಲಿ ಅವರು ಮೃತಪಡುವವರೆಗೂ ಇಂಡಿಪೆಂಡೆಂಟ್ ವರದಿಗಾರರಾಗಿ ಕೆಲಸ ಮಾಡಿದರು.

ಬಹಳಷ್ಟು ವರ್ಷಗಳಿಂದ ಲೆಬನಾನಿನ ಬೈರೂತ್‍ನಲ್ಲಿ ಫಿಸ್ಕ್ ವಾಸಿಸುತ್ತಿದ್ದರು. ದೇಶದ ಆಂತರಿಕ ಯುದ್ಧ ಕಾಲದಲ್ಲಿ ಅವರ ವರದಿಗಳೆಲ್ಲವೂ ಗಮನಸೆಳೆದಿದ್ದವು. ಪತ್ರಕರ್ತರ ಜೀವಕ್ಕೆ ಬೆದರಿಕೆಯಿದ್ದ ಕಾಲದಲ್ಲಿ ಅವರು ಲೆಬನಾನಿನಲ್ಲಿ ಕೆಲಸ ಮಾಡಿದ್ದಾರೆ.

ಒಸಾಮ ಬಿನ್ ಲಾದೆನ್‍ನನ್ನು ಎರಡು ಬಾರಿ ಸಂದರ್ಶಿಸಿದ್ದರು. ಅಮೆರಿಕ, ಇಂಗ್ಲಂಡ್, ಇರಾಕ್ ಅತಿಕ್ರಮಣ ನಡೆಸಿದ ಕಾಲದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಗಡಿಗಳಿಗೆ ಅವರು ಹೋದರು. ಒಮ್ಮೆ ಅವರು ಅಫ್ಘಾನಿಸ್ತಾನ್ ನಿರಾಶ್ರಿತರ ದಾಳಿಗೂ ಒಳಗಾಗಿದ್ದರು.‌ ಇವರಿಗೆ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ. ಆಮ್ನೆಸ್ಟಿ ಇಂಟರ್‍ನ್ಯಾಶನಲ್‍ನ ಮಾಧ್ಯಮ ಪ್ರಶಸ್ತಿ, ಬ್ರಿಟಿಷ್ ಪ್ರಸ್ ಅವಾರ್ಡ್ ಫಿಸ್ಕ್‍ರಿಗೆ ಲಭಿಸಿದೆ. ಪಿಟಿ ದಿ ನ್ಯಾಶನ್:ಲೆಬನನ್ ಅಟ್‍ ವಾರ್, ದಿ ಗ್ರೇಟ್ ವಾರ್ ಫಾರ್ ಸಿವಿಲೈಝೇಶನ್ , ದಿ ಕಾಂಕ್ವಿಸ್ಟ್ ಆಫ್ ದಿ ಮಿಡಲ್ ಈಸ್ಟ್ ಅವರ ಕೃತಿಗಳು.