ರೋಹಿಂಗ್ಯನ್‍ ನಿರಾಶ್ರಿತರ ಶಿಬಿರ: ಜರ್ಮನಿಯ ಸಹಾಯದಲ್ಲಿ ಮಹಿಳೆ, ಮಕ್ಕಳಿಗೆ ಹೆಲ್ಪ್ ಡೆಸ್ಕ್

0
646

ಢಾಕ, ಫೆ.5: ಕಾಕ್ಸ್ ಬಝಾರ್‍ ನ ರೋಹಿಂಗ್ಯನ್ ನಿರಾಶ್ರಿತರ ಶಿಬಿರದಲ್ಲಿ ಮಹಿಳೆಯರು ಮಕ್ಕಳಿಗಾಗಿ ಹೊಸದಾಗಿ ಹೆಲ್ಪ್ ಡೆಸ್ಕ್ ಆರಂಭಗೊಂಡಿದೆ. ಹೆಲ್ಪ್ ಡೆಸ್ಕ್ ನ ಉದ್ಘಾಟನಾ ಸಮಾರಂಭ ರವಿವಾರ ನಡೆದಿದ್ದು ಮಹಿಳಾ ಮುಖಂಡರು, ಸರಕಾರಿ ಉನ್ನತ ಅಧಿಕಾರಿಗಳು, ವಿಶ್ವಸಂಸ್ಥೆಯ ಸಂಘಟನೆಗಳು, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಏಜೆನ್ಸಿಗಳು ಸಹಿತ ವಿವಿಧ ವಿಭಾಗದ ಎಪ್ಪತ್ತು ಪ್ರತಿನಿಧಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾಕ್ಸ್ ಬಝಾರಿನ ಪೊಲೀಸ್ ಸುಪರಿಟೆಂಡೆಂಟ್ ಎಬಿಎಂ ಮಸೂದ್ ಹುಸೈನ್ ಮತ್ತು ವಿಶ್ವಸಂಸ್ಥೆಯ ಪ್ರತಿನಿಧಿ ಶೋಕೊ ಇಸಿಕವಾರ ಹೆಲ್ಪ್ ಡೆಸ್ಕನ್ನು ಉದ್ಘಾಟಿಸಿದ್ದಾರೆ.

ಜರ್ಮನಿ ಸರಕಾರದ ಸಹಾಯದಲ್ಲಿ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ ಎಂದು ಕಾಕ್ಸ್ ಬಝಾರ್ ಎಸ್ಪಿ ಎಬಿಎಂ ಮಸೂದ್ ಹುಸೈನ್ ತಿಳಿಸಿದರು. ಹೆಲ್ಪ್ ಡೆಸ್ಕನಲ್ಲಿ ತರಬೇತಿ ಪಡೆದ ಮಹಿಳಾ ಪೊಲೀಸಧಿಕಾರಿಗಳು ಕಾರ್ಯವೆಸಗಲಿದ್ದು ಅವರು ರೋಹಿಂಗ್ಯನ್ ಮಹಿಳೆಯರು ಮತ್ತು ಮಕ್ಕಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಹೆಲ್ಪ್ ಡೆಸ್ಕ್ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಕಾರ್ಯವೆಸಗಳಿವೆ ಎಂದು ವಿಶ್ವಸಂಸ್ಥೆಯ ಮಹಿಳಾ ಪ್ರತಿನಿಧಿ ತಿಳಿಸಿದ್ದಾರೆ.

ತರಬೇತಿ ಪಡೆದ ಮತ್ತು ಸಮರ್ಪಣಾ ಭಾವದ ಮಹಿಳಾ ಪೊಲೀಸಧಿಕಾರಿಗಳು ರೋಹಿಗ್ಯನ್ ಮಹಿಳೆಯರು ಮತ್ತು ಮಕ್ಕಳಿಗೆ ಮಾರ್ಗದರ್ಶನ ನೀಡಲು ನೇಮಕಗೊಳಿಸಬೇಕೆಂದು ಬಯಸುತ್ತೇನೆ. ಮಹಿಳಾ ಪೊಲೀಸರು ರಾತ್ರೆಯಲ್ಲಿ ಉಳಿಯಲು ಸಾಧ್ಯವಾಗುವಂತೆ ಸೌಲಭ್ಯವನ್ನು ಮಾಡಿಕೊಡಬೇಕಾಗಿದೆ ಎಂದು ಶೊಕೊ ಇಸಿಕಾವರ ಹೇಳಿದರು.

ಕಳೆದ ವರ್ಷ ಡಿಸೆಂಬರ್ ನಲ್ಲಿ 55 ಮಂದಿ ಮಹಿಳಾ ಪೊಲೀಸರಿಗೆ ವಿಶ್ವಸಂಸ್ಥೆ ವತಿಯಿಂದ ಲಿಂಗಾಧರಿತ ಹಿಂಸೆ, ಗೃಹ ಹಿಂಸೆ ಪ್ರಕರಣಗಳು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳನ್ನು ನಿಭಾಯಿಸುವ ಕುರಿತು ತರಬೇತಿ ನೀಡಲಾಗಿತ್ತು. ತರಬೇತಿ ಪಡೆದ ಕಾಕ್ಸ್ ಬಝಾರ್ ಮಧುಚಾರ ಪೊಲೀಸ್‍ನ ಮಹಿಳಾ ಪೊಲೀಸರನ್ನು ಹೆಲ್ಪ್ ಡೆಸ್ಕ್ ನಲ್ಲಿ ನೇಮಕಗೊಳಿಸಲಾಗಿದೆ.